July 11, 2024

Bhavana Tv

Its Your Channel

ಅಸ್ತಂಗತನಾದ ತಬಲಾಸೂರ್ಯ ಶ್ರೀ ಎನ್. ಎಸ್. ಹೆಗಡೆ ಹಿರೇಮಕ್ಕಿ.

ಹೊನ್ನಾವರ: ಸುಮಾರು ನಲವತ್ತು ವರ್ಷಗಳ ಹಿಂದೆ ಚಿತ್ರಾಪುರ ಮಠಕ್ಕೆ ವಿಶ್ವ ವಿಖ್ಯಾತ ಸಂಗೀತ ಸಾಮ್ರಾಟ ಪಂಡಿತ್ ಜಸರಾಜರು ಗುರುದರ್ಶನಾರ್ಥಿಯಾಗಿ ಬಂದಿದ್ದರು. ಗುರುಗಳ ಕೋರಿಕೆಯಂತೆ ಮರುದಿನ ಸಂಗೀತ ಕಾರ್ಯಕ್ರಮ ಏರ್ಪಡಿಸಿದರೆ ಅವರ ಜೊತೆ ಪಕ್ಕವಾದವರಾರೂ ಬಂದಿರಲಿಲ್ಲ. ಆಗ ಸಮರ್ಥ ತಬಲವಾದನಕ್ಕೆ ಸಂಘಟಕರು ಆಗಲೇ ಉದಯೋನ್ಮುಖ ತಬಲವಾದಕರಾಗಿ ಸಾಕಷ್ಟು ಖ್ಯಾತರಾಗಿದ್ದ ಶ್ರೀ ಎನ್. ಎಸ್ ಹೆಗಡೆಯವರನ್ನು ಆಹ್ವಾನಿಸಿದರು. ಅದೊಂದು ಸುಮಾರು ಮೂರುತಾಸುಗಳ ಅವಿಸ್ಮರಣೀಯ ಕರ‍್ಯಕ್ರಮವಾಗಿ ಮೂಡಿಬಂದು ಶ್ರೀಯುತರ ತಬಲಾ ಕೈಚಳಕವನ್ನು ಕರ‍್ಯಕ್ರಮದ ಕೊನೆಯಲ್ಲಿ ಸ್ವತಃ ಜಸರಾಜರು ಕೊಂಡಾಡಿದರು. ಎಂದು ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಷ್ಟçಪ್ರಶಸಸ್ತಿ ಪುರಸ್ಕೃತ ಸಾಮವೇದ ವಿದ್ವಾಂಸ ಶ್ರೀ ಶಿವರಾಮ ಭಟ್ ಅಲೇಖ ಈಗಲೂ ಅಭಿಮಾನದಿಂದ ಸ್ಮರಿಸಿಕೊಳ್ಳುತ್ತಾರೆ.
ಹೊನ್ನಾವರ ತಾಲೂಕ ಹೊಸಾಕುಳಿ ಗ್ರಾಮದ ಪುಟ್ಟ ಮಝರೆ ಹಿರೇಮಕ್ಕಿ ಜೋಷ ಹೆಗಡೆ ಮನೆತನದ ಶ್ರೀಮತಿ ಸೀತೆ ಮತ್ತು ಶ್ರೀ ಸುಬ್ರಾಯ ಹೆಗಡೆ ದಂಪತಿಗಳ ಮಗ ನಾರಾಯಣನಿಗೆ ಬಾಲ್ಯದಿಂದಲೂ ತಬಲಾದತ್ತ ಸೆಳೆತ. ಪ್ರೌಢ ಶಾಲೆಯ ಸಹಪಾಠಿ ಶ್ರೀ ಎಂ. ಟಿ. ಭಾಗವತ ಮತ್ತು ಎನ್ . ಎಸ್. ಹೆಗಡೆ ನಂತರದ ದಿನಗಳಲ್ಲಿ ಎಸ್. ಡಿ. ಎಮ್ ಕಾಲೆಜಿನ ಸಂಗೀತ ಗುರುಗಳಾದ ಶ್ರೀ ಕಟ್ಟಿಗೆ ಭಟ್ಟರಲ್ಲಿ ಸುಮಾರು ಏಳು ವರ್ಷಗಳ ಕಾಲ ಅಧ್ಯಯನ ಮಾಡಿದರು. ಭಾಗವತರು ಸಂಗೀತ ಅಧ್ಯಯನ ಮಾಡಿದರೆ ಎನ್. ಎಸ್. ಹೆಗಡೆ ತಬಲವಾದನ ಕಲಿತು ಹೆಚ್ಚಿನ ವ್ಯಾಸಂಗಕ್ಕಾಗಿ ವಾಹನ ಸೌಕರ್ಯ ಅತ್ಯಂತ ಕಡಿಮೆ ಇದ್ದ ಆ ಕಾಲದಲ್ಲಿಯೇ ಕಲಿಯಲೇಬೇಕೆಂಬ ಉತ್ಕಟ ಅಪೇಕ್ಷೆಯಿಂದ ಶಿರಸಿಯ ಕಲ್ಗುಂಡಿ ಕೊಪ್ಪದ ವಿದ್ವಾನ್ ಶ್ರೀಪಾದರಾಯರ ಮನೆಗೆ ತಿಂಗಳದಲ್ಲಿ ನಿಗದಿತ ದಿನಗಳಲ್ಲಿ ತೆರಳಿ ಅಲ್ಲಿಯೇ ೮-೧೦ ದಿನ ಉಳಿದುಕೊಂಡು ತಬಲಾ ಬೋಲ್ ಗಳನ್ನು ಕರಗತ ಮಾಡಿಕೊಂಡರು. ಇದು ಸುಮಾರು ೮ ವರ್ಷಗಳ ಸುಧೀರ್ಘ ಅಧ್ಯಯನ ಪ್ರಯಾಣ. ಅಲ್ಲಿಗೂ ಅವರ ತಬಲಾ ಕಲಿಕೆಯ ಹಸಿವು ನೀಗಲಿಲ್ಲ. ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂದು ಧಾರವಾಡದ ಶ್ರೀ ಪರ್ವತಿಕರರಲ್ಲಿ ಆಳ ಅಧ್ಯಯನ ನಡೆಸಿ ಆಕಾಶವಾಣಿಯ ಕಲಾವಿದರಾಗಿ ಆಯ್ಕೆಯಾಗಿ ಅನೇಕ ಕರ‍್ಯಕ್ರಮಗಳನ್ನು ಕೊಟ್ಟ ಹಿರಿಮೆ ಅವರಿಗಿದೆ. “ತಬಲಾದ ಎಲ್ಲ ಬೋಲ್ ಗಳನ್ನು ಸಮರ್ಥವಾಗಿ ಅಧ್ಯಯನ ಮಾಡಿದ ತನ್ನ ಏಕೈಕ ಶಿಷ್ಯ ಎನ್. ಎಸ್. ಹೆಗಡೆ” ಎಂದು ಶ್ರೀಪಾದರಾಯರು ಹೇಳುತ್ತಿದ್ದುದನ್ನು ಅವರ ಮಗ ಉಸ್ತಾದ್ ಅಲ್ಲಾರಖಾರ ಶಿಷ್ಯ ಪ್ರಸಿದ್ಧ ತಬಲವಾದಕ ಶ್ರೀ ಲಕ್ಷಿö್ಮÃಶರಾವ್ ಕಲ್ಲಗುಂಡಿಕೊಪ್ಪ ಶ್ರೀಯುತರನ್ನು ಅಭಿಮಾನದಿಂದ ಸ್ಮರಿಸಿಕೊಳ್ಳುತ್ತಾರೆ. ತನ್ನ ದೀರ್ಘ ಕಾಲದ ಸಹಪಾಟಿಯೊಬ್ಬ ತಬಲ ಜ್ಞಾನಭಂಡಾರವನ್ನು ವೃತ್ತಿಗಾಗಿ ಬಳಸದೇ ಕಲಿಸುವ ವೃತವನ್ನಾಗಿ ಸ್ವೀಕರಿಸಿ ಅನೇಕ ಶಿಷ್ಯರಿಗೆ ಧಾರೆಎರೆಯುವ ಮೂಲಕ ತಬಲಾ ತೋಟವನ್ನೇ ನಿರ್ಮಿಸಿರುವುದು ಶ್ರೀ ಎನ್. ಎಸ್ ಹೆಗಡೆಯವರ ಅತ್ಯಂತ ದೊಡ್ಡ ಕೊಡುಗೆ ಎನ್ನುತ್ತಾರೆ ಅವರ ದೀರ್ಘ ಕಾಲದ ಒಡನಾಡಿ ಉಡುಪಿಯ ಪಂಡಿತ ಎಂ.ಟಿ ಭಾಗವತರು.
ಸಂಗೀತಾಲAಕಾರ ಪಂಡಿತ ಜಿ,ಆರ್ ಭಟ್ ಬಾಳೆಗದ್ದೆಯವರ ಮನೆ ಒಂದು ಸಂಗೀತದ ಗುರುಕುಲವಾಗಿ ಅಲ್ಲಿ ಅನೇಕರು ಸಂಗೀತ ಕಲಿಯಲು ಬಂದರೆ ಶ್ರೀ ಎನ್. ಎಸ್. ಹೆಗಡೆ ಪ್ರಾಕ್ಟಿಸ್ ಮಾಡಲು ಬರುತ್ತಿದ್ದರು. ಹಾಗೆ ಬಂದಾಗಲೆಲ್ಲ ಸಂಗೀತ ವಿದ್ಯಾರ್ಥಿಗಳಿಗೆ ತಾಳ ಮತ್ತು ಮಾತ್ರೆಗಳ ಕುರಿತಾಗಿ ವಿಸ್ತಾರವಾಗಿ ಹೇಳಿಕೊಡುತ್ತಿದ್ದರು ಅಂದು ಅಷ್ಟು ಸಮರ್ಥವಾಗಿ ನಮ್ಮನ್ನೆಲ್ಲಾ ತಿದ್ದಿ ತೀಡಿದಕ್ಕೆ ಇಂದು ನಾನುಸಹ ಸಂಗೀತ ತರಬೇತಿ ನಡೆಸಲು ಸಾಧ್ಯವಾಯಿತು ಎಂಬುದನ್ನು ಶ್ರೀಮತಿ ಲಕ್ಷಿö್ಮÃ ಹೆಗಡೆ ಬಗ್ಗೋಣ ತನ್ನ ಅನಿಸಿಕೆಗಳಲ್ಲಿ ತೆರೆದಿಡುತ್ತಾರೆ. ಜಿ,ಆರ್ ಭಟ್ಟರ ಶಿಷ್ಯ ವೃಂದದ ತಯಾರಿಕೆಯಲ್ಲಿ ಶ್ರೀ ಎನ್.ಎಸ್ ಹೆಗಡಯವರ ಕೊಡುಗೆ ಅಪಾರ ಎಂದು ಇಬ್ಬರನ್ನೂ ೨೫ ವರ್ಷಗಳಿಂದ ಹತ್ತಿರದಿಂದ ಬಲ್ಲ ಶ್ರೀ ತಿಮ್ಮಣ್ಣ ಹೆಗಡೆ ಗುಡ್ಡೇಬಾಳ ಇವರ ಮನದಾಳದ ಮಾತು.
ಪ್ರೋ|| ಶಂಭು ಭಟ್ಟರು ಮತ್ತು ಸಮಾನ ಮನಸ್ಕ ಸಂಗೀತಾಸಕ್ತರ ಪ್ರಯತ್ನದ ಫಲವಾಗಿ ಕಲಾಸಂಗಮ ಸಂಗೀತ ಸಂಸ್ಥೆ ಹೊನ್ನಾವರ ಮತ್ತು ಸುತ್ತ ಮುತ್ತ ಸಂಗೀತ ತರಗತಿಗಳನ್ನು ಸುಮಾರು ೩೦ ವರ್ಷಗಳ ಕಾಲ ನಡೆಸಿತು. ಅಲ್ಲಿ ಪಂಡಿತ ಷಡಕ್ಷರಿ ಗವಾಯಿಗಳು ಸಂಗೀತದ ಪಾಠ ಮಾಡಿದರೆ ಶ್ರೀ ಎನ್. ಎಸ್. ಹೆಗಡೆಯವರು ತಬಲಾ ಗುರುಗಳಾಗಿ ಸೇವೆ ಸಲ್ಲಿಸಿದರು. ಆ ಕಾಲಘಟ್ಟದಲ್ಲಿ ಕಲಿತ ಶ್ರೀಯುತರ ಅತಿದೊಡ್ಡ ಶಿಷ್ಯ ವೃಂದ ಇಂದು ಅಷ್ಟೇ ಸಮರ್ಥವಾಗಿ ತಬಲಾ ತರಬೇತಿ ನೀಡುತ್ತಿದ್ದಾರೆ. ಆ ಮೂಲಕ ಶ್ರೀಯುತರು ಶಿಷ್ಯರನ್ನಷ್ಟೇ ಅಲ್ಲ ಪ್ರಶಿಷ್ಯರನ್ನು ಕಂಡು ಸಂತಸಪಟ್ಟಿದ್ದರು ಎನ್ನುತ್ತಾರೆ ಶ್ರೀ ಎನ್.ಜಿ ಹೆಗಡೆ ಕಪ್ಪೆಕೆರೆ. ಯಾವುದೇ ವಿದ್ಯಾರ್ಥಿ ಬಂದರೂ ಆತ ತಬಲಾದ ಮೇಲೆ ಬೆರಳಾಡಿಸುತ್ತಿದ್ದಂತೆ ಅವನಿಗೆ ಧೈರ್ಯ ತುಂಬಿ ವಾಃ ಎಂದು ಉದ್ಗಾರ ತೆಗೆದು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯಂತ ತಾಳ್ಮೆ, ಜಾಣ್ಮೆ , ಹಾಗೂ ಸಹನೆಯಿಂದ ಹಂತ ಹಂತವಾಗಿ ಕಲಿಸುತ್ತಾ ಸಾಗುತ್ತಾರೆ. ಇಂದು ನಾನು ವೃತ್ತಿ ನಿರತ ತಬಲ ವಾದಕನಾಗಿ ಶಿಕ್ಷಕನಾಗಿ ಗುರುತಿಸಿಕೊಂಡು ಗೌರವದಿಂದ ಬದುಕುತ್ತಿದ್ದರೆ ಅಂದು ಶ್ರೀ ಎನ್. ಎಸ್ ಹೆಗಡೆಯವರು ನನಗೆ ಧಾರೆಎರೆದ ತಬಲಾ ಶಿಕ್ಷಣ ಕಾರಣ ಎಂದು ವಿನಮೃವಾಗಿ ನುಡಿಯುತ್ತಾರೆ ಶ್ರೀ ಶೇಷಾದ್ರಿ ಅಯ್ಯಂಗಾರ್. ಶ್ರೀ ಶಿವಾನಂದ ಭಂಡಾರಿಯವರ ಞ ಎನ್. ಎಸ್ ಹೆಗಡೆಯವರಿಗೆ ಅತ್ಯಂತ ಆಪ್ತಾಯಮಾನವಾಗಿತ್ತು ಎಂಬುದು ಅನೇಕ ಶಿಷ್ಯರ ಅಭಿಪ್ರಾಯವಾಗಿದೆ. ಒಟ್ಟಿನಲ್ಲಿ ಎನ್.ಎಸ್ ಹೆಗಡೆಯವರಿಗೆ ೫ ರಿಂದ ೫೦ ವರ್ಷದವರೆಗಿನ ಶಿಷ್ಯರಿದ್ದರು ಎಂದರೆ ಇದರಲ್ಲಿ ಎಳ್ಳಷ್ಟೂ ಅತಿಶಯೋಕ್ತಿಯಿಲ್ಲ. ಹೀಗೆ ಬಂದ ಎಲ್ಲರಿಗೂ ಅವರ ಆಸಕ್ತಿ ಮತ್ತು ಸಾಮರ್ಥ್ಯ ನೋಡಿ ಕಲಿಸಿದ್ದಾರೆ. ಅವರ ಶಿಷ್ಯರಲ್ಲಿ ಪ್ರೊ|| ಎನ್. ಜಿ ಅನಂತಮೂರ್ತಿ, ಡಾ|| ಗುರುದತ್ತ ಕುಲಕರ್ಣೀ , ಶ್ರೀ ಗೌರೀಶ ಯಾಜಿ, ಶ್ರೀ ರಘುಪತಿ ಯಾಜಿ, ಶ್ರೀ ಶ್ರೀಧರ ಪ್ರಭು , ಶ್ರೀ ಮಹೇಶ ಭಟ್, ಡಾ|| ಸಂತೋಷ ಚಂದಾವರ , ಶ್ರೀ ಜಗದೀಶ ಹೆಗಡೆ, ಶ್ರೀ ಗಜಾನನ ಶಾಸ್ತಿç, ಶ್ರೀ ಮಾದೇವ ನಾಯ್ಕ, ಶ್ರೀ ಪರಮೇಶ್ವರ ಹೆಗಡೆ, ಶ್ರೀ ಭರತೇಶ ಹೆಗಡೆ, ಶ್ರೀ ಸುಬ್ರಹ್ಮಣ್ಯ ಶಾಸ್ತಿç ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಕಲಾ ಸಂಗಮದ ಮೂಲಕ ಈ ಭಾಗದಲ್ಲಿ ಸಂಗೀತ ವಿಸ್ತರಣೆಯ ಸುವರ್ಣ ಯುಗ ಆರಂಭವಾಗಿ ಸಂಗೀತಗಾರರAತೆ ಅನೇಕ ತಬಲಾ ಪಟುಗಳು ಸಿದ್ಧರಾಗಲು ಶ್ರೀ ಎನ್. ಎಸ್ ಹೆಗಡೆಯವರು ದೀಪದಂತೆ ತನ್ನನ್ನು ತಾನು ದಹಿಸಿಕೊಂಡು ಅನೇಕ ಪ್ರತಿಭೆಗಳು ಪ್ರಕಾಶಿಸುವಂತೆ ಮಾಡಿದ್ದಾರೆ ಆಮೂಲಕ ಅವರು ಸದಾ ಉರಿಯುತ್ತಿರುವ ನಂದಾದೀಪದAತೆ ಎಂಬುದು ಪ್ರೊ|| ಶಂಭು ಭಟ್ಟರ ಭಾವಪೂರ್ಣ ನುಡಿ.
ಗುರುಗಳಾದ ಶ್ರೀ ಕಟ್ಟಿಗೆ ಭಟ್ಟರಿಂದ ನಮ್ಮ ಮನೆಯಲ್ಲಿ ವಿಲಂಬಿತ ಎಕ್ ತಾಳ್ ಆರಂಭಿಸಿ ಮುಂದೆ ಉತ್ತಮ ಲಯ ಸಿದ್ದಿಯ ಸಮರ್ಥ ತಬಲಾ ವಾದಕನಾಗಿ, ಗುರುವಾಗಿ ಅಪಾರ ಶಿಷ್ಯರನ್ನು ಸಂಗೀತ ಲೋಕಕ್ಕೆ ಕೊಟ್ಟ ಶ್ರೀಯುತ ಎನ್.ಎಸ್ ಹೆಗಡೆಯವರ ಕೊಡುಗೆ ಶಾಶ್ವತವಾದುದು ಎಂದು ಅವರ ಸಾಮರ್ಥ್ಯವನ್ನು ನೆÀನಪಿಸಿಕೊಳ್ಳುತ್ತಾರೆ ಅಂತರಾಷ್ಟಿçÃಯ ಸಂಗೀತ ವಿದ್ವಾಂಸ ಕಲಭಾಗದ ಪಂಡಿತ ಪರಮೇಶ್ವರ ಹೆಗಡೆಯವರು. ವಿಲಂಬಿತ ಝಮ್ರಾ ತಾಳದಲ್ಲಿ ಶ್ರೀ ಎನ್.ಎಸ್ ಹೆಗಡೆಯವರು ಟೇಕಾ ನುಡಿಸುತ್ತಿರಲಿಲ್ಲ ಬದಲಾಗಿ ಬಂದೀಷ್ ಗಳಲ್ಲಿ ಹಾಡನ್ನು ನುಡಿಸುತ್ತಿದ್ದರು. ಅಂತಹ ನಾದಮಾಧುರ್ಯ ಹೊರತೆಗೆಯುವ ಶಕ್ತಿ ಅವರ ಕೈ ಚಳಕಕಿತ್ತು ಎಂದು ಪಂಡಿತ ಅಜಯ ಚಕ್ರವರ್ತಿಯವರ ಶಿಷ್ಯ ಕಲ್ಕತ್ತಾದ ಶ್ರೀ ಎ.ಕೆ ಗುರುದತ್ತರು ಒಂದೇ ಸಾಲಿನಲ್ಲಿ ಶ್ರೀಯುತರ ಸಾಮರ್ಥ್ಯವನ್ನು ವರ್ಣಿಸುತ್ತಾರೆ. ಶ್ರೀ ಎನ್.ಎಸ್ ಹೆಗಡೆಯವರು ಎಷ್ಟು ಸರಳ ಜೀವಿಗಳೆಂದರೆ ನಾಳೆ ಎಲ್ಲಿಯಾದರೂ ಕರ‍್ಯಕ್ರಮವಿದ್ದರೆ ನಾನು ಹಾರ್ಮೊನಿಯಂ ನುಡಿಸಲು ಹೋಗುತ್ತೇನೆಂದು ತಿಳಿದರೆ ನಮ್ಮ ಮನೆವರೆಗೂ ಬಂದು ಚರ್ಚಿಸಿ ಹೇಳಿಕೊಡುವಷ್ಟು ಸೌಜನ್ಯದ ಮೂರ್ತಿಯಾಗಿದ್ದರು ಎನ್ನುತ್ತಾರೆ ಪ್ರಸಿದ್ಧ ಹಾರ್ಮೊನಿಯಂ ವಾದಕ ಶಿಕ್ಷಕ ಶ್ರೀ ಹರಿಶ್ಚಂದ್ರ ನಾಯ್ಕರು .
ನನಗಿಂತ ಆರು ವರ್ಷ ಹಿರಿಯರಾದ ಎನ್. ಎಸ್ ಹೆಗಡೆ ಯವರು ಮತ್ತು ನಾನು ಗುರುಗಳಾದ ಕಟ್ಟಿಗೆ ಭಟ್ಟರ ಮನೆಯಲ್ಲಿ ಒಟ್ಟಿಗೆ ತಬಲಾ ಅಧ್ಯಯನ ಮಾಡಿದವರು. ಹಿರಿಯ ಕಲಾವಿದರಾದರೂ ಸ್ನೇಹ ಜೀವಿಯಾದ ಅವರು ಎಲ್ಲರೊಂದಿಗೆ ಒಂದಾಗುತ್ತಿದ್ದರು. ಅಂದು ಅನೇಕಕಡೆ ನಾಟಕಕ್ಕೆ ಬೆಳಗಿನ ತನಕ ತಬಲಾ ನುಡಿಸಿ ಮೆಚ್ಚುಗೆ ಪಡೆಯುತ್ತಿದ್ದರು. ಸೋಲೊ ಬಾರಿಸುವುದರಲ್ಲಿ ಅವರದು ಎತ್ತಿದ ಕೈ. ಅಷ್ಟೇ ಅಲ್ಲದೇ ಅನೇಕ ನಾಮಾಂಕಿತ ಸಂಗೀತಗಾರರಿಗೆ ಸಾಥ್ ನೀಡಿದ್ದಾರೆ. ಶಿಷ್ಯರ ಮನೆ ಮನೆಗೆ ಹೋಗಿ ಅವರ ಜೊತೆ ಒಂದಾಗಿ ವಿಶ್ವಾಸ ಗಳಿಸಿ ಕಲಿಸುವ ಕಲೆ ಅವರಿಗೆ ಸಿದ್ಧಿಸಿದ ಪರಿಣಾಮ ಇಂದು ಅವರ ಶಿಷ್ಯರ ದೊಡ್ಡ ಪರಿವಾರವೇ ಇದೆ ಎನ್ನುತ್ತಾರೆ ಪ್ರಸಿದ್ಧ ತಬಲವಾದಕ ತಾಳಮದ್ದಳೆ ಅರ್ಥದಾರಿ ವಿಶ್ರಾಂತ ಶಿಕ್ಷಕ ಡಾ|| ಜಿ. ಕೆ ಹೆಗಡೆ ಹರಿಕೇರಿಯವರು.
ಪಂ. ಎನ್.ಎಸ್ ಹೆಗಡೆಯವರು ನಾ ಕಂಡAತೆ ಸಂಗೀತ ಲೋಕವನ್ನೇ ತನ್ನ ಮೇಲೆ ಆಹ್ವಾನಿಸಿ ಅದನ್ನೇ ಉಸಿರಾಗಿಸಿಕೊಂಡು ತಬಲಾ ಕಲಿಕೆ , ಕಲಿಸುವಿಕೆ , ಬೆಳೆಸುವಿಕೆಯಲ್ಲಿ ತನ್ನನ್ನು ನಿರಂತರವಾಗಿ ತೊಡಗಿಸಿಕೊಂಡು ಸುತ್ತೆಲ್ಲಾ ಸಂಗೀತ ಪಸರಿಸಲು ಕಾರಣೀಭೂತರಾದರು. ಶಿಷ್ಯರ ಮನೆಗೆ ತೆರಳಿ ಅವರಿಗೆ ಪ್ರೇರಣೆ ನೀಡಿ ತಬಲಾ ಕಲಿಸುವಿಕೆಯಲ್ಲಿಯೇ ಧನ್ಯತೆ ಕಂಡು, ಅನೇಕ ಹಣತೆಗಳನ್ನು ಹಚ್ಚಿ ಅವರ ಬದುಕಿಗೂ ಕಾರಣರಾದರು. ಅವರಿಗೆ ಇನ್ನೂ ಕಲಿಸುವ ಆಸಕ್ತಿ ಇತ್ತು, ತಬಲಾ ಕಲಿಕೆ ವಿಸ್ತರಿಸುವ ಸಾಮರ್ಥ್ಯವಿತ್ತು, ಆದರೆ ವಿಧಿ ಲಿಖಿತ ಬೇರೆಯೇ ಇತ್ತು ಎಂದು ಅವರ ಸಾವನ್ನು ನೋವಿನಿಂದ ಹೇಳುತ್ತಾರೆ ತಬಲಾ ಗುರು ಪ್ರೊ|| ಗೋಪಾಲಕೃಷ್ಣ ಹೆಗಡೆ ಹೊನ್ನಾವರ. ಪಂಡಿತ ಎನ್. ಎಸ್ ಹೆಗಡೆಯವರ ತಬಲಾ ಸ್ವಾದವನ್ನು ಶಬ್ದಗಳಲ್ಲಿ ಸೆರೆ ಹಿಡಿಯುವುದು ಕಷ್ಟ. “ಬಲ್ಲವನೇ ಬಲ್ಲ ಬೆಲ್ಲದ ರುಚಿಯ” ಎಂಬAತೆ ಅದನ್ನು ಅನುಭವಿಸಬೇಕು. ಅಂತಹ ಅವಕಾಶ ಹೊನ್ನಾವರದಲ್ಲಿ ೪ ವರ್ಷಗಳ ಕಾಲ ಸಂಗೀತ ಶಿಕ್ಷಕನಾಗಿ ಕೆಲಸ ಮಾಡುವಾಗ ಅವರ ಸಾಮೀಪ್ಯ , ತಬಲಾ ಸಾಥ್ ನನಗೆ ದೊರೆತಿತ್ತು. ಕಿರಿಯ ಕಲಾವಿದನಾದ ನನಗೆ ಪ್ರಸ್ತುತಿಯ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುತ್ತಿದ್ದುದು ಅವರ ಸರಳ ವ್ಯಕ್ತಿತ್ವಕ್ಕೆ ಸಾಕ್ಷಿ ಎನ್ನುತ್ತಾರೆ ಸಂಗೀತ ಪದವಿಯಲ್ಲಿ ಬಂಗಾರದ ಪದಕ ಪಡೆದ ವಿದ್ವಾಂಸ ಧಾರವಾಡದ ಶ್ರೀ ಗೋಪಾಲಕೃಷ್ಣ ಭಾಗವತರು.
ಶ್ರೀ ಜಿ.ಯು. ಭಟ್ಟ ಮತ್ತು ತಂಡದವರು ಹೊನ್ನಾವರದಲ್ಲಿ ಮಾಡಿದ ಜೋಕುಮಾರ ಸ್ವಾಮಿ ನಾಟಕ ನೋಡಲು ಹೋದಾಗ ನಾನು ೪ ನೇ ತರಗತಿಯ ವಿದ್ಯಾರ್ಥಿಯಾಗಿದ್ದೆ. ನನ್ನನ್ನು ಅತಿಯಾಗಿ ಆಕರ್ಷಿಸಿದ್ದು ಶ್ರೀ ಎನ್.ಎಸ್.ಹೆಗಡೆಯವರ ತಬಲಾವಾದನ. ಆಗಲೇ ತಬಲಾ ಕಲಿಯಬೇಕೆಂಬ ನನ್ನ ನಿರ್ಧಾರಕ್ಕೆ ಮುಂದೆ ಕಲಾಸಂಗಮದ ಮೊದಲ ಬ್ಯಾಚಿನ ವಿದ್ಯಾರ್ಥಿಯಾಗಿ ಶ್ರೀ ಎನ್.ಎಸ್.ಹೆಗಡೆಯವರಿಂದಲೇ ತಬಲಾ ಕಲಿತ ಧನ್ಯತೆ ನನಗಿದೆ. ಅವರದ್ದು ಅತ್ಯಂತ ಸರಳ ಕಲಿಸುವಿಕೆಯ ವಿಧಾನವಾಗಿತ್ತು, ಹುರಿದುಂಬಿಸಿ ಬೋಲ್‌ಗಳನ್ನು ಕಲಿಸಿ ಎಲ್ಲಾ ವಿದ್ಯಾರ್ಥಿಗಳು ಆದಷ್ಟು ಪರಿಪೂರ್ಣರಾಗುವಂತೆ ನೋಡಿಕೊಂಡಿದ್ದಾರೆ. ನಾನು ಎನ್.ಎಸ್.ಹೆಗಡೆಯವರ ಶಿಷ್ಯ ಎಂದಿದ್ದಕ್ಕೆ ಧಾರವಾಡದ ಪರ್ವತೀಕರರು ಪರೀಕ್ಷಿಸಿ ಶಿಷ್ಯತ್ವ ನೀಡುವ ತನ್ನ ವಿಧಾನವನ್ನು ನಿಲ್ಲಿಸಿ ನೇರವಾಗಿ ನನಗೆ ಶಿಷ್ಯತ್ವ ನೀಡಿದ್ದರಿಂದ ನಾನು ತಬಲಾ ಕಲಿಕೆಯನ್ನು ಮುಂದುವರಿಸಲು ಸಾಧ್ಯವಾಯಿತು. ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ತಬಲಾ ಮುಂದುವರಿಸುವAತೆ ಪ್ರೋತ್ಸಾಹಿಸುವ ವೈಶಿಷ್ಟö್ಯತೆ ಅವರದ್ದು. ಗುರುಗಳ ತಿರಕಿಟ ಬೋಲಿನ ಸ್ಪಷ್ಟತೆ ಮತ್ತು ಸೋಲೋ ವಾದನಕ್ಕೆ ಮನಸೋಲದವರೇ ಇಲ್ಲ. ಅಂತಹ ಶಿಷ್ಯವಾತ್ಸö್ಯಲ್ಯದ ಗುರುಗಳು ದೊರೆತದ್ದು ನಮ್ಮಂತವರ ಭಾಗ್ಯ. ಅವರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತಾರೆ ಪ್ರಸಿದ್ಧ ದಂತ ವೈದ್ಯರಾದ ಡಾ. ಸಂತೋಷ ಚಂದಾವರ.
ಲಯಬ್ರಹ್ಮ ಶ್ರೀ ಎನ್. ಎಸ್ ಹೆಗಡೆಯವರಿಗೆ ತಬಲಾ ವಾದನದ ಎಲ್ಲಾ ಘರಾಣೆಗಳು ಕರಗತವಾಗಿದ್ದು ಅವುಗಳನ್ನು ತಮ್ಮದೇ ಶೈಲಿಯಲ್ಲಿ ಪ್ರಸ್ತುತಪಡಿಸುತ್ತಿದ್ದರು. ಅನೇಕ ಹಿರಿಯ ಗಾಯಕರಿಗೆ ತಬಲಾ ಸಾಥ್ ನೀಡಿದ ಹಿರಿಮೆ ಅವರಿಗಿದೆ. ಹಾಡುಗಾರರಿಗೆ ಪ್ರಚೋದನೆ ನೀಡುತ್ತಾ, ಪ್ರೋತ್ಸಾಹಿಸುತ್ತಾ, ಒಟ್ಟಾರೆ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬರುವಂತೆ ನೋಡಿಕೊಳ್ಳುತ್ತಿದ್ದರು. ೧೯೯೦ ರಲ್ಲಿ ಆಕಾಶವಾಣಿ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿಯಲ್ಲಿ ನಾವಿಬ್ಬರೂ ಪರಸ್ಪರ ಪರಿಚಿತರಾಗಿ ಮುಂದೆ ದೀರ್ಘ ಕಾಲ ಒಂದಾಗಿ ಅನೇಕ ಕಾರ್ಯಕ್ರಮಗಳಲಲ್ಲಿ ಭಾಗವಹಿಸಿದ್ದೇವೆ, ಕರಾವಳಿ ಉತ್ಸವ , ಕದಂಬೋತ್ಸವ ಅಲ್ಲದೇ ಗೋವಾದಲ್ಲಿಯೂ ಸಹ ಬೇರೆ ಬೇರೆ ಸಂಗೀತೋತ್ಸವದಲ್ಲಿ ನನಗೆ ಸಾಥ್ ನೀಡಿದ ಅವಿಸ್ಮರಣೀಯ ಸಂದರ್ಭ ಈಗಲೂ ನೆನಪಾಗುತ್ತದೆ ಎಂದು ವಿಶ್ರಾಂತ ಸಂಗೀತ ಉಪನ್ಯಾಸಕ ಪ್ರೊಫೆಸರ್ ಅಶೋಕ್ ಹುಗ್ಗಣ್ಣನವರು ನೆನಪಿಸಿಕೊಳ್ಳುತ್ತಾರೆ. ಶ್ರೀ ಅಶೋಕ ಹೆಗಡೆ ಕಡ್ಲೆ ಹೇಳುವಂತೆ ನನಗೂ ಶ್ರೀ ಎನ್.ಎಸ್ ಹೆಗಡೆಯವರಿಗೂ ಸುಮಾರು ೪೫ ವರ್ಷಗಳ ಒಡನಾಟವಿದ್ದು ಅವರ ಕುರಿತು ಹೇಳಹೊರಟರೆ ಹತ್ತಾರು ಪುಟಗಳೇ ಆಗಬಹುದು. ಶ್ರೀಯುತರು ಅತ್ಯಂತ ಸಾಹಸ ಮತ್ತು ಶೃದ್ಧೆಯಿಂದ ಅವಿರತ ಸಾಧನೆ ಮಾಡಿದ ವೈವಿದ್ಯಮಯ ತಬಲಾ ಕಲಾವಿದರು. ಸಮಕಾಲೀನ ತಬಲಾ ವಾದಕರಲ್ಲಿ ಅವರಷ್ಟು ಗಟ್ಟಿ ಬಂಡವಾಳಶಾಹಿಗಳು ಅತ್ಯಂತ ವಿರಳ. ಶಾಸ್ತಿçÃಯ ಸಂಗೀತ, ಭಜನೆ, ನಾಟಕ, ಲಘು ಸಂಗೀತ, ಹೀಗೆ ಎಲ್ಲಾ ಸಾಂಸ್ಕೃತಿಕ ಕರ‍್ಯಕ್ರಮಗಳಿಗೆ ಯಾವುದೇ ಬೇಧ ಭಾವವಿಲ್ಲದೇ ಭಾಗವಹಿಸಿದವರು. ತಬಲಾ ಮೇಲಿನ ಅದರಲ್ಲೂ ವಿಶೇಷವಾಗಿ ಎಡದ ಮೇಲಿನ ಹಿಡಿತ , ಸುಲಲಿತ ಬೆರಳುಗಾರಿಕೆ ಇಂದಿಗೂ ಒಂದು ಸುಂದರ ನೆನಪು. ಸಮಾಜದ ಎಲ್ಲ ವರ್ಗದವರ ಜೊತೆ ಸೌಹಾರ್ದಯುತವಾಗಿ ಬದುಕಿದವರು ಇಂತಹ ಅಸಾಮಾನ್ಯ ತಬಲಾ ವಾದಕನೊಬ್ಬ ಗತಿಸಿರುವುದು ನಿಜವಾಗಲೂ ಸಂಗೀತ ಲೋಕಕ್ಕೆ ಅತಿದೊಡ್ಡ ನಷ್ಟ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.
ಶ್ರೀ ಎನ್.ಎಸ್ ಹೆಗಡೆಯವರು ಸಂಗೀತ ವಿಸ್ತರಣೆಯ ಅಪಾರ ಒಲವಿನಿಂದ ತನ್ನದೇ ಆದ ಇಂಚರ ಸಂಗೀತ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಸಾಕಷ್ಟು ಕಲಾವಿದರನ್ನು ರೂಪಿಸಿದ್ದಲ್ಲದೇ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಒಟ್ಟಿನಲ್ಲಿ ತನ್ನ ಜೀವನವನ್ನು ತಬಲಾ ಕಲಿಸುವಿಕೆ ಮತ್ತು ನಿರಂತರತೆಗಾಗಿ ಮೀಸಲಿಟ್ಟು ಶ್ರೀಗಂಧದAತೆ ತೇದುಕೊಂಡಿದ್ದಾರೆ. ಆ ಮೂಲಕ ಅಪಾರ ಶಿಷ್ಯ ವರ್ಗವನ್ನು ರೂಪಿಸುತ್ತಲೇ ಸಾಗಿದ್ದರು ಆದ್ದರಿಂದಲೇ ಇವರು ಒಬ್ಬ ತಬಲಾ ಸೂರ್ಯ ಎಂದು ಕರೆಸಿಕೊಂಡಿದ್ದಷ್ಟೇ ಅಲ್ಲ ಅದಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇಂತವರ ಜೀವಮಾನದ ಮತ್ತು ಕೊಡುಗೆ ಒಂದು ಲೇಖನವಾಗಿರದೇ ಪುಸ್ತಕ ರೂಪದಲ್ಲಿ ಮೂಡಿ ಬಂದಲ್ಲಿ ಇಂದಿನವರಿಗೆ ಮುಂದಿನವರಿಗೆ ಮಾದರಿಯ ಆಕರ ಗ್ರಂಥವಾಗಬಲ್ಲದು ಎಂಬುದು ಅವರನ್ನು ಹತ್ತಿರದಿಂದ ಕಂಡವರ ಒಕ್ಕೊರೊಳ ಅಭಿಪ್ರಾಯ. ದಿನಾಂಕ ೧೩/೧೧/೨೨ ರವಿವಾರದಂದು ಹೊನ್ನಾವರದ ಹೊಸಾಕುಳಿಯ ಶ್ರೀ ಲಕ್ಷಿö್ಮÃನಾರಾಯಣ ಸಭಾಭವನದಲ್ಲಿ ಬೆಳಿಗ್ಗೆ ೯.೩೦ ರಿಂದ ಸಂಜೆ ೮.೦೦ ರ ತನಕ ಅವರ ಶಿಷ್ಯ ವೃಂದ ಸಂಸ್ಮರಣಾ ಕಾರ್ಯಕ್ರಮ ಏರ್ಪಡಿಸಿದ್ದು ಶ್ರೀಯುತರ ಅಭಿಮಾನಿಗಳು ಹಾಗೂ ಸಂಗೀತಾಸಕ್ತರು ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.
ವಿಶೇಷ ವರದಿ;ಕೆ.ವಿ ಹೆಗಡೆ ಕವಲಕ್ಕಿ

error: