March 29, 2024

Bhavana Tv

Its Your Channel

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಹರಿಹರ ತಾಲೂಕು ಘಟಕದ ವತಿಯಿಂದ ಯೋಗ ಮತ್ತು ಆಧ್ಯಾತ್ಮ ಶಿಬಿರ.

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ, ದಾವಣಗೆರೆ ಜಿಲ್ಲೆ
ಹರಿಹರ ತಾಲೂಕು ಘಟಕದ ವತಿಯಿಂದ ಹರಿಹರ ತಾಲೂಕು ಶಿಕ್ಷಕಿಯರಿಗಾಗಿ ೧೨ದಿನಗಳ ಕಾಲ ಸ್ವಸ್ಥ ಆರೋಗ್ಯ.. ಮಾನಸಿಕ ಒತ್ತಡ ನಿವಾರಣೆಗಾಗಿ ಯೋಗ ಮತ್ತು ಆಧ್ಯಾತ್ಮ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು..

ಉದ್ಘಾಟನಾ ಸಮಾರಂಭ ದಿನಾಂಕ ೫/೪/೨೦೨೧ರಂದು ಕ್ಷೇತ್ರ ಸಮನ್ವಾಧಿಕಾರಿ ಗಳಾದ ಶ್ರೀ ಹೆಚ್ ವಿಶ್ವನಾಥ್ ಸರ್ ರವರು ನೆರವೇರಿಸಿದರು. ಅವರು ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ದೈಹಿಕ ಮತ್ತು ಮಾನಸಿಕ ಒತ್ತಡ ನಿವಾರಣೆಗಾಗಿ ಯೋಗ ಮತ್ತು ಆಧ್ಯಾತ್ಮ ಶಿಬಿರ ಹಮ್ಮಿಕೊಂಡಿದ್ದು..ಉತ್ತಮ ಕಾರ್ಯ *ಮಾಡಿದ್ದೀರಾ ಶುಭವಾಗಲಿ ಎಂದು ಹಾರೈಸಿದರು.. ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು

ಯೋಗ ಗುರು ಮಾತೇ ಸವಿತಾ ಮೇಡಂ ರವರು ಪ್ರತಿದಿನ ಸಂಜೆ ೬ ರಿಂದ ೭.೩೦ರವರಿಗೂ. ಯೋಗಾಭ್ಯಾಸ ಮಾಡಿಸಿ.. ಪ್ರತಿಯೊಂದೂ ಯೋಗಾಸನದ ಮಹತ್ವ ನೀಡುವ ಮೂಲಕ ..ಸರಳವಾಗಿ.. ಸುಲಭವಾಗಿ ಕಲಿಯಲು ಪ್ರೇರೇಪಿಸಿದರು….

ಶಿಬಿರಾರ್ಥಿಗಳು ಉತ್ತಮವಾಗಿ ಆಸಕ್ತಿಯಿಂದ ಕಲಿಯುತ್ತತಿದ್ದುದು ನಿಜಕ್ಕೂ ಹೆಮ್ಮೆಯ ಸಂಗತಿ… ಒಟ್ಟಿನಲ್ಲಿ ಸ್ವಸ್ಥ ಆರೋಗ್ಯ ಮತ್ತು ಮಾನಸಿಕ ಒತ್ತಡ ನಿವಾರಣೆಗಾಗಿ ಯೋಗ ರಾಮಬಾಣ ವಿದ್ದಂತೆ… ಉತ್ತಮ ಕಾರ್ಯ ಆಯೋಜಿಸಿದ ಜ್ಯೋತಿ ಹೆಚ್ ಇವರಿಗೆ ಭಾಗವಹಿಸಿದ ಪ್ರತೀ ಶಿಕ್ಷಕಿಯರು ಧನ್ಯವಾದಗಳನ್ನು ಅರ್ಪಿಸಿದರು….

ಉತ್ತಮ ಸಮಾಜಿಕ ಹಾಗೂ ಶೈಕ್ಷಣಿಕ ಕಾರ್ಯ ಗಳನ್ನು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷರಾದ ಲತಾ ಎಸ್ ಮುಳ್ಳೂರು ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳುವುದರೊಂದಿಗೆ ನಮ್ಮ ಫುಲೆ ಸಂಘಟನೆಯು ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯನ್ನು ಮಾಡುತ್ತದೆ,
೧೨ ದಿನಗಳ ಕಾಲ ಶಿಬಿರವು ಯಶಸ್ವಿ ಯಾಗಿ ನೆರವೇರಲು ಸಹಕರಿಸಿದ ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳಿಗೂ ತುಂಬು ಹೃದಯದ ಧನ್ಯವಾದಗಳು. ಹಾಗೂ ಶಿಬಿರವು ಯಶಸ್ವಿಯಾಗಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿಪುಲೆ ಶಿಕ್ಷಕಿಯರ ಸಂಘದ ವತಿಯಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹರಿಹರ ತಾಲೂಕು ಅದ್ಯಕ್ಷರಾದ ಜ್ಯೋತಿ ಹೆಚ್.
ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಾವತಿ ಬಿ ಎಮ್ ಕೋಶಾಧ್ಯಕ್ಷರಾದ ಪುಷ್ಪಾವತಿ ಏ ಹಾಗೂ ಎಲ್ಲಾ ಹರಿಹರ ತಾ. ಪದಾಧಿಕಾರಿಗಳು ಎಲ್ಲರಿಗು ಹೃದಯಸ್ಪರ್ಶಿ ನಮನಗಳನ್ನು ಸಲ್ಲಿಸಿದರು.
ಪದಾಧಿಕಾರಿಗಳಾದ ರತ್ನಮ್ಮ, ಸವಿತಾ ಬಾಲರೆಡ್ಡಿ ಸವಿತಾ ಎಸ್ ಸುರೇಖಾ… ರೇಣುಕಾ ಕೆ ಎಸ್.. ಶಾಂತ.. ಪಲ್ಲವಿ ನಿರ್ಮಲ.. ತ್ರಿವೇಣಿ .. ಭಾರತಿ..ಪ್ರೇಮ.. ಸುನೀತಾ..ಉಮಾದೇವಿ.ಆಶಾ .ಜ್ಯೋತಿ… ಸುಮಾ.. ವಿಜಯಾ.. ಪೃಥ್ವಿ ರೂಪ ಜ್ಯೋತಿ ಕಾವ್ಯ.. ಶಿಬಿರದಲ್ಲಿ ಭಾಗವಹಿಸಿದ್ದರು

error: