April 25, 2024

Bhavana Tv

Its Your Channel

ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ : ಇಬ್ಬರು ಡಾಕ್ಟರ್ ಸೇರಿದಂತೆ ಎಂಟು ಮಂದಿ ಸಿಸಿಬಿ ಪೊಲೀಸರ ವಶಕ್ಕೆ…!

ಬೆಂಗಳೂರು : ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಜಯನಗರ ಪೊಲೀಸರ ಕಾರ್ಯಚರಣೆ ನಡೆಸಿ ನೇತ್ರಾ, ರೋಹಿತ್ ಎಂಬವರು ಬಂಧಿಸಿದ್ದಾರೆ.

ಮೂರು ಬೆಡ್ ಕೊಡಿಸಿ ಹಣ ವಸೂಲಿ ಮಾಡಿದ್ದ ಆರೋಪಿಗಳು, ಒಟ್ಟು 1 ಲಕ್ಷದ 7 ಸಾವಿರ ವಸೂಲಿ ಮಾಡಿದ್ದರು,ಎರಡು ಬೆಡ್ ಗೆ ತಲಾ 40 ಸಾವಿರ ಮತ್ತೊಂದು ಬೆಡ್ ಗೆ 67 ಸಾವಿರ ವಸೂಲಿ ಮಾಡಿದ್ದ ಆರೋಪಿಗಳು. ಈ ಬಗ್ಗೆ ಸೂಕ್ತ ಮಾಹಿತಿ ಪಡೆದು ಕಾರ್ಯಾಚರಣೆ ಮಾಡಿದ್ದ ಜಯನಗರ ಇನ್ಸ್ ಪೆಕ್ಟರ್ ಸುದರ್ಶನ್, ಪ್ರಕರಣ ಸಂಬಂಧಿಸಿದಂತೆ ನೇತ್ರಾ ಮತ್ತು ರೋಹಿತ್ ಬಂಧಿಸಿದ ಜಯನಗರ ಪೊಲೀಸರು.

ಪ್ರಕರಣ ಸಂಬಂಧ‌ ಜಯನಗರ ಪೊಲೀಸರಿಂದ ವಿಚಾರಣೆ ಮುಂದುವರಿದೆ. ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ : ಇಬ್ಬರು ಡಾಕ್ಟರ್ ಸೇರಿದಂತೆ ಎಂಟು ಮಂದಿ ಸಿಸಿಬಿ ವಶಕ್ಕೆ ಪಡೆದಿದ್ದಾರೆ.ರಾತ್ರಿಯೇ ಎಂಟು ಮಂದಿಯನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇಬ್ಬರು ಬಿಬಿಎಂಪಿ ಡಾಕ್ಟರ್ ಗಳು, ಡೇಟಾ ಎಂಟ್ರಿ ಆಪರೇಟರ್ ಗಳು ಮತ್ತು ಅಸಿಟ್ಟೆಂಟ್ ಗಳನ್ನ ವಶಕ್ಕೆ ಪಡೆದಿರೊ ಸಿಸಿಬಿ,
ಬೆಡ್ ದಂಧೆಯಲ್ಲಿ ಡಾಕ್ಟರ್ ಗಳ ರೋಲ್ ಬಗ್ಗೆ ತನಿಖೆ,ಅಲ್ಲದೆ ಬೆಡ್ ಬ್ಲಾಕರ್ಸ್ ಡಾಕ್ಟರ್ ಗಳ ಜೊತೆಗಿರೊ ಲಿಂಕ್ ಬಗ್ಗೆ ತನಿಖೆ ನಡೆಯುತ್ತಿದೆ.

ಸದ್ಯ ಇಬ್ಬರು ಡಾಕ್ಟರ್ ಸೇರಿದಂತೆ ಎಂಟು ಮಂದಿಯನ್ನು ಕೂಲಂಕುಷವಾಗಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜಯನಗರ ಬೆಡ್ ಬ್ಲಾಕಿಂಗ್ ಪ್ರಕರಣ :ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಹೇಳಿಕೆ….

“ಕೆಲವೊಂದು ವಾಟ್ಸಪ್ ಗ್ರೂಪ್ ನಲ್ಲಿ ಇವರ ನಂಬರ್ ಹರಿದಾಡ್ತಾ ಇತ್ತು,ಈ ವೇಳೆ ಇವರಿಗೆ ಕರೆ ಬಂದಾಗ ಅವರಿಂದ ಹಣ ಪಡೆದು ಬೆಡ್ ಅಲಾಟ್ ಮಾಡ್ತಿದ್ರು,ಇಬ್ಬರು ಈಗ ಒಟ್ಟು ಐದು ಕೇಸ್ ನಲ್ಲಿ ಭಾಗಿಯಾಗಿದ್ದು ಪತ್ತೆಯಾಗಿದೆ”.

“ಇವರಿಗೆ ಅರೆಸ್ಟ್ ಮಾಡಲಾಗಿದೆ.ಇನ್ನೊಂದು ಸಾಫ್ಟ್ ವೇರ್ ಬಗ್ಗೆ ಬೆಡ್ ಲಾಕಿಂಗ್ ಮತ್ತು ಅನ್ ಲಾಕಿಂಗ್ ಬಗ್ಗೆ ಕೆಲವು ಅಡಚಣೆ ಇತ್ತು.ಇದರ ಬಗ್ಗೆ ಸಂಶಯ ಬಂದು ಎಫ್ಐಆರ್ ಮಾಡಲಾಗಿದೆ.
ಸಿಸಿಬಿ ಪೊಲೀಸರು ತನಿಖೆ ಮಾಡ್ತಿದ್ದಾರೆ.ನಿನ್ನೆ ಬಂಧನವಾದ ಇಬ್ಬರು ಈವೆಂಟ್ ಮ್ಯಾನೇಜ್ಮೆಂಟ್ ಮಾಡ್ತಿದ್ರು.ಸೋಷಿಯಲ್ ವರ್ಕರ್ ಅಗಿ ಇಬ್ಬರು ಕೆಲಸ ಮಾಡ್ತಿದ್ದರು.

“ವಾರ್ ರೂಂ ಸಿಬ್ಬಂದಿ ಜೊತೆ ಸಂಪರ್ಕ ಇರೊ ಬಗ್ಗೆ ಮಾಹಿತಿ ಇದೆ.ಸಿಸಿಬಿ ಪೊಲೀಸರು ಅದರ ಬಗ್ಗೆ ತನಿಖೆ ಮಾಡ್ತಿದ್ದಾರೆ ಅದನ್ನು ಸಹ ಪತ್ತೆ ಹಚ್ಚುತ್ತಾರೆ.” ಎಂದು ಡಿಸಿಪಿ ಹರೀಶ್ ಪಾಂಡೆ ಹೇಳಿಕೆ ನೀಡಿದ್ದಾರೆ

error: