April 23, 2024

Bhavana Tv

Its Your Channel

ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಸಂಚರಿಸಿದ ಜನತಾ ಜಲಧಾರೆ ಯಾತ್ರೆ

ನಾಗಮಂಗಲ: ಜೆ.ಡಿ.ಎಸ್ ಪಕ್ಷದ ಬಹು ನಿರೀಕ್ಷಿತ ಜನತಾ ಜಲಧಾರೆ ರಥ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿ ಶಾಸಕ ಸುರೇಶ್ ಗೌಡ ಮತ್ತು ಜೆ.ಡಿ.ಎಸ್. ಮುಖಂಡರು ಜೊತೆಗೂಡಿ ತಾಲೂಕಿನ ವ್ಯಾಪ್ತಿಯಲ್ಲಿ ಸಂಚರಿಸಿ ನಾಗಮಂಗಲ ನದಿಗಳು ಹಾಗೂ ಕೆರೆಗಳ ನೀರನ್ನು ಸಂಗ್ರಹಣೆ ಮಾಡಲಾಯಿತು

ಬಹುನಿರೀಕ್ಷಿತ ಯೋಜನೆ ಆದಂತಹ ಜನತಾ ಜಲಧಾರೆ ಯೋಜನೆಯ ರಥವು ನಾಗಮಂಗಲ ವಿಧಾನಸಭಾ ಕ್ಷೇತ್ರದ ಗಡಿಭಾಗವಾದ ಬೋಗಾದಿ ಗ್ರಾಮಕ್ಕೆ ಆಗಮಿಸಿದ ನಂತರ ತಾಲೂಕು ಜೆ.ಡಿ.ಎಸ್. ಅಧ್ಯಕ್ಷ ಶ್ರೀನಿವಾಸಯ್ಯ ಶಾಸಕರ ಸುರೇಶಗೌಡ ಜೊತೆಗೂಡಿ ಸ್ವೀಕರಿಸಿ ಶಾಸಕ ಸುರೇಶ್ ಗೌಡ ಸಾಹಿತ್ಯದಲ್ಲಿ ತಾಲೂಕಿನ ವ್ಯಾಪ್ತಿಯಲ್ಲಿ ಸಂಚರಿಸಿತು
ಬೋಗಾದಿ ಗ್ರಾಮದಿಂದ ಪ್ರಾರಂಭಿಸಿ .ಕರಿಕ್ಯಾತನಹಳ್ಳಿ. ಆಯಿತನಹಳ್ಳಿ .ತಟ್ಟೆಕೆರೆ .ಸುಖದರೆ. ಬೊಮ್ಮನಾಯಕನಹಳ್ಳಿ. ಎಸ್.ಚನ್ನಾಪುರ. ಹೊನ್ನೇನಹಳ್ಳಿ .ಪಿ ಚಿಟ್ಟನಹಳ್ಳಿ. ಅದ್ದಿಹಳ್ಳಿ. ಹೊನ್ನಾವರ. ಬಿಂಡಿಗನವಿಲೆ .ದೊಡ್ಡ ಬಾಲ. ಮಹಿಗೋನಹಳ್ಳಿ ತುಪ್ಪದ ಮಡು .ಹಾಗೂ ಹಲವಾರು ಹಳ್ಳಿಗಳನ್ನು ಸುತ್ತಿಕೊಂಡು ಸಂಜೆ ನಾಗಮಂಗಲ ಪಟ್ಟಣಕ್ಕೆ ಆಗಮಿಸಿ ಟಿವಿ ಬಡಾವಣೆಯಿಂದ ಸೌಮ್ಯಕೇಶವ ದೇವಾಲಯದ ಪಾದಯಾತ್ರೆ ಮೂಲಕ ಮೆರವಣಿಗೆ ಮಾಡಲಾಯಿತು ಪೂಜೆ ಸಲ್ಲಿಸಿ ಮಂಡ್ಯ ತಾಲೂಕಿಗೆ ಹಸ್ತಾಂತರ ಮಾಡಲಾಯಿತು

ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮದಲ್ಲಿ ನಾಗಮಂಗಲ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಡಿ.ಟಿ. ಶ್ರೀನಿವಾಸಯ್ಯ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷರಾದ ಟಿ ಕೃಷ್ಣಪ್ಪ. ಮನ್ ಮುಲ್ ನಿರ್ದೇಶಕರಾದ ಕೋಟಿ ರವಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ನೆಲ್ಲಿಗೆರೆ ಬಾಲು. ಪುರಸಭೆ ಸದಸ್ಯರಾದ ಶಂಕರಲಿoಗೇಗೌಡ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಚನ್ನಪ್ಪ. ಕೋಳಿ ರಾಮು. ಭಾಗವಹಿಸಿದ್ದರು

ವರದಿ: ಚಂದ್ರಮೌಳಿ ನಾಗಮಂಗಲ

error: