December 6, 2022

Bhavana Tv

Its Your Channel

ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ

ನಾಗಮಂಗಲ :- 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ 75ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಮಂತ್ರಿಗಳಾದ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಅದ್ದೂರಿ ಪಾದಯಾತ್ರೆ ನಡೆಯಿತು.

ಅವರಿಂದು ನಾಗಮಂಗಲದಲ್ಲಿ ಟಿಬಿ ಸರ್ಕಲ್ ನಿಂದ ನಾಗಮಂಗಲ ಮಿನಿ ವಿಧಾನಸೌಧದ ವರೆಗೆ ಪಾದಯಾತ್ರೆ ಮಾಡಿ ಆಡಳಿತ ಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧೀಜಿಯವರ ವಿಗ್ರಹಕ್ಕೆ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪ ನಮನ ಮಾಡುವ ಮುಖಾಂತರ ಪಾದಯಾತ್ರೆಯನ್ನು ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ನರೇಂದ್ರಸ್ವಾಮಿ ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕೃಷ್ಣೆಗೌಡ ಸಚಿನ್ ಹಾಗೂ ಕಾಂಗ್ರೆಸ್ ಪದಾಧಿಕಾರಿಗಳು ಹಾಜರಿದ್ದರು.

ಪಾದಯಾತ್ರೆಯ ಉದ್ದಕ್ಕೂ ಮಹಿಳೆಯರಿಂದ ಕುಂಭ ಕಳಸ ಪೂಜಾ ಕುಣಿತ ಕಾರ್ಯಕರ್ತರಲ್ಲಿ ಉತ್ಸಾಹದ ಅಬ್ಬರ ಕಾಣುತ್ತಿತ್ತು.

ವರದಿ:- ಡಿ. ಆರ್ .ಜಗದೀಶ್ ನಾಗಮಂಗಲ

About Post Author

error: