May 11, 2021

Bhavana Tv

Its Your Channel

ಕೊರೋನಾ ಮಹಾಮಾರಿ ಸೋಂಕಿಗೆ ಶಿಕ್ಷಕ-ಶಿಕ್ಷಕಿಯರ ಸಾವು ಸಂತಾಪ ಸೂಚಿಸಿದ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯಘಟಕ-ಧಾರವಾಡ

ಧಾರವಾಡ:ಮೇ-೩. ಕೋವಿಡ್ ಎರಡನೇ ಅಲೆಗೆ ಕರ್ನಾಟಕ ಇಂದು ತತ್ತರಿಸಿದೆ,ಎಲ್ಲೆಲ್ಲೂ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯದ ಹಲವು ಶಿಕ್ಷಕರು ಶಿಕ್ಷಕಿಯರು ಈ ಕೊರೊನಾ ಮಹಾಮಾರಿ ಸೋಂಕಿಗೆ ಸಿಲುಕಿ ಸಾವನ್ನಪ್ಪಿದ್ದಾರೆ .ಶಿಕ್ಷಕರ ಇಂತಹ ಅಕಾಲಿಕ ಮರಣ ಪ್ರಕರಣಗಳು ದಿನನಿತ್ಯ ಸುದ್ದಿಯಾಗುತ್ತಲೇ ಇದ್ದು, ನಮ್ಮ ಸಂಘ ಅತೀವ ಕಳವಳ ವ್ಯಕ್ತಪಡಿಸಿದೆ

. ಇದರಿಂದ ನಮ್ಮ ಶಿಕ್ಷಕ ಸಮುದಾಯಕ್ಕೆ ತುಂಬಲಾರದ ನಷ್ಟವಾಗುತ್ತಿದೆ. ಕೊರೊನಾ ಮಹಾಮಾರಿ ಸೋಂಕಿಗೆ ಸಿಲುಕಿ ಅಕಾಲಿಕ ಸಾವನ್ನಪ್ಪಿದ ರಾಜ್ಯದ ಎಲ್ಲಾ ಶಿಕ್ಷಕ ಶಿಕ್ಷಕಿಯರ ಆತ್ಮಕೆ ಚಿರಶಾಂತಿ ಸಿಗಲಿ, ಅವರ ಅವಲಂಬಿತ ಕುಟುಂಬಗಳಿಗೆ ದುಃಖ ಭರಿಸುವಂತ ಶಕ್ತಿ ಆ ಭಗವಂತ ನೀಡಲಿ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಡಾ.ಲತಾ.ಎಸ್.ಮುಳ್ಳೂರ ಹೇಳಿದರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಹೆಚ್ ರವರು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಪರವಾಗಿ ಪ್ರಾರ್ಥನೆ ಮಾಡಿ ,ಭಾವಪೂರ್ಣ ನಮನಗಳನ್ನೊಂದಿಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ..

error: