April 25, 2024

Bhavana Tv

Its Your Channel

ಮೂರು ದಿನಗಳ ಕಾಲ ವಿಜೃಂಭಣೆಯಿoದ ನಡೆದ ಹೊಗೆವಡ್ಡಿ ಮುತ್ತಿನಕಟ್ಟೆ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವ.

ಸಾಗರ ತಾಲೂಕು ಹೊಗೆವಡ್ಡಿ ಕೋಟೆ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವ ವು ದಿನಾಂಕ 10-03-2022 ಗುರುವಾರದಿಂದ ಪ್ರಾರಂಭವಾಗಿ ದಿನಾಂಕ 12-3-2022 ಶನಿವಾರ ವರೆಗೆ ಅತ್ಯಂತ ವಿಜೃಂಭಣೆಯಿAದ ನಡೆಯಿತು.

ಜಾತ್ರಾ ಮಹೋತ್ಸವದ ನಿಮಿತ್ತ ದಿನಾಂಕ 10ರಿಂದ ಶ್ರೀ ವೀರಾಂಜನೇಯ ಸನ್ನಿಧಾನದಲ್ಲಿ ದೀಪೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು. ದಿನಾಂಕ 11ರಂದು ಸಾರ್ವತ್ರಿಕ ಅಭಿಷೇಕ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಅತ್ಯಂತ ವಿದ್ಯುಕ್ತವಾಗಿ ಜರುಗಿತು. ದಿನಾಂಕ 12 ರಂದು ಜಾತ್ರಾ ಮಹೋತ್ಸವದ ನಿಮಿತ್ತ ವಿಶೇಷ ಹೋಮ ಹವನಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಬಂದ ಎಲ್ಲಾ ಭಕ್ತಾರಿಗೂ ಪ್ರತಿದಿನ ಅನ್ನಸಂತರ್ಪಣೆ ನಡೆಯಿತು .

ದಿನಾಂಕ 12 ರಂದು ಮುರ್ಡೇಶ್ವರದ ಉದ್ಯಮಿ ಹಾಗೂ ರಾಜಕೀಯ ಮುಖಂಡರಾದ ಈಶ್ವರ ನಾಯ್ಕ ಅಗಲಿದ ತಮ್ಮ ಗೆಳೆಯ ದಿನೇಶ ನಾಯ್ಕ ಸವಿನೆನಪಿಗಾಗಿ ಅನ್ನಸಂತರ್ಪಣೆ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಗಲಿದ ದಿನೇಶ ನಾಯ್ಕರಿಗೆ ಶ್ರದ್ಧಾಂಜಲಿ ಸಭೆ ನಡೆಸಲಾಯಿತು
ಸಭಾ ಕಾರ್ಯಕ್ರಮದಲ್ಲು ಸಿಗಂಧೂರು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರವಿ ಮುಂತಾದವರು ಉಪಸ್ಥಿತರಿದ್ದು ಒಂದು ನಿಮಿಷ ಮೌನ ಆಚರಿಸಿ ಅಗಲಿದ ದಿನೇಶ ನಾಯ್ಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಬದಲ್ಲಿ ರವಿ ಅವರು ಮಾತನಾಡಿದರು.

ದೇವಸ್ಥಾನದ ಧರ್ಮದರ್ಶಿಗಳಾದ ಅನಂತ ನಾಯ್ಕ ಉಗ್ರಾಣಿಮನೆ ಭಟ್ಕಳ ಇವರ ನೇತ್ರತ್ವದಲ್ಲಿ ಮೂರುದಿನಗಳ ಕಾಲ ಜಾತ್ರಾ ಮಹೋತ್ಸವ ಸಂಪನ್ನಗೊAಡಿತು.
ಈ ಸಂದರ್ಭದಲ್ಲಿದೇವಸ್ಥಾನದ ಧರ್ಮದರ್ಶಿ ಅನಂತ ನಾಯ್ಕ ಭಾವನಾ ವಾಹಿನಿದೊಂದಿಗೆ ಮಾತನಾಡಿ ದೇವಸ್ಥಾನದ ಮೂಲ ಹಾಗೂ ಸ್ಥಾಪನೆ ಬಗ್ಗೆ ಮಾತನಡಿ ದೇವಸ್ಥಾನಕ್ಕೆ ಆಗಬೇಕಾದ ಸೌಲಭ್ಯಗಳ ಕುರಿತು ಶಾಸಕ ಹಾಲಪ್ಪನವರಿಗೆ ಮನವಿ ಮಾಡಿದರು.
ಪ್ರತಿದಿನ ಸಾಯಂಕಾಲ ವಿವಿಧ ಮನರಂಜನಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ ನಡೆಯಿತು ಪ್ರತಿದಿನವು ಸಹಸ್ರಾರು ಸಂಖ್ಯೆಯಲ್ಲಿ ಊರು ಪರ ಊರಿನಿಂದ ಭಕ್ತರು ಶ್ರೀ ವೀರಾಂಜನೇಯನ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗಿ ಕೃತಾರ್ಥರಾದರು

error: