April 22, 2021

Bhavana Tv

Its Your Channel

ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್ : EMI ಪಾವತಿಗೆ ಮತ್ತೆ ವಿನಾಯಿತಿ ಕೊಟ್ಟ ಸುಪ್ರೀಂ ಕೋರ್ಟ್

ನವದೆಹಲಿ : ಕೊರೊನಾ ವೈರಸ್ ಸೋಂಕಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸುಪ್ರೀಂ ಕೋರ್ಟ್ ರಿಲೀಫ್ ಕೊಟ್ಟಿದೆ. ಬ್ಯಾಂಕ್ ಗ್ರಾಹಕರಿಗೆ ಮತ್ತೆ ಒಂದು ತಿಂಗಳ ಕಾಲ ಇಎಂಐ ಪಾವತಿಗೆ ವಿನಾಯಿತಿ ನೀಡುವಂತೆ ಸೂಚನೆಯನ್ನು ನೀಡಿದೆ.
ಕೊರೊನಾ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಾರರಿಗೆ ಇಎಂಐ ಪಾವತಿಗೆ 6 ತಿಂಗಳ ಕಾಲ ವಿನಾಯಿತಿಯನ್ನು ನೀಡಲಾಗಿತ್ತು. ಹೀಗಾಗಿ ರಿಸರ್ವ್ ಬ್ಯಾಂಕ್ ನೀಡಿದ ಇಎಂಐ ವಿನಾಯಿತಿ ಅವಧಿ ಅಗಸ್ಟ್ 31ಕ್ಕೆ ಅಂತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆಯನ್ನು ನಡೆಸಿರುವ ಸುಪ್ರೀಂ ಕೋರ್ಟ್ ಇಎಂಐ ಪಾವತಿ ವಿನಾಯಿತು ಕುರಿತು ಕ್ರಮಕೈಗೊಳ್ಳುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎರಡು ವರ್ಷಗಳ ಕಾಲ ವಿನಾಯಿತಿಯನ್ನು ನೀಡಬಹುದು ಎಂದು ಹೇಳಿತ್ತು. ಇದೀಗ ವಿಚಾರಣೆಯನ್ನು ನಡೆಸಿರುವ ಸುಪ್ರೀಂ ಕೋರ್ಟ್ ಬ್ಯಾಂಕ್ ಗ್ರಾಹಕರಿಗೆ 1 ತಿಂಗಳ ವಿನಾಯಿತಿಯನ್ನು ನೀಡಿದೆ.
ಮರಟೋರಿಯಂ ಅವಧಿ ಅಗಸ್ಟ್ 31ಕ್ಕೆ ಅಂತ್ಯವಾಗಿದ್ದು, ಇದೀಗ ಮರಟೋರಿಯಂ ಅವಧಿಯನ್ನು ಸಪ್ಟೆಂಬರ್ 28ರ ವರೆಗೆ ವಿಸ್ತರಣೆ ಮಾಡಿದೆ. ಬ್ಯಾಂಕುಗಳು ಒಂದು ತಿಂಗಳ ಕಾಲ ಗ್ರಾಹಕರಿಗೆ ಇಎಂಐ ವಿನಾಯಿತಿ ನೀಡುವಂತೆ ಸೂಚನೆಯನ್ನು ನೀಡಿದೆ. ಸುಪ್ರೀಂ ಕೋರ್ಟ್ ಸೂಚನೆಯಿಂದ ಬ್ಯಾಂಕ್ ಗ್ರಾಹಕರು ಕೊಂಚ ನಿರಾಳರಾಗಿದ್ದಾರೆ

error: