April 20, 2024

Bhavana Tv

Its Your Channel

“ರೈತರೇ ಈ ದೇಶದ ಮಾಲಿಕರು, ಭದ್ರ ಕಾಡ ಅಧ್ಯಕ್ಷೆ ಪವಿತ್ರರಾಮಯ್ಯ ಅಭಿಮತ”

ಶಿವಮೊಗ್ಗ; ನಾನು ಅಧಿಕಾರದಲ್ಲಿರುವವರೆಗೆ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲಿಕ್ಕೆ ಬಿಡುವ ಪ್ರಶ್ನೆಯೇ ಇಲ್ಲಾ. ರೈತರು ಎಂತಹ ಸಂದರ್ಭಲ್ಲೂ ದ್ಯೂತಿಗೆಡಬಾರದು, ಪ್ರತಿಯೊಬ್ಬ ರೈತನು ಅಧಿಕಾರಿಗಳನ್ನು ಪ್ರಶ್ನೆ ಮಾಡುವಂತವರಾಗಬೇಕು ಎಂದು ಭದ್ರ ಕಾಡ ಅಧ್ಯಕ್ಷೆ ಶ್ರೀಮತಿ ಪವಿತ್ರರಾಮಯ್ಯ ಅವರು ಹೇಳಿದರು.
ದಾವಣಗೆರೆ ತಾಲೂಕಿನ ಹೊಸ ಕೊಳೆನಹಳ್ಳಿ ಗ್ರಾಮದ ರೈತರು ಶುಕ್ರವಾರ ಆಯೋಜಿಸಿದ್ದ  ಸನ್ಮಾನ ಸಮಾರಂಭ ಕಾರ್ಯಕ್ರಮವನ್ನುಧ್ದೇಶಿಸಿ ಅವರು ಮಾತನಾಡಿದರು.ಕಳೆದ ೨೦ ವರ್ಷಗಳಿಂದ ಇಲ್ಲಿನ ಕೊನೆ ಭಾಗದ ರೈತರಿಗೆ ಬೆಳೆ ಬೆಳೆಯಲು ನೀರು ಸಿಗುತ್ತಿರಲಿಲ್ಲ. ಇಂದು ಕೊನೆ ಭಾಗದ ರೈತರು ಆತ್ಮ ಸಂತೋಷದಿoದ ಬೆಳೆಗಳನ್ನು ಬೆಳೆದು, ರೈತರ ಕುಟುಂಬಗಳು ನೆಮ್ಮದಿಯಿಂದ ಜೀವಿಸುತ್ತಿದ್ದಾರೆ . ಯಾರು ಮಾಡದೇ ಇರುವ ಕಾರ್ಯವನ್ನು  ಅಧಿಕಾರವಹಿಸಿಕೊಂಡ ದಿನದಿಂದ ರೈತರಿಗೆ ಕೆಲಸವನ್ನು ಮಾಡಿದ್ದೇವೆ ಇದು ಹೆಮ್ಮೆ ಪಡುವ ವಿಚಾರ ಎಂದರು. 

ಹಿAದಿನ ದಿನಗಳಲ್ಲಿ ರೈತರು ಭತ್ತ , ಮೆಕ್ಕೆಜೋಳ, ರಾಗಿ ಬೆಳೆಗಳನ್ನು ಬೆಳೆಯುತ್ತಿರುವಾಗ ಜಮೀನುಗಳಿಗೆ ಓಡಾಡಲು ಒಂದು ಸೈಕಲ್ ಸಹ ಇರುತ್ತಿರಲ್ಲಿಲ್ಲಾ, ರೈತನಿಗೆ ಹೆಣ್ಣು ಕೊಡಲು ಹಿಂದುಮುoದು ನೋಡುವಂತ ಪರಿಸ್ಥಿತಿ ಎದುರಾಗಿತ್ತು. 

ಅಡಕೆ ಬೆಳೆಯನ್ನು ರೈತರು ಬೆಳೆಯಲು ಯಾವಗ ಪ್ರಾರಂಭಿಸಿದರೋ ಅಂದಿನಿoದ ರೈತರ ಮನೆಗಳಲ್ಲಿ ಮೂರು ನಾಲ್ಕು ಬೈಕ್‌ಗಳು , ಕಾರುಗಳು ನಿಲ್ಲುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ರೈತರೇ ನಮ್ಮ ದೇಶದ ಮಾಲಿಕರು, ಯಾವುದೇ  ಕಾರಣಕ್ಕೂ ಅಧಿಕಾರಿಗಳು ರೈತರಿಗೆ ತೊಂದರೆ ಕೊಡುಬಾರದು. ೩೦ ವರ್ಷಗಳಿಂದ ರೈತ ಪರ ಚಳುವಳಿಗಳನ್ನು ನಡೆಸಿಕೊಂಡು ಅನ್ಯಾಯವಾದಾಗ ನ್ಯಾಯ ಕೊಡಿಸುವ ಕೆಲಸ ಮಾಡಿಕೊಂಡು ಈ ಸ್ಥಾನಕ್ಕೆ ಬಂದಿದ್ದೇವೆ. ಯಾರಾದರೂ ಅಚ್ಚುಕಟ್ಟು ರೈತರಿಗೆ ಅನ್ಯಾಯ ಎಸಗಿದರೆ ಸುಮ್ಮನೆ ಕೂರುವ ಪ್ರಶ್ನೆಯಿಲ್ಲ, ರೈತರಿಂದಲೇ ದೇಶ ಎಂದರು.

ರೈತಮುಖAಡ ತೇಜಸ್ವೀಪಟೇಲ್ ಮಾತನಾಡಿ, ರೈತರ ಸಮಸ್ಯೆಗಳನ್ನು ಮನಗಂಡು ಕೊನೆಭಾಗದ ರೈತರಿಗೆ ತಲುಪದ ನೀರನ್ನು ನೀರು ನಿರ್ವಹಣೆ  ಮುಖಾಂತರ ಕೊನೆ ಭಾಗದ ರೈತರಿಗೆ ನೀರುಣಿಸಿದ  ಪವಿತ್ರರಾಮಯ್ಯ ಮೊದಲ ಭದ್ರಾ ಕಾಡ ಅಧ್ಯಕ್ಷರಾಗಿದ್ದಾರೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಕೋವಿಡ್ ಸಮಯದಲ್ಲೂ ಧೈರ್ಯದಿಂದ ಮುನ್ನುಗ್ಗಿ ರೈತರಿಗೆ ತೊಂದರೆಯಾಗದAತೆ ಮುತುವರ್ಜಿ ವಹಸಿದ್ದಾರೆ . ಅವಕಾಶ ಎನ್ನುವುದು ಆಕಾಶಕ್ಕಿಂತ ದೊಡ್ಡದು . ಅಂದು ನಡೆಸಿದ ರೈತ ಹೋರಾಟದ ಚಳುವಳಿಯ ಫಲ ರೈತರಿಗೆ ವರವಾಗಿದೆ ಎಂದರು.

ರೈತಮುಖAಡ ಚನ್ನಬಸಪ್ಪ ಮಾತನಾಡಿ,ಗ್ರಾಮದಲ್ಲಿ ಹಾದು ಹೋಗಿರುವ ನಾಲೆಗಳ ಹೂಳು ತಗೆಸುವಂತೆ, ದುರಸ್ಥಿ ಯಾಗಿರುವ ನಾಲೆಗಳನ್ನು ಸರಿ ಪಡಿಸುವಂತೆ ಮಾಡಿ, ನಂತರ ಸ್ಥಳದಲ್ಲಿದ್ದ ನೀರಾವರಿ ಇಂಜಿನೀಯರ್ ಜಿಎಂ ಗುಡ್ಡಪ್ಪನವರಿಗೆ  ಇಲ್ಲಿನ ೧೮-೧೯ ರ ನಾಲೆಯಲ್ಲಿ ಊಳು ತುಂಬಿರುವುದರಿAದ ನಾಲೆಯ ನೀರು, ಜಮೀನುಗಳಲ್ಲಿ ಹರಿದು ೬೦೦ ಎಕರೆ ಮೆಕ್ಕೆಜೋಳದ ಬೆಳೆ ಹಾಳಾಗಿದೆ ಎಂದು ಪ್ರಶ್ನಿಸಿದರು. ಅನುದಾನದ ಕೊರತೆಯಿಂದಾಗಿ ಊಳು ತೆಗೆಸಲು ಸಾಧ್ಯವಾಗಿಲ್ಲ, ಈ ಸಂಬAಧ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು  ಉತ್ತರಿಸಿದರು.

ಈ ಸಂದರ್ಭದಲ್ಲಿ ರೈತಮುಖಂಡ ತೇಜಸ್ವೀಪಟೇಲ್ , ಕೆ.ಬಿ.ಚನ್ನಬಸಪ್ಪ, ಕಾಡ ಎಇಇ ನಾಗೇಂದ್ರಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

error: