April 22, 2021

Bhavana Tv

Its Your Channel

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 43.70 ಲಕ್ಷಕ್ಕೆ ಏರಿಕೆ.

ದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 89 ಸಾವಿರದ 706 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಒಂದು ಸಾವಿರದ 115 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಪ್ರಸ್ತುತ 8 ಲಕ್ಷದ 97 ಸಾವಿರದ 394 ಸಕ್ರಿಯ ಪ್ರಕರಣಗಳಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 43 ಲಕ್ಷದ 70 ಸಾವಿರದ 129ಕ್ಕೆ ಏರಿಕೆಯಾಗಿದೆ. ಈ ಪೈಕಿ 33 ಲಕ್ಷದ 98 ಸಾವಿರದ 845 ಮಂದಿ ವಿವಿಧ ಆಸ್ಪತ್ರೆಗಳಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ ಸೋಂಕಿಗೆ ಇದುವರೆಗೆ 73 ಸಾವಿರದ 890 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ದೇಶದಲ್ಲಿ ನಿನ್ನೆ ಒಂದೇ ದಿನ 11 ಲಕ್ಷದ 54 ಸಾವಿರದ 549 ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದುವರೆಗೂ ಕೊರೊನಾ ಮಾದರಿಗಳ ಪರೀಕ್ಷೆ ಸಂಖ್ಯೆ 5 ಕೋಟಿ 18 ಲಕ್ಷ 4 ಸಾವಿರದ 677ಕ್ಕೆ ಏರಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ-ಐಸಿಎಂಆರ್ ಮಾಹಿತಿ ನೀಡಿದೆ

error: