April 19, 2024

Bhavana Tv

Its Your Channel

ಕುಡಿಯುವ ನೀರಿನ ಸಮಸ್ಯೆ: ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಚಿಕ್ಕಬಳ್ಳಾಪುರ: ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಎಲ್ಲಡೆ ಮುಂದುವರೆದಿದ್ದು ಇ ಪರಿಸ್ಥಿತಿ ಚಿಕ್ಕಬಳ್ಲಾಪುರದಲ್ಲೂ ಸಮಸ್ಯೆಆಗಿಯೇ ಕಾಡುತ್ತಿದೆ. ಜಿಲ್ಲೆಯ ವಿವಿಧಡೆ ಕುಡಿಯುವ ನೀರು ಸಮರ್ಪಕವಾಗಿಲ್ಲ ಅಭಾವವಿದೆ ಎಂದರೂ ಈ ಬಗ್ಗೆ ಗಮನ ಹರಿಸದ ಇಲಾಖೆಗೆ ಮುತ್ತಿಗೆ ಹಾಕಕುವ ಮೂಲಕ ಗ್ರಾಮಸ್ಥರು ಆಗ್ರಹಿಸುತ್ತಿದ್ದು ಇಂದು ಕೂಡಾ ಕುಡಿಯುವ ನೀರಿಗಾಗಿ ಆಗ್ರಹಿಸಿ ಖಾಲಿ ಬಿಂದಿಗೆ ಹಿಡಿದು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಜನರು ಪ್ರತಿಭಟನೆ ಮಾಡಿದ್ದಾರೆ.

ಜಿಲ್ಲೆಯ ಗುಡಿಬಂಡೆ ತಾಲೂಕಿನ ಭೋಗೇನಹಳ್ಳಿ ಗ್ರಾಮಸ್ಥರು ಕುಡಿಯುವ ನೀರು ಸಮರ್ಪಕ ಪೂರೈಕೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ತಿರುಮಣಿ ಗ್ರಾಮ ಪಂಚಾಯತಿ ಮುಂದೆ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದ ಮಹಿಳೆಯರು ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆ ಹಾಕಿದರು.ಸುಮಾರು ಆರು ತಿಂಗಳಾದರೂ ಕುಡಿಯುವ ನೀರು ಹಾಗೂ ಎತ್ತಿನ ಬಳಕೆ ಮಾಡುವ ನೀರಿನ ಬಗ್ಗೆ ಬೋಗೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಸ್ಪಂದಿಸುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಕುಳಿತುಕೊಂಡ ಮಹಿಳೆಯರು ಗ್ರಾಮದ ಯುವಕರು,ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿ ಮುಂಭಾಗದಲ್ಲಿ ಗ್ರಾಮಸ್ಥರು ಧರಣಿ ಕಳೆದೆ ನಿಲ್ಲಿಸಿ ಕೂಡಲೇ ಸಮಸ್ಯೆಗೆ ಸ್ಪಂದಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಾಳಪ್ಪ. ಬಿ.ಜಿ.ಗಂಗಾಧರಪ್ಪ. ಬಿ.ಜಿ,ರಾಮಾಂಜಿನಪ್ಪ ರಮೇಶ್,ಗಂಗರಾಜು,ಪದ್ಮಾ ನಳಿನಾ ಗಂಗಮ್ಮ ಗಂಗಾಧರ್ ನರಸಮ್ಮ ಸಾವಿತ್ರಮ್ಮ.

error: