April 25, 2024

Bhavana Tv

Its Your Channel

ಮೈ ದುಂಬಿದ ಭದ್ರೆಗೆ ಭಕ್ತಿಯ ಬಾಗಿನ ಅರ್ಪಣೆ

ಶಿವಮೊಗ್ಗ: ಮೈ ದುಂಬಿದ ಭದ್ರೆಗೆ ಭಕ್ತಿಯ ಬಾಗಿನ ಅರ್ಪಿಸಲಾಯಿತು.
ರೈತರ ಜೀವನಾಡಿಯಂತಲೇ ಕರೆಸಿಕೊಳ್ಳುವ ಭದ್ರಾಜಲಾಶಯ ಅನೇಕ ಅಚ್ಚುಕಟ್ಟು ರೈತ ಭಾಂದವರ ಉಸಿರು. ರಾಜ್ಯದ ಅದೆಷ್ಟೋ ಮನೆಯಂಗಳದ ಬೆಳಕಿಗೆ ಮೂಲ ಕಾರಣವಾದ ಜಲಾಶಯದ ಸೃಷ್ಟಿಗೆ ಕಾರಣಕರ್ತರಾದ ಶ್ರೀ ಬಿ.ಎಂ ವಿಶ್ವೇಶ್ವರಯ್ಯ ರವರನ್ನು ಈ ಸಂದರ್ಭದಲ್ಲಿ ನೆನೆಯಬೇಕು.
ಅವರ ಮಹತ್ವದ ಸಾಧನೆಯ ಕನಸಿನ ಕೂಸು ಹಾಗೂ ಸಹಸ್ರಾರು ರೈತ ಭಾಂದವರ ಮಹಾತಾಯಿಯಾದ ಭದ್ರೆಯ ಒಡಲು ತುಂಬಿ ಹರಿಯುತ್ತಿದ್ದು, ಈ ದಿನ ಆ ತಾಯಿಗೆ ಮಡಿಲು ತುಂಬಿ ಹರಸುವಂತಹ ಸೌಭಾಗ್ಯ ನನ್ನದಾಗಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಪವಿತ್ರ ರಾಮಯ್ಯ ಹೇಳಿದರು

ಕಾರ್ಯಕ್ರಮದ ಉದ್ಘಾಟನೆ ಮತ್ತು ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಸಿ ನಾರಾಯಣ ಗೌಡ ಹಾಗೂ ಶಿವಮೊಗ್ಗ ಜನಪ್ರಿಯ ಸಂಸದರಾದ ಬಿ.ವೈ ರಾಘವೇಂದ್ರ , ಶಾಸಕರಾದ ಎಸ್. ರುದ್ರೇಗೌಡ, ವಿಧಾನ ಪರಿಷತ್ ಶಾಸಕರಾದ ಡಿ.ಎಸ್ ಅರುಣ್, ಗ್ರಾಮಾಂತರ ಶಾಸಕರಾದ ಕೆ.ಬಿ ಅಶೋಕ್ ನಾಯ್ಕ್ , ಭದ್ರಾ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸದಸ್ಯರುಗಳು, ಜಿಲ್ಲಾಧಿಕಾರಿಗಳಾದ ಸೆಲ್ವಮಣಿ. ಆರ್ , ಜಿಲ್ಲಾ ವರಿಷ್ಟಾಧಿಕಾರಿಗಳಾದ ಲಕ್ಷ್ಮಿ ಪ್ರಸಾದ್ , ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ ಪ್ರೊ. ಬಿ.ಪಿ ವೀರಭದ್ರಪ್ಪ , ಕುಲಸಚಿವರು ಅನುರಾಧ ಜಿ, ಕೆ.ಎ.ಎಸ್ ,
ಮಾನ್ಯ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ.ಎಲ್ ವೈಶಾಲಿ, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧಿಕಾರಿಗಳು, ಸಿಂಗನಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ರೈತರು ಹಾಗೂ ರೈತ ಮುಖಂಡರು ಹಾಜರಿದ್ದರು.

ಕಾರ್ಯಕ್ರಮದ ನಿರೂಪಣೆ ನಗರದ ಸಮನ್ವಯ ತಂಡದವರು ನೇರವೇರಿಸಿಕೊಟ್ಟರು. ಸ್ವಾಗತ ನಿರ್ದೇಶಕರು, ಕೃಷಿಕ ಸಮಾಜವೆಂಕಟೇಶ್ ನಾಯ್ಕ್ ನೆರವೇರಿಸಿದರು.

error: