April 26, 2024

Bhavana Tv

Its Your Channel

ಫುಲೆ ಗೂಗಲ್ ವೆಬಿನಾರ್ ಯಶಸ್ವಿ- ಲಿಮಿಟ್ ಇದ್ದ ಕಾರಣ ಹಲವು ಶಿಕ್ಷಕಿಯರಿಗೆ ನಿರಾಸೆ.

ತುಮಕೂರು: ಮೇ3– ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ತುಮಕೂರು ದಕ್ಷಿಣ ಮತ್ತು ಮಧುಗಿರಿ (ತುಮಕೂರು ಉತ್ತರ) ಜಿಲ್ಲೆಗಳ ಸಹಯೋಗದೊಂದಿಗೆ ನಿನ್ನೆ ಸಂಘಟನೆ ಮತ್ತು ಮಹಿಳಾ ನಾಯಕತ್ವ ಹಾಗೂ ಕೊರೋನ ಸಂಕಷ್ಟದಲ್ಲಿ ಶಿಕ್ಷಕಿಯರ ಪಾತ್ರ ವಿಷಯ ಕುರಿತು ಗೂಗಲ್ ಮೀಟ್ ವೆಬಿನಾರ್ ಮತ್ತು ಸಂವಾದ ಕಾರ್ಯಕ್ರಮ‌ವು
ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ರವರೊಂದಿಗೆ ನಡೆಯಿತು.


ಈ ಕಾರ್ಯಕ್ರಮವೂ ಕೊವಿಡ್ ಬಲಿಯಾಗಿರುವ ಶಿಕ್ಷಕ ಶಿಕ್ಷಕಿಯರನ್ನು ನೆನದು ಮೌನಾಚರಣೆ ಮಾಡುವ ಮೂಲಕ ಪ್ರಾರಂಭಿಸಲಾಯಿತು.ವೆಬಿನಾರ್ ನಲ್ಲಿ ರಾಜ್ಯದ ವಿವಿದ ಭಾಗಗಳಿಂದ ಅನೇಕ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕಿಯರು ಜಾಯಿನ್ ಆಗಲು ಮುಗಿಬಿದ್ದರೂ ಸಹಾ ಕೇವಲ ನೂರು ಮಂದಿಗೆ ಮಾತ್ರ ಗೂಗಲ್ ಮೀಟ್ ನಲ್ಲಿ ಅವಕಾಶ ನಿಗದಿ ಇರುವ ಕಾರಣ ಅದೆಷ್ಟೊ ಶಿಕ್ಷಕಿಯರು ಅವಕಾಶ ಸಿಗದೇ ನಿರಾಶೆ ಅನುಭವಿಸಬೇಕಾಯಿತು.

ಕಾರ್ಯಕ್ರಮಕ್ಕೆ ರಾಜ್ಯದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಹೆಚ್.ರವರು ಸಹಾ ಭಾಗವಹಿಸಿದ ಕಾರಣ ಕಾರ್ಯಕ್ರಮ ಯಶಸ್ವಿಗೆ ಮತ್ತೊಷ್ಟು ಮೆರಗು ತಂದು ಕೊಟ್ಟಿತು. ಈ ಕಾರ್ಯಕ್ರಮವನ್ನು ತುಮಕೂರಿನ ಜಿಲ್ಲಾದ್ಯಕ್ಷರಾದ ಶ್ರೀಮತಿ ಅನುಸೂಯದೇವಿ ಹಾಗೂ ಮಧುಗಿರಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಮ್ಮ ರವರು ಆಯೋಜಿಸಿ ಜಿಲ್ಲೆಯ ಶಿಕ್ಷಕಿಯರಿಗೆ ಭಾಗವಹಿಸುವ ಹಾಗೂ ರಾಜ್ಯಾಧ್ಯಕ್ಷರ ಜೊತೆ ಸಂವಾದ ಮಾಡುವ ಅವಕಾಶ ಒದಗಿಸಿಕೊಟ್ಟಿದ್ದರು.ಒಂದು ಗಂಟೆಗಳ ಕಾಲ ನಿಗದಿಯಾಗಿದ್ದ ಈ ಸಂವಾದ ಕಾರ್ಯಕ್ರಮ ಸುದೀರ್ಘ ಎರಡು ಗಂಟೆ ಗಳ ಕಾಲ ಕ್ರಿಯಾಶೀಲವಾಗಿಯೇ ನಡೆಯಿತು. ಸಂಘಟನೆ ಯಾಕೆ ಬೇಕು ಹಾಗೂ ಹಾಗೂ ಮಹಿಳಾ ನಾಯಕತ್ವ ಹೇಗಿರಬೇಕು ಎಂಬ ಪ್ರಶ್ನೆಗಳಿಗೆ ಸವಿವರವಾಗಿ ಡಾ.ಲತಾ ಎಸ್.ಮುಳ್ಳೂರ ರವರು ಎಲ್ಲರ ಮನಮುಟ್ಟುವ ರೀತಿ ಅರ್ಥೈಸಿದರು.

error: