July 26, 2021

Bhavana Tv

Its Your Channel

ಕಾರ್ಕಳದಲ್ಲಿ ಪೆಟ್ರೋಲ್ ಬೆಲೆ “೧೦೦ ನಾಟ್ ಔಟ್” ಪ್ರತಿಭಟನಾ ರ‍್ಯಾಲಿ

ಕಾರ್ಕಳ ; ಎಐಸಿಸಿ ನಿರ್ದೇಶನದಂತೆ ಕೆಪಿಸಿಸಿ ಮಾರ್ಗದರ್ಶನದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ನಗರ ವ್ಯಾಪ್ತಿಯ ಪೆಟ್ರೋಲ್ ಬಂಕ್ ಎದುರುಗಡೆ ಪೆಟ್ರೋಲ್ ಬೆಲೆ “೧೦೦ ನಾಟ್ ಔಟ್” ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ಈ ಸಂದರ್ಭ ಮಾತಾಡಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ಕಳೆದ ೬ವರ್ಷಗಳಲ್ಲಿ ಮೋದಿ ಸರಕಾರ ಪೆಟ್ರೋಲ್ ಬೆಲೆಯನ್ನು ಶೇ ೩೦೦ ರಷ್ಟು ಏರಿಕೆ ಮಾಡಿದೆ. ಇದಕ್ಕೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಏರಿಕೆಯ ಕಾರಣ ನೀಡುತ್ತಿದೆ. ವಾಸ್ತವದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಓಯಿಲ್ ಬೆಲೆ ೧ಬ್ಯಾರಲಿಗೆ ಅಂದರೆ ೧೫೯ ಲೀಟರಿಗೆ ೭೨.೪೮ ಡಾಲರ್ ಅಂದರೆ ಸುಮಾರು ೫೨೮೬.೧೩ ರೂ. ಆಗಿದ್ದು, ಭಾರತದಲ್ಲಿ ೧ಲೀಟರ್ ಪೆಟ್ರೋಲಿನ ಬೆಲೆ ಕೇವಲ ೩೩.೭೩ ರೂ. ಆಗಿರುತ್ತದೆ. ಆದ್ರೆ ಕೇಂದ್ರ ಮತ್ತು ರಾಜ್ಯಸರಕಾರ ಅವೈಜ್ಞಾನಿಕ ರೀತಿಯ ಒಟ್ಟು ೬೪ಶೇ. ತೆರಿಗೆಯ ಕಾರಣವಾಗಿ ಇಂದು ಪೆಟ್ರೋಲ್ ೧೦೦ರೂ. ಗಡಿದಾಟಿದ್ದು ಇನ್ನು ಕೇಲವೇ ದಿನಗಳಲ್ಲಿ ಡೀಸಿಲ್ ಬೆಲೆಯೂ ನೂರರ ಗಡಿದಾಟಲಿದೆ ಎಂದು ಹೇಳಿದರು.
ಯುವಕಾಂಗ್ರಸ್ ಜಿಲ್ಲಾ ಅಧ್ಯಕ್ಷ ಪ್ರಸ್ತಾವನೆ ಗೈದು ಮಾತನಾಡಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳ ಜನ ವಿರೋದೀ ನೀತಿಯ ವಿರುದ್ದ ಕಾಂಗ್ರೆಸ್ ವತಿಯಿಂದ ಮುಂದಿನ ದಿನಗಳಲ್ಲಿ ನಿರಂತರ ಪ್ರತಿಭಟನೆಗಳು ನಡೆಯಲಿವೆ ಎಂದರು.
ಕಾರ್ಕಳ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಸಿರಿಯಣ್ಣ ಶೆಟ್ಟಿ, ರಾಜ್ಯ ಕೃಷಿ ಘಟಕದ ಕಾರ್ಯದರ್ಶಿ ಉದಯ ಶೆಟ್ಟಿ, ಪ್ರಭಾಕರ ಬಂಗೇರ,ಯುವ ಕಾಂಗ್ರಸ್ ಅಧ್ಯಕ್ಷ ಯೋಗೀಶ ಇನ್ನಾ, ತಾಪಂ. ಮಾಜಿ ಸದಸ್ಯ ಸುಧಾಕರ ಶೆಟ್ಟಿ, ಮಾಜಿ ಪುರಸಭಾಧ್ಯಕ್ಷ ರಾದ ಸುಬೀತ್, ಸದಸ್ಯರಾದ ಪ್ರತಿಮಾ, ರೆಹಮತ್ ಶೇಖ್, ಹರೀಶ್ ಕುಮಾರ್, ಮಾಜಿ ಪುರಸಭಾ ಸದಸ್ಯರಾದ ವಿವೇಕಾನಂದ ಶೆಣೈ, ನವೀನ್ ದೇವಾಡಿಗ, ರಾಜೇಂದ್ರ ಕುಮಾರ್, ಸುಶಾಂತ್ ಸುಧಾಕರ್, ಸುನೀಲ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ ; ಅರುಣ ಭಟ್ ಕಾರ್ಕಳ

error: