April 20, 2024

Bhavana Tv

Its Your Channel

ಒಂಟಿ ವೃದ್ದೆಯ ಹಂತಕನ ಬಂಧನ, ಕುಶಾಲನಗರ ಪೋಲಿಸ್ ತಂಡದ ಮಿಂಚಿನ ಕಾರ್ಯಚರಣೆ

ಕೊಡಗು. : ಕುಶಾಲನಗರದ ಸಮೀಪದ ಶಿರಂಗಾಲ ಪಂಚಾಯತಿ ವ್ಯಾಪ್ತಿಯ ಮಣಜೂರಿನಲ್ಲಿ ಶ್ರೀಮಂತ ವೃದ್ದೆ ಮಹಿಳೆ  ಅಂದಾಜು ೮೨ ವಯಸ್ಸಿನ ಗೌರಮ್ಮ ಎಂಬುವರು ಒಂಟಿಯಾಗಿ ವಾಸವಾಗಿದ್ದರು ಜುಲೈ ತಿಂಗಳ ಮೊದಲ ವಾರದಲ್ಲಿ ಗೌರಮ್ಮನವರ ಮನೆಯ ಮುಂದೆ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ ಸ್ಥಳೀಯರು ಪೋಲಿಸರಿಗೆ ಮಾಹಿತಿಯನ್ನು ನೀಡಿದರು

ಸ್ಥಳಕ್ಕೆ ಆಗಮಿಸಿದ ಪೋಲಿಸ್ ತಂಡ ಪರಿಶೀಲಿಸಿದಾಗ ವೃದ್ದೆಯ ಎರಡೂ ಕೈಗಳನ್ನು ಹಿಂದಕ್ಕೆ ತಿರುಗಿಸಿ ಕಾಲುಗಳನ್ನು ಹಗ್ಗದಿಂದ ಬಿಗಿದು ಥಳಿಸಿ ಕೊಲೆ  ಮಾಡಿರುವುದು ಕಂಡು ಬಂದಿತು. ಪ್ರಕರಣವನ್ನು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು ..ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೊಡಗು ಎಸ್ಪಿ ಕ್ಷಮಾಮಿಶ್ರಾ ರವರ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗಾಗಿ ಹಗಲು ರಾತ್ರಿ ಎನ್ನದೇ ಕಾರ್ಯಚರಣೆ ಪ್ರಾರಂಭವಾಯಿತು. ಕೊನೆಗೂ ಹಂತಕನನ್ನು ಬಂಧಿಸುವುದರಲ್ಲಿ   ಯಶ್ವಸಿ ಯಾದರು. ವೃದ್ದೆಯನ್ನು ಕೊಲೆ ಮಾಡಿದ ಹಂತಕ ಬೇರೆ ಯಾರು ಅಲ್ಲ ಕೈ ತುತ್ತು ಕೊಟ್ಟು ಸಾಕಿ ಸಲುಹಿ ವಿಧ್ಯಾಭ್ಯಾಸ ಕೊಟ್ಟು ಬೆಳಸಿದ ಗೌರಮ್ಮನ ಮೊಮ್ಮಗ ಮಂಜುನಾಥ್. ವೃದ್ದೆಯ ಕೊಲೆಯ ಹಂತಕ ತನ್ನ ಮಗಳ ಮಗ ಮಂಜುನಾಥ್‌ನನ್ನು ತನ್ನ ಜೊತೆಯಲ್ಲಿ ಇಟ್ಟುಕೊಂಡು ಸಾಕಿದ ಗೌರಮ್ಮ ನಿಗೆ ಕಳೆದ ಕೆಲವು ವರ್ಷಗಳಿಂದ ಹಣ,ಒಡವೆ, ಆಸ್ತಿ ವಿಚಾರವಾಗಿ ಮಂಜುನಾಥ್ ಕಿರುಕುಳ ಕೊಡುತ್ತಿದ್ದ.ಈ ವಿಚಾರವಾಗಿ ಅನೇಕ ಬಾರಿ ಪೋಲಿಸ್ ದೂರು ಕೂಡ ಮಹಿಳೆ ನೀಡಿದ್ದರು.ಮತ್ತು ಮನೆಯಿಂದ ಹೊರಹಾಕಿದ್ದರು. ಈ ವಿಷಯವನ್ನು ಕಲೆಹಾಕಿದ ಪೋಲಿಸ್ ತಂಡ ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿ ಮಂಜುನಾಥ್ ಅಜ್ಜಿಯನ್ನು ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ .ಕೊಡಗು ಎಸ್ಪಿ ಕ್ಚಮಾಮಿಶ್ರಾ ರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪ ಅಧೀಕ್ಷರಾದ ಎಚ್.ಎಂ.ಶೈಲೇAದ್ರ ವೃತ್ತ ನೀರಿಕ್ಷಕರಾದ ಮಹೇಶ್ ರವರ ನೇತೃತ್ವದಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆ ಪಿಎಐ ಶಿವಶಂಕರ್. ಎಎಸ್ ಐ ಗೋಪಾಲ್. ಸಿಬ್ಬಂದಿಗಳಾದ ಸಜಿ ಶ್ರೀನಿವಾಸ್, ಮಂಜುನಾಥ್, ಶನಂತ, ಪ್ರಿಯ ಕುಮಾರ್. ಸುದೀಶ್ ಕುಮಾರ್,ರಂಜಿತ್,ಲೋಕೇಶ್, ಪ್ರಕಾಶ್, ರಾಜೇಶ್, ಗಿರೀಶ್ ತಂಡ ಪ್ರಕರಣವನ್ನು ಭೇದಿಸಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವರದಿ ಸಿ.ಎನ್.ಚಂದ್ರೇಗೌಡ

error: