April 16, 2024

Bhavana Tv

Its Your Channel

81 ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ

ಶಿವಮೊಗ್ಗಾ:– ಪ್ರಸಕ್ತ 2022/23ನೇ ಸಾಲಿನ ಮುಂಗಾರು ಬೆಳೆಗಳಿಗೆ ಭದ್ರಾ ಜಲಾಶಯದಿಂದ ಎಡದಂಡೆ ನಾಲೆ, ಬಲದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೆಬೆನ್ನೂರು ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಯ ಮೂಲಕ ಅಚ್ಚುಕಟ್ಟು ಭಾಗಗಳಿಗೆ ನೀರು ಹರಿಸುವ ಹಾಗೂ ಬೆಳೆ ಕ್ಷೇತ್ರ ಪ್ರಕಟಿಸುವ ಸಂಬAಧ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಸಭಾಂಗಣದಲ್ಲಿ ಜರುಗಿದ 81 ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯನ್ನು ಭದ್ರಾ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು, ಪವಿತ್ರರಾಮಯ್ಯ ಕೆ.ಬಿ ರವರು ಸಭೆಯ ಅಧ್ಯಕ್ಷತೆವಹಿಸಿ ನಡೆಸಿಕೊಟ್ಟರು.

ದಿ. 15-07-2022 ರ ಒಳಗೆ ಭದ್ರಾ ಜಲಾಶಯದ ನೀರಿನ ಮಟ್ಟ 165 ಅಡಿ ಇದ್ದಲ್ಲಿ ಅಂದಿನ ದಿನವೇ ನೀರನ್ನು ನಾಲೆಗೆ ಹರಿಸಬೇಕು. ಮಳೆ ಬರದೆ ನೀರಿನ ಮಟ್ಟ 165 ಅಡಿ ಇಲ್ಲದಿದ್ದರೆ ನಂತರ ಮತ್ತೊಮ್ಮೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಮುಂಬರುವ ದಿನಗಳಲ್ಲಿ ನಾಲೆಗೆ ನೀರನ್ನು ಹರಿಸುವ ಬಗ್ಗೆ ಸಭೆ ನಡೆಸಬೇಕೆಂದು ಸಲಹಾ ಸಮಿತಿ ಸದಸ್ಯರು ಮತ್ತು ರೈತ ಮುಖಂಡರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ಕೃಷಿ ಇಲಾಖೆ ಅಧಿಕಾರಿಗಳು ದಿ.10-07-2022 ರಂದು, ನೀರು ಹರಿಸಿದ್ದಲ್ಲಿ ರೈತರು, ಬಿತ್ತನೆ ಭತ್ತವನ್ನು ಹಾಕಲು ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.

ಕಾಡಾ ಅಧ್ಯಕ್ಷರಾದ ಪವಿತ್ರರಾಮಯ್ಯ ಕೆ.ಬಿ ರವರು ಮಾತನಾಡಿ, ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಪ್ರಮುಖರ ಸಲಹೆಯನ್ನು ಕ್ರೂಢಿಕರಿಸಿ ಸಭೆಯಲ್ಲಿ ಕೈಗೊಂಡ ಒಮ್ಮತದ ತೀರ್ಮಾನದಂತೆ 2022-23 ನೇ ಸಾಲಿನ ಮುಂಗಾರಿನ ಬೆಳೆಗಳಿಗಾಗಿ ಬಲದಂಡೆ, ಎಡದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಲ್ಲಿ ಅಚ್ಚುಕಟ್ಟು ರೈತರಿಗೆ ನೀರು ಸಮರ್ಪಕವಾಗಿ ಹರಿಯುವಂತೆ ಎಲ್ಲಾ ರೀತಿಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಹೆಚ್.ಆರ್ ಬಸವರಾಜಪ್ಪ ರವರು, ಭದ್ರಾ ಕಾಡಾ ನಿರ್ದೇಶಕರುಗಳಾದ ವಿನಾಯಕ, ಹನುಮಂತಪ್ಪ, ರಾಜಪ್ಪ,ಷಡಾಕ್ಷರಿ, ಮಂಜುನಾಥ್ ಹುಲಿಕೆರೆ ರವರು, ಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಲದ ಅಧ್ಯಕ್ಷರಾದ ದ್ಯಾವಪ್ಪ ರೆಡ್ಡಿ ರವರು ಹಾಗೂ ಹಲವಾರು ರೈತ ಮುಖಂಡರು, ಭದ್ರಾ ಕಾಡಾ ಮತ್ತು ನೀರಾವರಿ ಇಲಾಖೆ ಮತ್ತು ಕೃಷಿ ಇಲಾಖೆಯ ಸಮಸ್ತ ಅಧಿಕಾರಿ ವೃಂದದವರು ಉಪಸ್ಥಿತರಿದ್ದರು.


.

error: