March 29, 2024

Bhavana Tv

Its Your Channel

ಸಾಮಾಜಿಕ ಸೇವೆಯಲ್ಲೂ ತೊಡಗಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ

ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘವು ಕೇವಲ ಶೈಕ್ಷಣಿಕವಾಗಿಯೇ ಅಲ್ಲದೇ ಸಾಮಾಜಿಕ ಸೇವೆ ಮಾಡುವುದರಲ್ಲಿಯೂ ತೊಡಗಿರುವುದು ಸಂಘದ ಒಂದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರು ಅಭಿಪ್ರಾಯಪಟ್ಟಿದ್ದಾರೆ

ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಭುವನೇಶ್ವರಿ ರವರು ರಕ್ತದಾನ ಮಾಡುವ ಮೂಲಕ ಎಲ್ಲಾ ಫುಲೆ ಶಿಕ್ಷಕಿಯರಿಗೂ ಇಂದು ಮಾದರಿಯಾಗಿದ್ದಾರೆ. ಇಂತಹ ರಕ್ತದಾನ ಶಿಬಿರಗಳಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ, ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧ , ಹೀಗೆ ಎಲ್ಲರೂ ಸಕ್ರಿಯವಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ರಕ್ತದಾನದಿಂದ ರಕ್ತ ಕೊರತೆಯಿರುವ ರೋಗಿಗಳಿಗೆ ಜೀವದಾನ ಮಾಡಿದಂತಾಗುವುದು ಇಂತಹ ಕಾರ್ಯಕ್ರಮದಲ್ಲಿ ತೊಡಗಿಸಿಕೊಡು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಮಾದರಿಯಾಗಿದೆ.

ಹಾಗೇಯೇ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶಿಕ್ಷಕಿಯಾದ ಶ್ರೀಮತಿ ಸುವರ್ಣಮ್ಮ ಅವರ ತಂದೆಗೆ ಮೆದುಳಿಗೆ ಪಾರ್ಶ್ವವಾಯು ಉಂಟಾದ ಕಾರಣ ಎರಡೂ ಕಣ್ಣುಗಳು ಕಾಣಿಸದಂತ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸುವ ಸಂದರ್ಭದಲ್ಲಿ ತುಮಕೂರಿನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಅನುಸೂಯದೇವಿ ರವರು ನೆರವಿಗೆ ಬಂದು ಸೂಕ್ತ ಚಿಕಿತ್ಸೆ ಸರಿಯಾದ ಸಮಯಕ್ಮೆ ಒದಗಿಸಿದ್ದಾರೆ. ತಂದೆಗೆ ಕಣ್ಣು ಕಾಣಲು ಶುರುವಾದಾಗ ಮಗಳಾದ ಸುವರ್ಣಮ್ಮರವರು ತಮಗೆ ಸಿಕ್ಕ ನೆರವನ್ನು ನೆನಿಸಿ
ಪುಲೆ ಸಂಘಟನೆಗೆ ಹಾಗೂ ಅನುಸೂಯದೇವಿ ರವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ,

ಹೀಗೆ ರಾಜ್ಯದಲ್ಲಿನ ಏಕೈಕ ಮಹಿಳಾ ಶಿಕ್ಷಕಿಯರ ಸಂಘವಾದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಟನೆಯು ಸಾಮಾಜಿಕ ಜವಾಬ್ದಾರಿಯನ್ನೂ ಸಹ ಹೊತ್ತು ಕೆಲಸ ನಿರ್ವಹಿಸುತ್ತಿದೆ. ರಾಜ್ಯದ ಶಿಕ್ಷಕಿಯರು ಇಂತಹ
ಕೋವಿಡ್ ಲಾಕ್ ಡೌನ್ ತುರ್ತು ಪರಿಸ್ಥಿತಿಯಲ್ಲಿಯೂ ಸಹ ನಮ್ಮ ಸುತ್ತಮುತ್ತಲಿನ ನೆರೆಹೊರೆಯ ಕುಟುಂಬಗಳಿಗೆ
ಕೊರೊನ ಬಗ್ಗೆ ಇರುವ ಭಯವನ್ನು ದೂರಮಾಡುವ ಎಚ್ಚರಿಕೆ ಕ್ರಮಗಳನ್ನು ತಿಳಿಸಿ ಎಲ್ಲರಿಗೂ ಜಾಗೃತಿ ಮೂಡಿಸುವಂತ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಹಿರಿಯರಿಗೆ ಹಾಗೂ ಮಕ್ಕಳಿಗೆ ಹೆಚ್ಚಿನ ಕಾಳಜಿ ನೀಡಿ ಕೊರೊನ ದೂರ ಮಾಡುವ ಎಚ್ಚರಿಕೆ ಕ್ರಮಗಳನ್ನು ತಿಳಿಸಿಕೊಡಬೇಕಾಗಿದೆ.
ಮೇ 1 ರಿಂದ ನಡೆಯುವ ಲಸಿಕ ಅಭಿಯಾನದಲ್ಲಿ ತಪ್ಪದೇ 18 ವರ್ಷ ತುಂಬಿದವರಿಗೆ ಕೋರೊನ ಲಸಿಕೆಯನ್ನು ಹಾಕಿಸಿಕೊಳ್ಳಲು ಈಗಾಗಲೇ ಅನ್ಲೈನ್ ರಿಜಿಸ್ಟ್ರೇಷನ್ ಪ್ರಾರಂಭವಾಗಿದೆ.ನೊಂದಣಿಮಾಡಿಸಲು ನಮ್ಮ ನೆರೆಹೊರೆಯವರಿಗೆ ಸಹಕಾರ ನೀಡಬೇಕಾಗಿದೆ ಹಾಗೂ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಣೆ ಮಾಡಬೇಕಾಗಿದೆ,ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಸೇವೆ ಮಾಡುವುದು ನಮ್ಮ ಸಂಘದ ಕರ್ತವ್ಯವಾಗಿದೆ. ನಮ್ಮ ಸಂಘ,ನಮಗೆ ಹೆಮ್ಮೆಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಜ್ಯೋತಿ ಹೆಚ್.ರವರು ತಿಳಿಸಿದ್ದಾರೆ.

error: