April 19, 2024

Bhavana Tv

Its Your Channel

ಜೂನ್ ೧ರಂದು ಕೇರಳಕ್ಕೆ ಮುಂಗಾರು ಪ್ರವೇಶ : ಮೊದಲವಾರದಲ್ಲಿ ರಾಜ್ಯಕ್ಕೆ ಪ್ರವೇಶ

ನವದೆಹಲಿ: ಮುಂಗಾರು ಮಳೆ ಮಾರುತಗಳು ಜೂನ್ ೧ ರಂದು ಕೇರಳ ಪ್ರವೇಶ ಮಾಡಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬಿಸಮುದ್ರದ ಅಗ್ನೇಯ ಮತ್ತು ಪೂರ್ವ ಮಧ್ಯ ಭಾಗದಲ್ಲಿ ಮೇ ೩೧ರಿಂದ ಜೂನ್ ೪ರವರೆಗೆ ಕಡಿಮೆ ಒತ್ತಡದ ವಾತಾವರಣ ರೂಪುಗೊಳ್ಳುತ್ತದೆ. ಈ ವಾತಾವರಣ ಮುಂಗಾರು ಮಳೆ ಮಾರುತಗಳು ಕೇರಳ ಪ್ರವೇಶಕ್ಕೆ ಅನುಕೂಲವಾಗಿದ್ದು ಜೂನ್ ೧ರಂದು ಕೇರಳಕ್ಕೆ ಪ್ರವೇಶ ಪಡೆಯಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ್ಕೆ ಜೂನ್ ಮೊದಲ ವಾರದಲ್ಲಿ ಮಾರುತಗಳು ಪ್ರವೇಶ ಮಾಡಲಿವೆ. ಮುಂಗಾರು ಮಳೆ ಮಾಲ್ಡಿವ್ಸ್, ಅಂಡಮಾನ್ ಮತ್ತು ನಿಕೋಬರ್, ದಕ್ಷಿಣ ಬಂಗಾಳ ಕೊಲ್ಲಿಯನ್ನು ಆವರಿಸಲಿದೆ. ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಒಮಾನ್ ಕರಾವಳಿಯತ್ತ ಸಾಗಲಿದೆ. ಅಲ್ಲದೆ ಮುಂದಿನ ೪೮ ಗಂಟೆಗಳಲ್ಲಿ ಮುಂಗಾರು ಮಳೆ ಮಾಲ್ಡೀವ್ಸ್ ಪ್ರವೇಶ ಮಾಡಲಿದೆ.
ಕೇರಳದ ಕರಾವಳಿ ಪ್ರದೇಶದ ಮೀನುಗಾರರಿಗೆ ಮೇ ೨೯ರಿಂದ ಜೂ. ೪ರವರೆಗೆ ಮೀನು ಹಿಡಿಯಲು ಸಮುದ್ರಕ್ಕೆ ತೆರಳದಂತೆ ಇಲಾಖೆ ಎಚ್ಚರಿಕೆ ನೀಡಿದೆ.

error: