April 19, 2024

Bhavana Tv

Its Your Channel

ಮರೆಯಾದ ನಗುಮೊಗದ ಹಿರೇಗುತ್ತಿಯ ಶಾರದಾ ಕೆಂಚನ್.

ಆತ್ಮ ಬಲ ಹಾಗೂ ಸೌಜನ್ಯದಿಂದ ಬದುಕಿನಲ್ಲಿ ಸಾರ್ಥಕತೆಯನ್ನು ಕಂಡುಕೊAಡ ನಮ್ಮೊಂದಿಗಿನ ಅನುಪಮ ವ್ಯಕ್ತಿತ್ವ ಶಾರದಕ್ಕನದು. ಹೆಮ್ಮೆಯ ಮನೆತನದ ಕೆಂಚನ್ ಮನೆಯ ಹಿರಿಯ ಸೊಸೆ ಶಾರದಕ್ಕ ನಮ್ಮೊಂದಿಗೆ ಇಂದಿಲ್ಲ. ತಮ್ಮ 83 ನೇ ವರ್ಷಕ್ಕೆ 28-01-2022 ರಂದು ಪ್ರಗತಿಪರ ಬದುಕಿನೊಂದಿಗೆ ನಿರ್ಗಮಿಸಿದ್ದಾರೆ.
ಶಾರದಕ್ಕ ಎಂದರೆ ಅಂತ:ಕರಣ ತುಂಬಿದ ತಾಯಿಮುಖ. ಅವರ ಆದರ್ಶ ಪರೋಪಕಾರಿ ಗುಣಗಳು ಉಳಿದವರಿಗೆ ದಾರಿ ದೀಪವಾಗಿದೆ. ಅವರು ಬದುಕಿನ ಉದ್ದಕ್ಕೂ ದೊಡ್ಡ ಗುಣವನ್ನು ಮೆರೆದವರು. ಸಾಮಾನ್ಯಳಂತೆ ಬದುಕು ಸಾಗಿಸಿದವರು. ತಾನು ನಡೆದು ಬಂದ ಕಷ್ಟದ ದಾರಿಯನ್ನ ಮರೆಯದವಳು. ಅಂಕೋಲಾದ ಬಾಸಗೋಡದ ಸುಸಂಸ್ಕೃತ ಮನೆತನದಲ್ಲಿ ದಿ.ಗಂಗೆ ಮತ್ತು ನಾರಾಯಣ ದಂಪತಿಗಳ 10 ಮಕ್ಕಳಲ್ಲಿ ಹಿರಿಯಳಾಗಿ ಕ್ರಿ.ಶ. 1940 ರಲ್ಲಿ ಜನಿಸಿದರು. ಬಾಲ್ಯದ ದಿನಗಳನ್ನು ಹಿರೇಗುತ್ತಿಯ ದೊಡ್ಡಮ್ಮ ಲಕ್ಷಿö್ಮÃ ವೆಂಕಣ್ಣ ಗಾಂವಕರ ಮನೆಯಲ್ಲಿ ಕಳೆದರು. ನಂತರ ಕೆಂಚನ್ ಕುಟುಂಬದ ಸೊಸೆಯಾಗಿ ಬಂದ ಈಕೆ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಪತಿ ಉದ್ದಂಡ ಹೊಸಬಣ್ಣ ನಾಯಕ ಕೆಂಚನ್ ರವರ ಕೀರ್ತಿಗೆ ತನ್ನ ಜೀವನ ಶೈಲಿಯ ಸಾಥ್ ಕೊಟ್ಟವರು ಪತ್ನಿ ಶಾರದಾ. ಗಂಡನಿಗೆ ನೈತಿಕ ಬೆಂಬಲ ನೀಡಿದವಳು. ಇಬ್ಬರು ಗಂಡು ಮಕ್ಕಳು ಕೆ.ಡಿ.ಸಿ.ಸಿ. ಬ್ಯಾಂಕ್ ಹಿರಿಯ ಅಧಿಕಾರಿಯಾಗಿ ಬ್ಯಾಂಕಿನ ನೌಕರರ ಸಂಘದ ಅಧ್ಯಕ್ಷರಾಗಿ ನಿವೃತ್ತರಾದ ಬೀರಣ್ಣ ಯು. ಕೆಂಚನ್ ಹಾಗೂ ಬಿ.ಜೆ.ಪಿ. ಪಕ್ಷದ ಧುರೀಣ ಗೋಕರ್ಣ ಮಹಾಬಲೇಶ್ವರ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ರಾಮು ಕೆಂಚನ್ ಹಾಗೂ ದೇವಾಂಗಿನಿ, ವನಿತಾ ಇಬ್ಬರು ಹೆಣ್ಣು ಮಕ್ಕಳು ಇರುವ ಸುಖಿ ಕುಟುಂಬದ ಜವಾಬ್ದಾರಿ ಹೊತ್ತು ಸಹಧರ್ಮಿಣಿಯಾಗಿ ಗಂಡನಿಗೆ ಜೊತೆಯಾಗಿ ನಡೆದವಳು. ಕೇವಲ ಕಾರ್ಯಕ್ಷೇತ್ರ ಮನೆಯಾಗದೇ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಳು. ಯಾಕೆಂದರೆ ಕೆಂಚನ್ ಕುಟುಂಬಕ್ಕೆ ರಾಜಕೀಯ ಹಿನ್ನೆಲೆ ಇದೆ. ಹೇಗೆಂದರೆ ಮಾಜಿ ಸಭಾಪತಿ ಆರ್.ಬಿ.ನಾಯಕರ ಸೊಸೆಯಾಗಿ ಅನೇಕ ರಾಜಕೀಯ ನಾಯಕರನ್ನು ಹತ್ತಿರದಿಂದ ಬಲ್ಲವರಾಗಿದ್ದರು. ಮಾಜಿ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರು ಇವರ ಅಡುಗೆಯ ಕೈರುಚಿ ಉಂಡವರು. ದೊಡ್ಡವರೊಂದಿಗೆ ದೊಡ್ಡವರಾಗಿ ಸಣ್ಣವರೊಂದಿಗೆ ಸಣ್ಣವರಾಗಿ ಆಳು-ಕಾಳುಗಳೆಂಬ ಭೇದವಿಲ್ಲದೇ ಎಲ್ಲರೊಂದಿಗೆ ಸಮಾನವಾಗಿ ಬೆರೆಯುವ ಗುಣ ಶಾರದಕ್ಕನದು. ಶಾರದಾ ಕೆಂಚನ್ ರವರು ಮಹಾತ್ಮ ಗಾಂಧೀ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ ಹಾಗೂ ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಹೀಗೆ ಅನೇಕ ಜನಪರ ಕಾಳಜಿ ಹೊಂದಿದವರಾದ ಇವರು ಇಂದು ನಮ್ಮೊಂದಿಗೆ ಇಲ್ಲಾ. ಅವರ ಸೇವೆ ಚಿರಸ್ಮರಣೀಯ. “ನಗು ಮೊಗದ” ಶಾರದಕ್ಕ ಇನ್ನೂ ಕೇವಲ ನೆನಪು ಮಾತ್ರ. ಹಳೆಯ ಕೊಂಡಿಗಳು ಜಾರುತ್ತಿರುವದು ಬೇಸರ. ಬದುಕಿನ ಸತ್ಯ ಇದೇ ಎಂದು ಅಳಿದವರ ನೆನಪಲ್ಲಿ ನಾವು ಅಳುನುಂಗಿ, ದಾರಿ ಕ್ರಮಿಸುವದು ಅದುವೇ ಜೀವನ. ಶಾರದಕ್ಕ ಆತ್ಮಕ್ಕೆ ಚಿರಶಾಂತಿ ಕೋರುವೆ.
ಎನ್. ರಾಮು. ಹಿರೇಗುತ್ತಿ.

error: