June 22, 2021

Bhavana Tv

Its Your Channel

ಉಡುಪಿ ಜಿಲ್ಲೆಯ ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದಿAದ ನೆರವು .ಉಚಿತ ಅಂಬುಲೆನ್ಸ್ ಸೇವೆ.

ಬೆಲ್ಮನ್ : ಉಡುಪಿ ಜಿಲ್ಲೆಯ ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಸೋಮವಾರ ಸಂಘದ ವತಿಯಿಂದ ಪಡಿತರ ಕಿಟ್ ವಿತರಣೆ ಹಾಗೂ ಉಚಿತ ಅಂಬುಲೆನ್ಸ್ ಸೇವೆ ಸಂಘದ ಅಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿ ಚಾಲನೆ ನೀಡಿದರು .

ಬಳಿಕ ಮಾತನಾಡಿ ಅವರು ಕೊರೋನಾ ಕಾರಣದಿಂದ ತೊಂದರೆಗಳಾದ ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಬೋಳ, ನಿಟ್ಟೆ ಹಾಗೂ ಕಾಂತಾವರ ಗ್ರಾಮದ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಸಂಘದ ಆಡಳಿತ ಮಂಡಳಿಯ ಸಮ್ಮತಿ ಯಂತೆ ದಾನ-ಧರ್ಮ ಹಾಗೂ ಸಾರ್ವಜನಿಕ ನೆರವು ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಹೇಳಿದರು.
ಕೊರೋನಾ ಕಾರಣದಿಂದ ತೊಂದರೆಗೊಳಗಾದ ಅಗತ್ಯವುಳ್ಳವರಿಗೆ ಸಕಾಲಕ್ಕೆ ಅಂಬುಲೆನ್ಸ್ ಸೇವೆ ಸಹಿತ ಎಲ್ಲಾ ಸಕಾಲಿಕ ನೆರವು ನೀಡಲಾಗುವುದೆಂದು ಅವರು ಶ್ರೀ ಸಾಯಿ ನಾಗರಿಕ ಸೇವಾ ಟ್ರಸ್ಟ್ ಸಹಕಾರದೊಂದಿಗೆ ಈ ನೆರವು ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಸಾಯಿ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮಶೇಖರ ಟೆಸ್ಟಿ , ಶಿವರಾಮ ಆಚಾರ್ಯ, ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧಾ ಎಸ್ ಪೂಜಾರಿ, ಉಪಾಧ್ಯಕ್ಷ ಕಿರಣ್, ಜಯರಾಮ್ ಸಾಲ್ಯಾನ್ ಬೋಳ, ವ್ಯವಸಾಯ ಸೇವಾ ಸಂಘ ಅಧ್ಯಕ್ಷ ನವೀನ್ ಚಂದ್ರ ಜೈನ್ ನಿರ್ದೇಶಕರಾದ ಅವಿನಾಶ್ ಮಲ್ಲಿ, ಸೂರ್ಯಕಾಂತ ಶೆಟ್ಟಿ ಕಾರ್ಯನಿರ್ವಹಣಾಧಿಕಾರಿ ದಿನೇಶ ಆಚಾರ್ ಉಪಸ್ಥಿತರಿದ್ದರು.

ವರದಿ ; ಅರುಣ ಭಟ್, ಕಾರ್ಕಳ

error: