May 11, 2021

Bhavana Tv

Its Your Channel

ರಾಜಾಜಿನಗರ ಬಿಜೆಪಿ ಘಟಕದ ವತಿಯಿಂದ ಇಂದು ಉಚಿತ ಆಂಬುಲೆನ್ಸ್ ಸೇವೆ ಪ್ರಾರಂಭ

ಆಮ್ಲಜನಕ ವ್ಯವಸ್ಥೆ ಹೊಂದಿರುವ ಈ ಆಂಬುಲೆನ್ಸ್ ಅಗತ್ಯವಿರುವವರಿಗೆ ಶೀಘ್ರ ಆಸ್ಪತ್ರೆಗೆ ಸೇರಿಸಲು ಸಹಾಯವಾಗಲಿದೆ. ಇದರ ಜೊತೆ ಸುಮಾರು ೨೦ ಆಮ್ಲಜನಕ ಸಿಲಿಂಡರ್ ಗಳ ಮೂಲಕ ಅಗತ್ಯವಿರುವ ವ್ಯಕ್ತಿಗಳಿಗೆ ಮನೆ ಮನೆಗೆ ಆಮ್ಲಜನಕ ಪೂರೈಸುವ ಕಾರ್ಯ ಪ್ರಾರಂಭವಾಗಿದೆ.

ಭಾಷ್ಯಂ ವೃತ್ತದ ಬಳಿಯಿರುವ ಡಾಕ್ಟರ್ ನಾಗರಾಜ ಆಸ್ಪತ್ರೆಯಲ್ಲಿ ೨೦ ಆಮ್ಲಜನಕ ಪೂರೈಕೆ ಯುಳ್ಳ ಬೆಡ್ ಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಇದು ಕಾರ್ಯ ಆರಂಭವಾಗಲಿದೆ.

ಇದರೊಂದಿಗೆ ಕೋವಿಡ್ ವಾರಿಯರ್ ಗಳಿಗಾಗಿ ಚೈತನ್ಯ ಕೇಂದ್ರವೊ0ದನ್ನು ಪ್ರಾರಂಭಿಸಲಾಗುತ್ತಿದೆ,
ಅಲ್ಲಿ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ದಾದಿಯರು, ವೈದ್ಯರು ಹಾಗೂ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರಿಗೆ ಸ್ಟೀಮ್, ಕುಡಿಯಲು ಸದಾ ಕಷಾಯ ಹಾಗೂ ಕುಡಿಯಲು ಬಿಸಿನೀರು ಸಹ ಲಭ್ಯವಿರುತ್ತದೆ.
ವರದಿ ; ಮಹೇಶ ಶರ್ಮಾ,

error: