April 25, 2024

Bhavana Tv

Its Your Channel

ಮಹಿಳೆಯ ಕತ್ತು ಕೊಯ್ದು, ಬ್ಯಾಟ್ ನಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ

ಕೋಲಾರ :ಮಹಿಳೆಯ ಕತ್ತು ಕೊಯ್ದು, ಬ್ಯಾಟ್ ನಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿದ ಘಟಣೆ ಕೋಲಾರ ನಗರದ ಮಹಾಲಕ್ಷ್ಮಿ ಲೇಔಟ್ ಬಡಾವಣೆಯ ಪ್ಯಾನ್ಸಿ ಮಳಿಗೆ ನಡೆದಿದೆ

೨೯ ವರ್ಷದ ನೀಲವೇಣಿ ಕೊಲೆಯಾದ ಗೃಹಿಣಿಯಾಗಿದ್ದು, ಕೋಲಾರ ನಗರದ ಮಹಾಲಕ್ಷ್ಮಿ ಲೇಔಟ್ ಬಡಾವಣೆಯ ಪ್ಯಾನ್ಸಿ ಮಳಿಗೆ ನಡೆಸುತ್ತಿದ್ದಳು .ನೆನ್ನೆ ಮಧ್ಯಾಹ್ನ ಪ್ಯಾನ್ಸಿ ಸ್ಟೋರ್ ಗೆ ಆಗಮಿಸಿದ ಓರ್ವ ವ್ಯಕ್ತಿ ಕೊಲೆ ಮಾಡಿ ಪರಾರಿಯಾಗಿದ್ದಾನೆ, ಇನ್ನು ಕೊಲೆಯ ನಂತರ ಮಹಿಳೆಯ ಚೈನ್ ಕದ್ದಿರುವ ಆರೋಪಿ, ಬ್ಯಾಟ್ ನಿಂದ ಹೊಡೆದು, ಮೂಟೆಯಲ್ಲಿ ಮೃತದೇಹ ಇಟ್ಟು ಹೋಗಿದ್ದಾನೆ, ಆರೋಪಿ ಬಂದು ಹೋಗುವ ದೃಶ್ಯಗಳು ಪಕ್ಕದ ಮಳಿಗೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ನಂತರ ಸಂಬAದಿಕರು ನೆನ್ನೆಯೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ನೀಲವೇಣಿಯನ್ನ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ, ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಮೃತರ ಶವಪರೀಕ್ಷೆ ನಡೆದಿದ್ದು, ಕೋಲಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಮಾಧ್ಯಮಕ್ಕೆ ಮಾಹಿತಿ ನೀಡಿದರು,

error: