
ಜಾಧವಜಿ ಶಿಕ್ಷಣ ಸಂಸ್ಥೆಯ ೧೦೦ನೇ ಶತಮಾನೊತ್ಸವದ ಆಚರಣೆ ಅಂಗವಾಗಿ ಘೊಷಣೆಯಾದ ಆಂಗ್ಲ ಮಾಧ್ಯಮ ಶಾಲೆಗೆ “ನಾಮಕರಣ ಸಮಾರಂಭ” ಡಾ// ಕಾಮಾಕ್ಷಿ ಭಾಟೆ, ತೃಪ್ತಿ ಭಾಟೆ ಮಸ್ಕಾಯಿ ಹಾಗೂ ಸುಧೀಂದ್ರ ಕುಲಕರ್ಣಿ ಇವರು ರಿಲಾಯನ್ಸ್ ಫೌಂಡೇಶನ್ ಮೂಲಕ ಒದಗಿಸಿರುವ ಅಮೂಲ್ಯ ಮನಸ್ಸಿನಿಂದ ತನು,ಮನ,ಧನದ ಸಹಾಯದ ಮೇರೆಗೆ ಈ ಸಮಾರಂಭ ನೆರೆವೆರಿತು. “ಶ್ರೀ ಪ್ರತಾಪ ಜಾಧವಜಿ ಭಾಟೆ” ಎಂದು ನಾಮಕರಣ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ನುಡಿಯನ್ನು ಅರವಿಂದ ದೇಶಪಾಂಡೆ ಮತ್ತು ಪರಿಚಯ ನುಡಿಯನ್ನು ಅನಿಲ ದೇಶಪಾಂಡೆ(ಹಿಡಕಲ್) ಅವರು ನೆರೆವೆರಿಸಿದರು. ವೇದಿಕೆಯ ಮೇಲಿರುವ ಎಲ್ಲ ಗಣ್ಯರಿಂದ ಸಸಿಗೆ ನೀರು ಹಾಕುವ ಮೂಲಕ ಹಾಗೂ ಪ್ರತಾಪ ಭಾಟೆ ಅವರ ಭಾವಚಿತ್ರಕ್ಕೆ ಪುಷ್ಪಗಳೊಂದಿಗೆ ನಮಸ್ಕರಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಸಮಯದ ಪ್ರಜ್ಞೆ ಬಗ್ಗೆ ಅನುಪಮಜ ರುಣವಾಲ ಅವರು ತುಂಬಾ ಸುಂದರವಾಗಿ ಮಾತನಾಡಿದರು.
“ನಮ್ಮ ಶಾಲೆ, ನಮ್ಮ ಊರು, ನಮ್ಮಹೆಮ್ಮೆ” ಹಾಗೂ “ಒಂದು ಸೇವೆ ಮತ್ತೊಬ್ಬರ ಬಾಳಿಗೆ ಬೆಳಕಾಗಲಿ” ಎಂಬ ಮಾತನ್ನು ಸುಧೀಂದ್ರ ಕುಲಕರ್ಣಿ ತುಂಬಾ ಹೆಮ್ಮೆಯಿಂದ ಹೇಳಿದರು. ಹಾಗೇ ಕಾಮಾಕ್ಷಿ ಭಾಟೆ ಅವರ ಸೇವೆ ನಮ್ಮ ಸಂಸ್ಥೆಯ ಯಶಸ್ಸಿಗೆ ಕಾರಣವಾಗಿದೆ. ಅವರು ತಮ್ಮ ತಂದೆಯ ಸವಿನೆನಪಿನಲ್ಲಿ ತುಂಬಾ ಸುಂದರವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲ ಮುಖ್ಯಸ್ಥರು, ಹಾಗೂ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು
More Stories
ಅಖಿಲಭಾರತ ಕೊಂಕಣಿ ಪರಿಷತ್ ನ 32 ನೇ ಅಧಿವೇಶನ
ಹುಬ್ಬಳ್ಳಿಯ ಸಿಟಿ ಹೈಸ್ಕೂಲ್ ವಿದ್ಯಾರ್ಥಿಗಳ ಉತ್ತಮ ಸಾಧನೆ
ಲೇಖನಿ ಮೌನವಾದ ಹೊತ್ತು ಮತ್ತು ತಳಮಳ