April 25, 2024

Bhavana Tv

Its Your Channel

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ:ಡಾ. ಎ ಟಿ ಶಿವರಾಮು

ನಾಗಮಂಗಲ :-ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಸೌರಮಂಡಲದ ಜೀವಿಗಳನ್ನು ಹೊಂದಿರುವ ವೈಶಿಷ್ಟ್ಯಪೂರ್ಣ ಗ್ರಹವೇ ಭೂಮಿ. ಈ ಭೂಮಂಡಲವನ್ನು ನೈರ್ಮಲ್ಯ ಮುಕ್ತವಾಗಿ ಆರೋಗ್ಯಕರವಾಗಿ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಡಾ. ಎ ಟಿ ಶಿವರಾಮು ನುಡಿದರು.

ಅವರಿಂದು ತಾಲೂಕಿನ ಹದ್ದಿನಕಲ್ಲು ಹನುಮಂತರಾಯ ಸ್ವಾಮಿ ಬೆಟ್ಟದಲ್ಲಿ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಪ್ರಯುಕ್ತ ವಿಶೇಷ ಚಾರಣ, ವಿದ್ಯಾರ್ಥಿಗಳಿಂದ ಕ್ಷೇತ್ರ ಸ್ವಚ್ಛತೆ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದ ಸಾರಥ್ಯ ವಹಿಸಿ ಮಾತನಾಡಿದರು.

ಬಿ. ಇಡಿ ಪ್ರಶಿಕ್ಷಣಾರ್ಥಿಗಳಿಂದ ಹದ್ದಿನಕಲ್ಲು ಆಂಜನೇಯ ಸ್ವಾಮಿ ಬೆಟ್ಟದ ಸುತ್ತ ಒಂದು ಸಾವಿರಕ್ಕಿಂತ ಹೆಚ್ಚು ಬೀಜದುಂಡೆಗಳ ಬಿತ್ತನೆ, ಅರಣ್ಯ ಇಲಾಖೆ ಸಿಬ್ಬಂದಿಯವರೊಡಗೂಡಿ 50 ವಿವಿಧ ಹಣ್ಣು ಮತ್ತು ನೆರಳು ನೀಡುವ ಗಿಡಗಳನ್ನು ನೆಡಲಾಯಿತು.

ಪರಿಸರ ಜಾಗೃತಿ ಜಾಥಾ ಕೈಗೊಂಡು, ಭೈರಸಂದ್ರ ಗ್ರಾಮಸ್ಥರೊಂದಿಗೆ ಪರಿಸರ ಕಾಳಜಿಯ ಬಗೆಗಿನ ಸಂವಾದ ಏರ್ಪಡಿಸಿ, ಪ್ರಶಿಕ್ಷಣಾರ್ಥಿ ಗಳಿಂದ ಬೀದಿನಾಟಕ ಪ್ರದರ್ಶಿಸಿ ಪರಿಸರ ಸ್ವಚ್ಛತೆ ಮತ್ತು ಆರೋಗ್ಯ ರಕ್ಷಣೆಯ ಅರಿವನ್ನು ನೀಡಲಾಯಿತು.

ಗ್ರಾಮದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ವಿ ಪುಟ್ಟಸ್ವಾಮಿ ವಹಿಸಿಮಾತನಾಡಿದರು.

ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರಾದ ಮಂಗಳಮ್ಮ
ಹನುಮಂತಯ್ಯ, ಅರಣ್ಯ ಇಲಾಖೆಯ ಅರಣ್ಯ ರಕ್ಷಕರಾದ ಸತೀಶ್, ನೀಲಪ್ಪ, ಕಳಸೇಗೌಡ, ಸರ್ಕಾರಿ ಶಾಲಾ ಮುಖ್ಯ ಶಿಕ್ಷಕಿ ಕೋಮಲ, ಮುಖಂಡರಾದ ರಾಮೇಗೌಡ, ಹನುಮಂತರಾಯಪ್ಪ, ಕಾಲೇಜಿನ ಎನ್ ಎಸ್ ಎಸ್ ಸಂಯೋಜಕರಾದ ಸಿ ಎಲ್ ಶಿವಣ್ಣ, ಪ್ರಾಧ್ಯಾಪಕರಾದ , ಎ ಎಚ್ ಗೋಪಾಲ್, ವಿ ಲೋಕೇಶ್ ಕುಮಾರ್, ಟಿ ಎನ್ ಶ್ರೀನಿವಾಸ್, ಎಂ ಶೋಭಾ, ವಿದ್ಯಾರ್ಥಿಗಳು ಹಾಗೂ ಬೈರಸಂದ್ರ ಗ್ರಾಮಸ್ಥರು ಹಾಜರಿದ್ದರು.

ವರದಿ:ಡಿ.ಆರ್. ಜಗದೀಶ ನಾಗಮಂಗಲ

error: