March 28, 2024

Bhavana Tv

Its Your Channel

ಕಸಾಪ ಚುನಾವಣೆ ಮುಂದೂಡಿಕೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯನ್ನು ಮುಂದೂಡುವAತೆ ಸರ್ಕಾರ ತಿಳಿಸಿದ್ದು. ಈ ಹಿನ್ನಲೆಯಲ್ಲಿ, ದಿನಾಂಕ ೦೯-೦೫-೨೦೨೧ರಂದು ನಿಗದಿಪಡಿಸಲಾಗಿದ್ದಂತ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯನ್ನು ಮುಂದೂಡಿಕೆ ಮಾಡಿ, ರಾಜ್ಯ ಸರ್ಕಾರ ಆದೇಶಿದೆ.

ಈ ಕುರಿತಂತೆ ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಎಂ ವೆಂಕಟಸ್ವಾಮಿ ಅವರು, ಕೇಂದ್ರ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯನ್ನು ದಿನಾಂಕ ೦೯-೦೫-೨೦೨೧ಕ್ಕೆ ನಿಗದಿಪಡಿಸಿದ್ದು, ಚುನಾವಣಾ ಪ್ರಕ್ರಿಯೆಯ ಪೂರ್ವ ಸಿದ್ಧತೆಗಳನ್ನು ಬಹುತೇಕ ಅಂತಿಮಗೊAಡಿದೆಯೆAದು, ಕೋವಿಡ್-೧೯ರ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಚುನಾವಣೆಯನ್ನು ನಡೆಸುವ ಬಗ್ಗೆ ಪತ್ರಿಕಾ ವರದಿಗಳಲ್ಲಿ ಸಾಹಿತ್ಯ ಪರಿಷತ್ತಿನ ಮತದಾರರು ಹಾಗೂ ಅಭ್ಯರ್ಥಿಗಳು ಪರ-ವಿರೋಧದ ಅಭಿಪ್ರಾಯಗಳು ಕಂಡುಬAದಿರುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ಕೋವಿಡ್-೧೯ರ ಪ್ರಕರಣಗಳು ಹೆಚ್ಚಾಗುವ ಸಂಭವವಿರುವುದರಿAದ ಚುನಾವಣಾ ಪ್ರಕ್ರಿಯೆಯನ್ನು ಇಂದಿನವರೆಗೆ ಯಾವ ಹಂತದಲ್ಲಿ ಇರುತ್ತದೆಯೋ ಅಲ್ಲಿಂದ ಮುಂದೂಡು, ಮುಂದೆ ಅದೇ ಹಂತದಿAದ ಚುನಾವಣೆ ಪ್ರಕ್ರಿಯೆಯನ್ನು ಯಥಾವತ್ತಾಗಿ ಮುಂದುವರೆಸಲು ಕೋರಿ ಸರ್ಕಾರಕ್ಕೆ ಮನವಿ ಮಾಡಿದರು
ಈ ಬಗ್ಗೆ ಪರಿಶೀಲಿಸಲಾಗಿದೆ, ರಾಜ್ಯದಲ್ಲಿದಲ್ಲಿ ಪ್ರಸ್ತುತ ಕೋವಿಡ್-೧೯ರ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದ್ದು, ಈಗಾಗಲೇ ರಾಜ್ಯಾಧ್ಯಂತ ೧೪೪ ಸೆಕ್ಷನ್ ಜಾರಿಯಾಗಿದ್ದು, ರಾತ್ರಿ ವೇಳೆ ಮತ್ತು ವಾರಾಂತ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಮತದಾರರ ಮತ್ತು ಚುನಾವಣಾ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಠಿಯಿಂದ ಈ ಹಂತದಲ್ಲಿ ಚುನಾವಣೆ ನಡೆಸುವುದು ಸೂಕ್ತವಲ್ಲವೆಂದು ಸರ್ಕಾರವು ಮನಗೊಂಡು, ಕೋವಿಡ್-೧೯ ಸಾಂಕ್ರಾಮಿಕ ರೋಗ ಕಡಿಮೆಯಾಗುವವರೆಗೂ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯನ್ನು ಮುಂದೂಡಲು ತೀರ್ಮಾನಿಸಿದೆ.

ಈ ಹಿನ್ನಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಪ್ರಕ್ರಿಯೆಯನ್ನು ಪ್ರಸ್ತುತ ಯಾವ ಹಂತದಲ್ಲಿ ಇರುತ್ತದೋ ಅಲ್ಲಿಂದ ಮುಂದಿನ ಆದೇಶದವರೆವಿಗೆ ಮುಂದೂಡಿ, ಮುಂದೆ ಇದೇ ಚುನಾವಣೆ ಪ್ರಕ್ರಿಯೆಯನ್ನು ಮುಂದೂಡಿದ ಹಂತದಿAದ ಯಥಾವತ್ತಾಗಿ ಮುಂದುವರೆಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

SOURCE:Kannada News Now

error: