April 19, 2024

Bhavana Tv

Its Your Channel

ಕುಡಿಯುವ ನೀರಿಗಾಗಿ ನಾರಿಯರಿಂದ ಗ್ರಾಮ ಪಂಚಾಯಿತಿ ಮುತ್ತಿಗೆ

ಲಿಂಗಸೂರು : ಸಮೀಪದ ಆನೆಹೊಸೂರು ಗ್ರಾಮದ 4ನೇ ವಾರ್ಡ್ ವಿವಿಧ ಕಾಲೋನಿಗಳಲ್ಲಿ ಕುಡಿಯುವ ನೀರಿನ ಅಭಾವ ದಿಂದಾಗಿ ಗ್ರಾಮದ ಮಹಿಳೆಯರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ. ಕಾಲೋನಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಕೊಡಿ ಎಂದರು. ಸಂಭAದಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ.
ಎಂದು ಕಾಲೊನಿಯ ಮಹಿಳೆಯರು ಪಂಚಾಯಿತಿಯ ಪ್ರಾಂಗಣದಲ್ಲಿ ಖಾಲಿ ಕೊಡ ಹಿಡಿದು ಕುಳಿತು ಪ್ರತಿಭಟನೆ ಮಾಡಿದರು.
ಈಗಲೇ ಇಷ್ಟು ಸಮಸ್ಯೆ ಆದರೇ ಬೇಸಿಗೆ ಸಮಯದಲ್ಲಿ ತುಂಬಾ ತೊಂದರೆ ಅನುಭವಿಸು ವಂತಾಗುತ್ತದೆ.
ಸಂಬAಧ ಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಕೂಡಲೇ ಸಮಸ್ಯೆ ಪರಿಹಾರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗಂಗಮ್ಮ, ಬೀಬಿ, ಮಾನಮ್ಮ, ಹುಸೇನ್ ಬಿ, ಎಲ್ಲಮ್ಮ ಇತರರು ಇದ್ದರು.

error: