April 25, 2024

Bhavana Tv

Its Your Channel

ಅಗಲಿದ ಗೌರೀಶ ವೆಂಕಟ್ರಮಣ ನಾಯಕ ಗೌರಿಮನೆ ಹಿರೇಗುತ್ತಿ

ಉಸಿರು ನಿಂತಿದ್ದು ನಿಮ್ಮದಲ್ಲ, ಗೌರೀಶಣ್ಣ ……… ಅರೆಕ್ಷಣ ನಮ್ಮದು. ಕರೆವ ಹೆಸರು ಎಲ್ಲರಿಗಿದೆ ಮಿತ್ರ. ನೆನೆವ ಹೆಸರು ಕೆಲವರಿಗೆ ಮಾತ್ರ ಎಂಬ ಮಾತೊಂದಿದೆ. ಎಲ್ಲರನ್ನೂ ಎಲ್ಲವನ್ನೂ ನೆನಪಿಟ್ಟುಕೊಳ್ಳುವಷ್ಟು ನಮ್ಮ ಬುದ್ದಿ ವಿಸ್ತಾರವಾಗಿಲ್ಲ ಆದರೆ ನೆನಪಿಡಲೇ ಬೇಕಾದದನ್ನು ಮರೆಯುವದಕ್ಕೂ ಆಗುವುದಿಲ್ಲ.
ತನ್ನವರ ನೋವುಗಳನ್ನೆಲ್ಲಾ ತಾನೇ ಹೊತ್ತು. ಅತ್ತು ತನ್ನವರಿಗಾಗಿ ನಗು ಹಂಚುವ ವ್ಯಕ್ತಿತ್ವ ಉಳ್ಳವರು ಕೆಲವರಿರುತ್ತಾರೆ… ಅಂತವರೇ ನಮ್ಮ ಪಾಲಿಗೆ ಬೇಗ ಕಣ್ಮರೆಯಾಗುವುದು ವಿಧಿಲಿಖಿತ… ಅಂತಹ ದಿವ್ಯ ಚೈತನ್ಯ ನಮ್ಮ ಗೌರೀಶ ನಾಯಕ ಸುತ್ತಲೂ ನಗುವನ್ನೇ ಹಂಚಿದವನು, ಕಷ್ಟಕ್ಕೆ ಕಿವಿಯಾದವನು… ಒಳ್ಳೆಯ ಮಿತೃತ್ವಕ್ಕೆ ಸಾಕ್ಷಿಯಾಗಿ ನಿಂತವನು ಇನ್ನಿಲ್ಲವೆಂಬ ಆಘಾತಕಾರಿ ಸುದ್ದಿಯೊಂದು ಮನಸ್ಸನ್ನೇ ಬಡಿದು ಬರಿದಾಗಿಸಿದೆ.. ಗೌರೀಶ ನಾಯಕ ನನಗೆ ಇಂದಿಗೂ ಆದರ್ಶವಾಗಿ ನೆನಪಿನ ಪುಟಗಳಲ್ಲಿ ಅಚ್ಚಳಿಯದೇ ಉಳಿಯುತ್ತಾರೆ. ಗೌರೀಶಣ್ಣ ನಿಮ್ಮ ಜೊತೆ ಕಳೆದ ಆ ದಿನಗಳು, ಅನುಭವಗಳು ಅವಿಸ್ಮರಣೀಯ. ನಿಮ್ಮ ಲವಲವಿಕೆ. ಸರಳÀ ಸಜ್ಜನಿಕೆ. ಸ್ನೇಹ ಪರತೆ. ವಿದ್ಯಾರ್ಥಿಗಳ ಬಗೆಗಿನ ನಿಮ್ಮ ಕಾಳಜಿ ಎಲ್ಲಾ ಶಿಕ್ಷಕರಿಗೂ ಮಾದರಿ.

ದಿವಂಗತ ವೆಂಕಟ್ರಮಣ ನಾಯಕ ಗೌರಿಮನೆ ಮತ್ತು ಶ್ರೀಮತಿ ದೇವಮ್ಮಾ ವೆಂಕಟ್ರಮಣ ನಾಯಕ ಆದರ್ಶ ದಂಪತಿಗಳ ಏಳು ಮಕ್ಕಳಲ್ಲಿ ಐದನೆಯವನಾಗಿ ದಿನಾಂಕ 30-12-1964ರಂದು ಜನನ, ಸುರಕ್ಷಿತ, ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದ ಗೌರೀಶರು ಬಿ.ಕಾಂ ಪದವೀಧರನಾಗಿ ನಂತರ ದೈಹಿಕ ಶಿಕ್ಷಣ ತರಬೇತಿ ಪಡೆದು ದೈಹಿಕ ಶಿಕ್ಷಕರಾಗಿ 1995 ರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಸೇವೆಗೆ ಸೇರಿದರು. 1999ರಲ್ಲಿ ರಾಜಶ್ರೀ ನಾರಾಯಣ ನಾಯಕ ಶೆಟಗೇರಿ ಇವರೊಂದಿಗೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ, ವೈವಾಹಿಕ ಜೀವನದ ಫಲವಾಗಿ ಈರ್ವರು ಪುತ್ರಿಯರು ಆಶ್ರಿತಾ, ಅರ್ಪಿತಾ. ಆಶ್ರಿತಾ ಬಿ.ಇ ಕೊನೆಯ ವರ್ಷದ ವಿದ್ಯಾರ್ಥಿನಿ, ಅರ್ಪಿತಾ ಬಿ,ಇ ಪ್ರಥಮ ವರ್ಷದ ವಿದ್ಯಾರ್ಥಿನಿ ವೃತ್ತಿಯಲ್ಲಿರುವಾಗಲೇ ಬಿ.ಪಿ.ಇಡಿ ತರಬೇತಿ ಪಡೆದು ಕಳೆದ 22 ವರ್ಷಗಳಿಂದ ಭಟ್ಕಳ ತಾಲೂಕಿನ ಶಾರದಾಹೊಳೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯನಿರತರಾಗಿದ್ದು ಶಿಸ್ತು, ಸಮಯ ಪಾಲನೆ, ವೃತ್ತಿಪರತೆಯಿಂದ ಎಲ್ಲರ ಪ್ರೀತಿಪಾತ್ರರಾಗಿದ್ದರು. ಹುಟ್ಟಿದ ಊರಿನಲ್ಲಾಗಲಿ, ವೃತ್ತಿ ನಡೆಸಿದ ಊರಲ್ಲಾಗಲಿ ಎಲ್ಲರನ್ನೂ ಅಕ್ಕ, ಅಣ್ಣ, ತಮ್ಮ, ತಂಗಿಯರAತೆ ಕಂಡು ಬದುಕಿದ ಎಲ್ಲರ ಕಷ್ಟಗಳಿಗೆ ಸ್ಪಂದಿಸಿ ಸಂತೈಸುವ, ಯಾರ ಮನಸನ್ನು ನೋಯಿಸದ, ಸಂತನAತ ಸ್ಥಿತಪ್ರಜ್ಞೆಯ ಯಾವುದೇ ದುಶ್ಚಟಗಳಿಲ್ಲದ ನೈತಿಕತೆಯ ಸಾಕಾರದಂತಿದ್ದ, ಸದಾ ಕ್ರಿಯಾಶೀಲನಾದ ಗೌರೀಶರು ದಿನಾಂಕ 07-01-2022 ರಂದು ರಾತ್ರಿ 10.30ಕ್ಕೆ ಆರ್.ಎನ್.ಎಸ್ ಹಾಸ್ಪಿಟಲ್ ಮುರುಡೇಶ್ವರದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು ವಿಪರ್ಯಾಸ. ಗೌರೀಶರÀನ್ನು ರಾತ್ರಿಯಲ್ಲೂ ತಡಮಾಡದೇ ಆಸ್ಪತ್ರೆಗೆ ತಂದ ಅವರ ಪತ್ನಿ, ಮನೆಯ ಮಾಲೀಕ ಅವರ ಕುಟುಂಬ ಹಾಗೂ ಅಲ್ಲಿ ಸೇರಿದ ಒಡನಾಡಿಗಳ ಯಾವ ಪ್ರಯತ್ನಕ್ಕೂ ನಿಲುಕದೇ ಬಾರದ ಲೋಕಕ್ಕೆ ತೆರಳಿರುವುದು ಆತ ದೇವರಿಗೆ ಬಹಳ ಬೇಗ ಪ್ರಿಯನಾದ ಎನ್ನಿಸುತ್ತದೆ.

ಅವನ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಬಂದ ಎಲ್ಲ ವರ್ಗದ, ಎಲ್ಲ ವಯೋಮಾನದ ಅಪಾರ ಜನಸ್ತೋಮ ಗೌರೀಶರ ಸಜ್ಜನಿಕೆಯನ್ನು ನೆನೆದು ದೇವರಂಥವನನ್ನು ಕಳೆದುಕೊಂಡೆವು ಎಂದು ದುಃಖಿಸುತ್ತಿದ್ದುದು “ಶರಣರ ಬಾಳನ್ನು ಮರಣದಲ್ಲಿ ಕಾಣು” ಎನ್ನುವಂತಿತ್ತು.
ಮಮತೆಯ ಮಗನಾಗಿ, ಪ್ರೀತಿಯ ಸಹೋದರನಾಗಿ, ಆದರ್ಶ ಪತಿಯಾಗಿ, ತಂದೆಯಾಗಿ, ಉತ್ತಮ ಶಿಕ್ಷಕನಾಗಿ ಸಮರ್ಥವಾಗಿ ತನ್ನ ಜವಬ್ದಾರಿಯನ್ನು ನಿರ್ವಹಿಸಿದ ಮತ್ತು ಸಮಾಜಮುಖಿಯಾಗಿ ಬದುಕಿದ ವ್ಯಕ್ತಿ ಇಂದು ನಮ್ಮ ಮುಂದಿಲ್ಲ ಎನ್ನುವುದು ದುಃಖದ ಸಂಗತಿ.
ತಾಯಿ, ಸಹೋದರ, ಸಹೋದರಿಯರು, ಹೆಂಡತಿ, ಮಕ್ಕಳು ಮತ್ತು ಅಪಾರ ಬಂದು ಬಳಗವನ್ನು ಅಗಲಿದ ಗೌರೀಶರ ದಿವ್ಯಾತ್ಮಕ್ಕೆ ಭಗವಂತನು ಸದ್ಗತಿಯನ್ನು ಚಿರಶಾಂತಿಯನ್ನು ನೀಡಲಿ. ಗೌರೀಶನನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

ಎನ್.ರಾಮು.ಹಿರೇಗುತ್ತಿ

error: