March 29, 2024

Bhavana Tv

Its Your Channel

ರಾಜ್ಯದಲ್ಲಿ ಇಂದು ಕಳೆದ 24 ಗಂಟೆಯಲ್ಲಿ 299 ಜನರಿಗೆ ಕೊರೋನಾ ಸೋಂಕು ಪಾಸಿಟಿವ್, 1218 ಕೊರೋನಾ ಸೋಂಕಿತರು ಗುಣಮುಖ.

ಬೆಂಗಳೂರು : ರಾಜ್ಯದಲ್ಲಿ ಇಂದು ಕಳೆದ 24 ಗಂಟೆಯಲ್ಲಿ 299 ಜನರಿಗೆ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆಯಾಗಿದೆ. ಕೊರೋನಾ ಸೋಂಕಿತರಾದಂತ 1218 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿನ ಕೊರೋನಾ ಸಕ್ರೀಯ ಸೋಂಕಿತರ ಸಂಖ್ಯೆ 1950 ಆಗಿದೆ. ಈ ಮೂಲಕ ಕೊರೋನಾ ಸ್ಪೋಟದ ನಡುವೆಯೂ ರಾಜ್ಯದಲ್ಲಿ ಖುಷಿ ಸುದ್ದಿಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಬೆಂಗಳೂರು ನಗರ -21, ಯಾದಗರಿ-44, ಕಲಬುರ್ಗಿ -28, ಮಂಡ್ಯ – 13, ರಾಯಚೂರು – 83, ಉಡುಪಿ -10, ಬೀದರ್ – 33, ಬೆಳಗಾವಿ – 13, ದಾವಣಗೆರೆ -06, ದಕ್ಷಿಣ ಕನ್ನಡ – 14, ವಿಜಯಪುರ – 26, ಉತ್ತರ ಕನ್ನಡ – 05, ಬಳ್ಳಾರಿ -01, ಶಿವಮೊಗ್ಗ -01 ಮತ್ತು ಕೋಲಾರ -01 ಕೊರೋನಾ ಸೋಂಕು ತಗಲುವ ಮೂಲಕ ಇಂದು 299 ಜನರಿಗೆ ಕೊರೋನಾ ದೃಢಪಟ್ಟಿದೆ. ಅಲ್ಲದೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆಯಾದ್ರೇ, 1218 ಜನ ಕೊರೋನಾ ಸೋಂಕಿತರು ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತ ಸಕ್ರೀಯ ಜನರ ಸಂಖ್ಯೆ 1950 ಆಗಿದೆ ಎಂದು ತಿಳಿಸಿದೆ.

error: