April 20, 2024

Bhavana Tv

Its Your Channel

ಹೊಗೆವಡ್ಡಿ ಕೋಟೆ ಶ್ರೀ ವೀರಾಂಜನೇಯ ಕ್ಷೇತ್ರ ೧೨-೧೨-೨೦೨೦ರಂದು ದೀಪೋತ್ಸವ

ಸಾಗರ: ತಾಲೂಕಿನ ಕಟ್ಟಿನಕಾರು ಹೊಗೆವಡ್ಡಿ ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದ ದೀಪೋತ್ಸವ ದಿನಾಂಕ ೧೨-೧೨-೨೦೨೦ರ ಶನಿವಾರದಂದು ನಡೆಯಲಿದೆ.

ಕಾರ್ತಿಕ ಮಾಸದಲ್ಲಿ ಆಚರಿಸುವ ದೀಪೋತ್ಸವವು ಮಹತ್ವದ ಹಿನ್ನೆಲೆ :
ಈ ಮಾಸವು ದೇವ ಹಾಗೂ ಮಾನವನಿಗೆ ಒಂದು ಸೇತುವೆ ಇದ್ದಂತೆ..? ಈ ಮಾಸದಲ್ಲಿ ಯಾರು ಹೆಚ್ಚಾಗಿ ಆಧ್ಯಾತ್ಮ ಸಾಧನೆಯನ್ನು ಮಾಡುತ್ತಾರೋ ಅವರು ಹಿಂದು ಧರ್ಮದಲ್ಲಿ ವಿವರಿಸಲ್ಪಟ್ಟ ಚತುರ್ವಿದ ಪುರುಷಾರ್ಥಗಳಲ್ಲೊಂದಾದ ಮೋಕ್ಷವನ್ನು ಹೊಂದುತ್ತಾರೆ…ಅಥವಾ ದೇವರಲ್ಲಿ ಒಂದಾಗುತ್ತಾರೆ ಎನ್ನಲಾಗಿದೆ…?ದೇವರನ್ನು ಅರಿಯದೇ ದೇವರಲ್ಲಿ ಒಂದಾಗುವುದು ಅಸಾಧ್ಯ …?ಅಸಾಧ್ಯವಾಗಿರುವುದು ಸಾಧ್ಯವಾಗಲು ಏನು ಮಾಡಬೇಕು…? ಜ್ಞಾನ ಸಂಪಾದನೆ ಮಾಡಬೇಕು….ಹಾಗಾದರೆ? ಜ್ಞಾನ ಬೇಕಾದರೆ ಯಾರಲ್ಲಿ ಕೇಳಬೇಕು…? ಬುದ್ದಿವಂತನಾದ ವೀರಾಂಜನೇಯನಲ್ಲಿ ಕೇಳಬೇಕು. ?. ಯಾವುದೇ ಸಂದೇಹ ಬೇಡ . ಬರುವ ೧೨-೧೨-೨೦೨೦ರ ಶನಿವಾರದಂದು ಸಂಜೆ ೫ ಗಂಟೆಗೆ ಶ್ರೀ ಕ್ಷೇತ್ರಕ್ಕೆ ಬಂದು ತಮ್ಮ ಸ್ವ ಹಸ್ತದಿಂದ ಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸಿ ದೀಪೋತ್ಸವವನ್ನು ಆಚರಿಸುವ ಮೂಲಕ. ಹೊಗೆವಡ್ಡಿ ಕೋಟೆ ಶ್ರೀ ವೀರಾಂಜನೇಯನಲ್ಲಿ ಜ್ಞಾನದ ದೀಕ್ಷೆಯನ್ನು ಅನುಗ್ರಹಿಸಲು ಒಂದಾಗಿ ಪ್ರಾರ್ಥಿಸೋಣ. ಶ್ರೀ ವೀರಾಂಜನೇಯನು ಸಂಪೂರ್ಣ ಸಂತುಷ್ಟನಾಗಬೇಕಾದರೆ ಭಕ್ತರು ಸ್ವ ಹಸ್ತದಿಂದ ವೀರಾಂಜನೇಯನ ಸಾನಿಧ್ಯದಲ್ಲಿ ಜ್ಞಾನ ಎನ್ನುವ ದೀಪ ಬೆಳಗಿಸಿ ಧನ್ಯರಾಗೋಣ

ಭಕ್ತಾಧಿಗಳು ಈ ದೇವತಾ ಕಾರ್ಯದಲ್ಲಿ ಪಾಲ್ಲೊಂಡು ಶ್ರೀ ದೇವರ ಕೃಪೆ ಪಾತ್ರರಾಗಬೇಕೆಂದು ಉಗ್ರಾಣಿ ಮನೆ ಕುಟುಂಬಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

error: