June 22, 2021

Bhavana Tv

Its Your Channel

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.)ಸಾಣೂರು ಇದರ ಹಿತೈಷಿ ದಾನಿಗಳ ಸಹಕಾರದಿಂದ ಸುಮಾರು ೭೬೦ ಬಡ ಕುಟುಂಬಗಳಿಗೆ ತರಕಾರಿ ಕಿಟ್.

ಕಾರ್ಕಳ ; ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.)ಸಾಣೂರು ಇದರ ವತಿಯಿಂದ ಕೊರೊನ ವೈರಸ ಎರಡನೇ ಅಲೆಯಿಂದ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿದ ಪರಿಣಾಮ ಅದೆಷ್ಟೋ ಕುಟುಂಬಗಳು ಕೆಲಸವಿಲ್ಲದೆ ಅತ್ಯಂತ ಕಷ್ಟದ ಜೀವನ ನಡೆಸುತ್ತಾ ಇದೆ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂತಹ ಕುಟುಂಬಗಳಿಗೆ ಸಣ್ಣ ಪ್ರಮಾಣದ ಆಸರೆಯಾಗಬೇಕೇನ್ನುವ ದೃಷ್ಟಿಯಲ್ಲಿ ೬೭ ವರ್ಷ ಇತಿಹಾಸ ಇರುವ ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇದರ ಹಿತೈಷಿ ದಾನಿಗಳ ಸಹಕಾರದಿಂದ ಸುಮಾರು ೭೬೦ ಬಡ ಕುಟುಂಬಗಳಿಗೆ ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು, ಅದಲ್ಲದೆ ಕೊರೊನ ಸೋಂಕು ತಗುಲಿ ಹೋಮ್ ಐಶೂಲೇಷನ್ ನಲ್ಲಿ ಇದ್ದ ಸುಮಾರು ೭ ಕುಟುಂಬಗಳಿಗೆ ದಿನಸಿ ಹಾಗೂ ಅಕ್ಕಿ ವಿತರಿಸಲಾಯಿತು ಸಾಣೂರು ಗ್ರಾಮ ಪಂಚಾಯತ್ ಗೆ ಡಿಜಿಟಲ್ ಥರ್ಮೋಮೀಟರ್ ಮತ್ತು ಪಲ್ಸ್ ಆಕ್ಸಿಮೀಟರ್ ಯುವಕ ಮಂಡಲದ ವತಿಯಿಂದ ನೀಡಲಾಯಿತು ಇದೆ ಸಂಧರ್ಭದಲ್ಲಿ ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಯ ಮುಂಚೂಣಿ ಕಾರ್ಯಕರ್ತರಾದ ಆಶಾ ಕಾರ್ಯಕರ್ತರನ್ನು ಮತ್ತು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ತರಕಾರಿ ಹಾಗೂ ಅಕ್ಕಿಯನ್ನು ನೀಡಿ ಅವರ ಸೇವೆಯನ್ನು ಗೌರವಿಸಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತಾ ಶೆಟ್ಟಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮಧು ಎಮ್.ಸಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಪ್ರವೀಣ್ ಕೋಟ್ಯಾನ್, ಸಾಣೂರು ಗ್ರಾಮ ಪಂಚಾಯತ್ ಸದಸ್ಯರು ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಯುವಕ ಮಂಡಲದ ಅಧ್ಯಕ್ಷರು ಆದ ಪ್ರಸಾದ್ ಪೂಜಾರಿ, ಮಂಡಲದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಮೋಹನ್ ಶೆಟ್ಟಿ ಮಾಜಿ ಅಧ್ಯಕ್ಷರುಗಳಾದ ಜಗಧೀಶ್ ಕುಮಾರ್ ಪ್ರಕಾಶ್ ಮಡಿವಾಳ, ಪ್ರವೀಣ್ ಶೆಟ್ಟಿ,ಶಂಕರ್ ಶೆಟ್ಟಿ ಕೋಶಾಧಿಕಾರಿ ರಾಜೇಶ್ ಪೂಜಾರಿ, ಸದಸ್ಯರಾದ ,ಹರಿಂದ್ರ ಶೆಟ್ಟಿ ಪ್ರಶಾಂತ್ ಆಚಾರ್ಯ,ಶಶಾಂಕ್ ಶೆಟ್ಟಿ, ದಿವಾಕರ್ ಶೆಟ್ಟಿ, ಜಗನಾಥ್ ಶೆಟ್ಟಿ, ಚೇತನ್.ಎಚ್.ಎಸ್, ಸುಹಾಸ್,ರತ್ನಾಕರ್,ಸ್ವಸ್ತಿಕ್, ಪ್ರವೀಣ್ ಶೆಟ್ಟಿ, ಶ್ರೇಯಸ್ ಶೆಟ್ಟಿ,ದಿಲೀಪ್,ಸಮಿತ್,ಪವನ್ ಶೆಟ್ಟಿ,ಗಣೇಶ್,ಅಜಿತ್,ಪ್ರಮಿತ್ ಸುವರ್ಣ,ವೈಭವ್, ಸೀತಾರಾಮ್, ಜಯಂತ್ ಎಸ್, ಜೋನ್ ಡಿ ಸಿಲ್ವ ಮೊದಲಾದವರು ಕಿಟ್ ವಿತರಣೆಯಲ್ಲಿ ಭಾಗವಹಿಸಿದರು.

error: