March 28, 2024

Bhavana Tv

Its Your Channel

ಕೆರೆ, ಗುಡಿ ಗೋಪುರವನ್ನು ನಿರ್ಮಿಸಿದ ಶೇಷ್ಠ ವ್ಯಕ್ತಿ ನಾಡಪ್ರಭು ಶ್ರೀ ಕೆಂಪೇಗೌಡರು – ಬಿ. ವೈ. ರಾಘವೇಂದ್ರ

ಶಿಕಾರಿಪುರ : ಶಿಕಾರಿಪುರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಪುರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಇಲಾಖೆಗಳು, ತಾಲ್ಲೂಕು ವಿವಿಧ ಸಂಘ-ಸAಸ್ಥೆಗಳು ಹಾಗೂ ತಾಲ್ಲೂಕು ಒಕ್ಕಲಿಗ ಸಮಾಜದ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು 2020 ರಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ವೈ ರವರು ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ 108 ಅಡಿ ಎತ್ತರದ ಶ್ರೀ ಕೇಂಪಗೌಡರವರ ಪ್ರತಿಮೆಯ ನಿರ್ಮಾಣದ ಕೆಲಸವನ್ನು ಪ್ರಾರಂಭಿಸಿ ಇಂದು ಮುಕ್ತಾಯ ಹಂತ ತಲುಪಿದೆ, ಕೆಂಪೇಗೌಡರು ಪಾಳೇಗಾರರಾಗಿ ಅನೇಕ ಶ್ರೇಷ್ಠ ಕೆಲಸವನ್ನು ಮಾಡಿದ್ದಾರೆ, “ಬೆಂಗಳೂರಿನ ನಿರ್ಮಾತೃ ಆಗಿರುವ ಕೆಂಪೇಗೌಡರು ಕೆರೆ-ಕಟ್ಟೆ ಕಟ್ಟಿಸಿದರು, ಗುಡಿ-ಗೋಪುರ ನಿರ್ಮಿಸಿ, ಗುಡಿ ಕೈಗಾರಿಕೆಗಳ ಮೂಲಕ ಉದ್ಯೋಗವಕಾಶ ಸೃಷ್ಟಿಸಿ, ದೈವ ಭಕ್ತಿಯ ಪ್ರತೀಕವಾಗಿ ನಗರದಲ್ಲಿ ಹಲವಾರು ದೇವಸ್ಥಾನಗಳನ್ನು ನಿರ್ಮಿಸುವುದರ ಜೊತೆಗೆ ಪುರಾತನ ದೇವಾಲಯಗಳನ್ನು ಕೂಡ ಪುನರುತ್ಥಾನ ಗೊಳಿಸಿದರು ಎಂದು ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ರೇಖಾ ಭಾಯಿ, ಒಕ್ಕಲಿಗ ಸಮಾಜದ ತಾಲೂಕು ಅಧ್ಯಕ್ಷರಾದ ಗಣೇಶಪ್ಪ, ತಹಶಿಲ್ದಾರ್ ಕವಿರಾಜ್, ಹಾಲಪ್ಪ, ಸಮಾಜದ ಬಂಧುಗಳು ಮತ್ತಿತರರು ಉಪಸ್ಥಿತರಿದ್ದರು.

error: