April 26, 2024

Bhavana Tv

Its Your Channel

ಶಿಕ್ಷಕರ ವರ್ಗಾವಣೆಗೆ ಚಾಲನೆ ನೀಡಲು ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಒತ್ತಾಯ

ಏಪ್ರಿಲ್ ೨೬ ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ,ಎರಡು ವರ್ಷಗಳಿಂದ ನೆಲೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆ ಕುರಿತಂತೆ ಸರ್ಕಾರವು ಅಂತಿಮ ತೀರ್ಮಾನ ತೆಗೆದುಕೊಂಡು ಶೀಘ್ರವಾಗಿ ವರ್ಗಾವಣಾ ಪ್ರಕ್ರಿಯೆ ಪ್ರಾರಂಬಿಸಬೇಕೆAದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಘನ ಸರ್ಕಾರವನ್ನು ಒತ್ತಾಯಿಸಿದೆ.

ಸುಮಾರು ೭೦ ಸಾವಿರಕ್ಕೂ ಅಧಿಕ ಶಿಕ್ಷಕರು ಅರ್ಜಿ ಸಲ್ಲಿಸಿ ಈಗಾಗಲೇ ವರ್ಷಗಳೇ ಕಳೆದಿದ್ದಾರೆ,ನ್ಯಾಯಾಲಯದಲ್ಲಿದ್ದ ಎಲ್ಲಾ ಕೇಸ್ ಗಳು ಬಗೆಹರಿದಾಗಿದೆ,ಸರ್ಕಾರ ಇನ್ನಾದರೂ ಶಿಕ್ಷಕರ ವರ್ಗಾವಣೆಗೆ ಚಾಲನೆ ನೀಡಿ, ಬಹು ವರ್ಷಗಳಿಂದ ತಂದೆ ತಾಯಿ.ತಮ್ಮ ಕುಟುಂಬಗಳಿAದ ದೂರ ಉಳಿದು ಮಾನಸಿಕ ನೆಮ್ಮದಿ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಬಹುತೇಕ ಶಿಕ್ಷಕರ ಸಮಸ್ಯೆ ಯಾಗಿರುವ ವರ್ಗಾವಣೆ ಪ್ರಕ್ರಿಯೆ ಶೀಘ್ರವಾಗಿ ಪ್ರಾರಂಬಿಸಲು ರಾಜ್ಯಾದ್ಯಂತ ಈಗಾಗಲೇ ಹಲವಾರು ಸಂಸದರಿಗೆ,ಶಾಸಕರಿಗೆ ಮನವಿಗಳನ್ನು ನೀಡಲಾಗಿದೆ,ಹಾಗೂ ಶಿಕ್ಷಕಿಯರ ಒತ್ತಾಯದ ಹೋರಾಟದ ದನಿಯನ್ನು ,ಗೂಗಲ್ ಮೀಟ್ ಅಭಿಯಾನದ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಘನ ಸರ್ಕಾರದ ಗಮನ ಸೆಳೆಯಲಾಗಿದೆ,
ಇಂತಹ ಕೋವಿಡ್ ತುರ್ತುಪರಿಸ್ಥಿತಿ ಯಲ್ಲೂ ಕೂಡ. ವಿಶೇಷವಾಗಿ ಶಿಕ್ಷಕರ ಸಮಸ್ಯೆಗಳ ಕಡೆ ಗಮನಹರಿಸಿ ಘನ ಸರ್ಕಾರವು ಖಂಡಿತವಾಗಿ ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಮನವಿಗೆ ಸ್ಪಂದಿಸಿ ವರ್ಗಾವಣೆಯ ಅನ್ಲೈನ್ ಪ್ರಕ್ರಿಯೆಗೆ ಶೀಘ್ರವಾಗಿ ಚಾಲನೆ ನೀಡಲಿದೆ ಎಂಬ ಆಶಾಭಾವನೆಯನ್ನು ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ. ಎಸ್.ಮುಳ್ಳೂರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ಹೆಚ್.ರವರು ವ್ಯಕ್ತಪಡಿಸಿದ್ದಾರೆ.

error: