June 22, 2021

Bhavana Tv

Its Your Channel

ಕಿರು ಸೇತುವೆ ನಿರ್ಮಾಣ, ವ್ಯವಸ್ಥಿತ ವಾದ ಮೋಸ, ಎಂದು ಸಾಮಾಜಿಕ ಕಾರ್ಯಕರ್ತ ಬಿಪಿನ್.ಚಂದ್ರಪಾಲ್ ಆರೋಪ

ಕಾರ್ಕಳ : ಕುಕ್ಕಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂಟಿ ಚಾರು ಪದವು ಎಂಬಲ್ಲಿ ಇದ್ದ ಎಕೈಕ ಸಂಪರ್ಕ ರಸ್ತೆಯನ್ನು ಸುಮಾರು ಎಂಟು ದಿನಗಳ ಹಿಂದೆ ಶಾಸಕರ ಅನುದಾನದಿಂದ ನಿರ್ಮಾಣವಾಗುವ ಕಿರು ಸೇತುವೆ ಗಾಗಿ ರಸ್ತೆಯನ್ನು ಕಟ್ ಮಾಡಿದ್ದಾರೆ .ಇದರಿಂದ ರಸ್ತೆಯ ಆಚೇ ಬದಿಯಲ್ಲಿ ಸುಮಾರು ಐವತ್ತು ಮನೆಗಳಿಗೆ ಎಲ್ಲೂ ಹೋಗದ ಪರಿಸ್ಥಿತಿ ಉಂಟಾಗಿದ್ದು ಅದಲ್ಲದೆ ಅವರ ಮನೆಗೆ ಹೋಗುವ ನೀರಿನ ಸಂಪರ್ಕವನ್ನು ಕಡಿದು ಹಾಕಲಾಗಿದೆ. ಅಲ್ಲಿ ಹೆಚ್ಚಾಗಿ ಎಸ್‌ಸಿ ಎಸ್‌ಟಿಯವರ ಮನೆಗಳೆ ಇಲ್ಲಿ ಜಾಸ್ತಿ ಇದ್ದಾರೆ, ಈ ಕೊರೋನಾ ಮಹಾಮಾರಿ ಅಟ್ಟ ಹಾಸದಲ್ಲಿ ಯಾರಿಗೇನು ಆಗುತ್ತೆ ಎಂದು ಹೇಳಲಾಗುವುದಿಲ್ಲ. ತುರ್ತು ಪರಿಸ್ಥಿತಿ ಬಂದಾಗ ಯಾವುದೇ ವಾಹನ ಹೋಗಲು ಆಗುತ್ತಿಲ್ಲ, ಈಗಾಗಲೇ ಮಳೆಗಾಲ ಪ್ರಾರಂಭ ಗೊಂಡಿದ್ದು ಈ ಸಮಯದಲ್ಲಿ ಗುತ್ತಿಗೆದಾರರು ಕಾಂಕ್ರೀಟ್ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆ. ಇಲ್ಲಿ ವ್ಯವಸ್ಥಿತ ವಾದ ಮೋಸ ನಡೆದಿದೆ ಈ ರಸ್ತೆಯನ್ನು ಆದಷ್ಟು ಬೇಗ ಸಂಬAಧ ಪಟ್ಟವರು ಸರಿಪಡಿಸಿ ಎಂದು ಸಾಮಾಜಿಕ ಕಾರ್ಯಕರ್ತ ಬಿಪಿನ್.ಚಂದ್ರ ಪಾಲ್ ಮಾದ್ಯಮಕ್ಕೆ ತಿಳಿಸಿದ್ದಾರೆ.

ವರದಿ ; ಅರುಣ ಭಟ್, ಕಾರ್ಕಳ

error: