March 24, 2024

Bhavana Tv

Its Your Channel

ರಣಜಿ ಕ್ರಿಕೆಟ್ ನ ದಿಗ್ಗಜ ಲೆಗ್ ಸ್ಪಿನ್ ಬೌಲರ್ ರಾಜಿಂದರ್ ಗೋಯೆಲ್ ವಿಧಿವಶ.

ಕೋಲ್ಕತ್ತಾ: ಭಾರತದ ಮಾಜಿ ಕ್ರಿಕೆಟಿಗ, ಎಡಗೈ ಸ್ಪಿನ್ನರ್, ರಣಜಿ ಕ್ರಿಕೆಟ್ ನ ದಿಗ್ಗಜ ರಾಜಿಂದರ್ ಗೋಯೆಲ್ ರವಿವಾರ ನಿಧನರಾದರು. 77 ವರ್ಷದ ರಾಜಿಂದರ್ ಬಹಳ ಸಮಯದ ಅನಾರೋಗ್ಯದ ಬಳಿಕ ರವಿವಾರ ಕೋಲ್ಕತ್ತಾದ ನಿವಾಸದಲ್ಲಿ ನಿಧನರಾದರು.

ರಾಜಿಂದರ್ ಗೋಯೆಲ್ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದೇ ಇದ್ದರೂ, ದೇಶೀಯ ವಲಯದಲ್ಲಿ ಉತ್ತಮ ಸ್ಪಿನ್ನರ್ ಆಗಿ ಮೂಡಿಬಂದಿದ್ದರು. ಭಾರತದ ದಿಗ್ಗಜ ಬಿಷನ್ ಸಿಂಗ್ ಬೇಡಿ ಸಮಕಾಲೀನ ಸ್ಪಿನ್ನರ್ ಆಗಿದ್ದ ರಾಜಿಂದರ್ 157 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಹರ್ಯಾಣ ಪರವಾಗಿ ಹೆಚ್ಚಿನ ಕ್ರಿಕೆಟ್ ಆಡಿದ್ದ ರಾಜಿಂದರ್ 750 ವಿಕೆಟ್ ಕಬಳಿಸಿದ್ದರು.

ರಣಜಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ರಾಜಿಂದರ್ ಅವರ ಹೆಸರಲ್ಲಿದೆ. ಅವರು 637 ವಿಕೆಟ್ ಪಡೆದಿದ್ದು, ಎರಡನೇ ಸ್ಥಾನದಲ್ಲಿರುವ ಎಸ್ ವೆಂಕಟರಾಘವನ್ ಗಿಂತ 107 ವಿಕೆಟ್ ಹೆಚ್ಚು ಪಡೆದಿದ್ದಾರೆ.

1957-58ರಲ್ಲಿ ರಣಜಿ ಪದಾರ್ಪಣೆ ಮಾಡಿದ್ದ ಗೋಯಲ್ ತನ್ನ 44 ವಯಸ್ಸಿನಲ್ಲಿ ವಿದಾಯ ಹೇಳಿದ್ದರು. 2017ರಲ್ಲಿ ಬಿಸಿಸಿಐ ರಾಜಿಂದರ್ ಗೋಯೆಲ್ ಅವರಿಗೆ ಸಿಕೆ ನಾಯ್ಡು ಜೀವಮಾನದ ಸಾಧನೆ ಪುರಸ್ಕಾರ ನೀಡಿತ್ತು.

Source: udayavani

error: