April 24, 2024

Bhavana Tv

Its Your Channel

ಚುಂಚನಹಳ್ಳಿ ಹಾಗೂ ದೇವಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಾದಿ ಮಾಜಿ ಸಚಿವ ಚಲುವರಾಯಸ್ವಾಮಿ ತೆಕ್ಕೆಗೆ

ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಖಾಸಗಿ ಹೋಟೆಲ್ ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನ ಮಾಜಿ ಸಚಿವ ಚಲುವರಾಯಸ್ವಾಮಿ ರವರು ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಆಯ್ಕೆಯಾದ ಚುಂಚನಹಳ್ಳಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾದ ವಿಜಯಕುಮಾರಿ ದೇವರಾಜ್ ಹಾಗೂ ದೇವಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ರಂಗಮ್ಮ ಚಂದ್ರೇಗೌಡ ರವರನ್ನು ಸನ್ಮಾನಿಸಿ ಗೌರವಿಸಿ ಮತ ನೀಡಿದ ಮತದಾರಿಗೆ ಸೇವೆ, ಗ್ರಾಮದ ಅಭಿವೃದ್ಧಿ ಮಾಡಿ ಎಂದು ತಿಳಿಸಿದರು

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಚಲುವರಾಯಸ್ವಾಮಿ ರವರು ಇಂದು ನಡೆದ ಗ್ರಾಮ ಪಂಚಾಯತಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಜಯಶೀಲರಾಗಿದ್ದಾರೆ ಇದರೊಟ್ಟಿಗೆ ಬೆಳ್ಳೂರಿನ ವ್ಯಾಪ್ತಿಯ ಆರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನವು ಕಾಂಗ್ರೆಸ್ ತೆಕ್ಕೆಯಲ್ಲಿ ಇದೆ ಎಂದರು ಆಯ್ಕೆಯಾದ ಅಧ್ಯಕ್ಷರುಗಳು ಗ್ರಾಮದಲ್ಲಿ ಮತ ನೀಡಿದ ಮತದಾರರು ಮತ್ತು ನಿಮ್ಮ ಗೆಲುವಿಗೆ ಸಹಕಾರ ನೀಡಿದ ಕಾಂಗ್ರೆಸ್ ಪಕ್ಷದ ಸದಸ್ಯರು ಮತ್ತು ಮುಖಂಡರುಗಳಿಗೆ ನನ್ನ ಧನ್ಯವಾದಗಳು ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ತಿಳಿಸಿದರು

ಮುಂದುವರೆದು ಮಾತನಾಡುತ್ತ ನಾಗಮಂಗಲ ಪಟ್ಟಣದ ಸುಭಾಷ್ ನಗರದ ಅಕ್ರಮವಾಗಿ ವಾಸಮಾಡುತ್ತಿರುವ ಬಲಾಢ್ಯರ ಕುರಿತು ಸದನದಲ್ಲಿ ಶಾಸಕ ಸುರೇಶ್ ಗೌಡರು ಚರ್ಚೆ ಮಾಡಿದರು ಈ ಬಗ್ಗೆ ವಿವರಣೆ ನೀಡಿದ ಮಾಜಿ ಸಚಿವ ಚಲುವರಾಯಸ್ವಾಮಿ ರವರು ಅಕ್ರಮವಾಗಿ ವಾಸಿಸುತ್ತಿರುವ ಬಲಾಢ್ಯರು ಯಾರೇ ಇದ್ದರೂ ಕೂಡ ಈ ತಕ್ಷಣ ತೆರವುಗೊಳಿಸಿ ಆದರೆ ಯಾವುದೇ ಸೌಲಭ್ಯಗಳಿಲ್ಲದೆ ವಾಸಮಾಡುತ್ತಿರುವ ಬಡವರಿಗೆ ತೊಂದರೆ ಆಗಬಾರದು ಸಚಿವ ಸೋಮಣ್ಣ ರವರು ಸಮರ್ಥರಿದ್ದಾರೆ ಬಡವರಿಗೆ ನ್ಯಾಯ ಒದಗಿಸುತ್ತಾರೆ ಎಂದರು

ರಾಜ್ಯದಲ್ಲಿ ಚುನಾವಣೆ ನಿಮಿತ್ತ ಬಿಜೆಪಿ ಸರ್ಕಾರವು ರಾಜಕೀಯ ಗಿಮಿಕ್ ಮಾಡುತ್ತಿದೆ ಹಿಜಾಬ್. ಮೇಕೆದಾಟು ಮುಂತಾದ ಭಾವನಾತ್ಮಕ ಸಂಘರ್ಷಗಳನ್ನು ಮಾಡುತ್ತಾ ರಾಜಕೀಯ ಪ್ರತಿಷ್ಠೆಗಾಗಿ ನಡೆದುಕೊಳ್ಳುತ್ತದೆ ಮೇಕೆದಾಟು ಯೋಜನೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನ್ಯಾಯ ಒದಗಿಸಲಿಲ್ಲ ಎಂದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು

ಪತ್ರಿಕಾಗೋಷ್ಠಿಯಲ್ಲಿ ಫೆಡರೇಷನ್ ಸದಸ್ಯ ತಿಮ್ಮರಾಯಿಗೌಡ, ಡಿ.ಸಿ.ಸಿ. ಬ್ಯಾಂಕ್ ರಾಜ್ಯ ನಿರ್ದೇಶಕ ದಿನೇಶ್, ಯುವ ಮುಖಂಡ ಸುನಿಲ್, ಚಾಕೇನಹಳ್ಳಿ ಸುರೇಂದ್ರಕುಮಾರ್, ಮನೋಜ್, ಪುಟ್ಟರಾಜು,ನೆಲ್ಲಿಗೆರೆ ಚೇತನ್.ಮಹೇಶ, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: