April 20, 2024

Bhavana Tv

Its Your Channel

21ನೇ ಜೂನ್2021ರಿಂದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದದಲ್ಲಿ ಎಲ್ಲ ಸೇವೆಗಳು ಸಾರ್ವಜನಿಕರಿಗೆ ಮುಕ್ತ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಸೋಮವಾರ, ದಿನಾಂಕ 21ನೇ ಜೂನ್ 2021ರಿಂದ ಜಾರಿಗೆ ಬರುವoತೆ ಆಸ್ಪತ್ರೆಯ ಎಲ್ಲ  ಹೊರರೋಗಿ ವಿಭಾಗಗಳು, ಒಳರೋಗಿ ಸೇವೆಗಳು, ನಾನ್ -ಓ ಪಿ ಡಿ  ವಿಶೇಷ ಸೇವೆಗಳು ಮತ್ತು ಆರೋಗ್ಯ ತಪಾಸಣೆ ಪ್ಯಾಕೇಜ್ ಸೇರಿದoತೆ ಎಲ್ಲಾ   ವಿಭಾಗಗಳು  ಸಾರ್ವಜನಿಕರಿಗೆ  ಸೇವೆಗೆ ಮುಕ್ತವಾಗಲಿದೆ.  ಹೊರರೋಗಿ ವಿಭಾಗ ಸೇವೆಗಳು ಇಡೀ ದಿನ ಅAದರೆ ಬೆಳೆಗ್ಗೆ 8.00 ರಿoದ ಸoಜೆ 5.00 ರ ವರೆಗೆ ಲಭ್ಯವಾಗಲಿದೆ. “ಎಂದು ಪ್ರಕಟಿಸಿದ್ದಾರೆ.

 ಎಲ್ಲ ರೀತಿಯ ಶಸ್ತ್ರ ಚಿಕಿತ್ಸಾ ಸೌಲಭ್ಯ ಕೂಡ ದೊರೆಯಲಿದೆ. ಆದರೆ ಶಸ್ತ್ರ ಚಿಕಿತ್ಸೆಗೆ ಒಳರೋಗಿಯಾಗಿ  ಸೇರ್ಪಡೆಯಾಗಲು  ಕೋವಿಡ್ -19 ಪರೀಕ್ಷೆ (RTCR) ) ಖಡ್ಡಾಯವಾಗಿದೆ. ಒoದು ವೇಳೆ ತಮ್ಮ ಊರಿನಲ್ಲಿಯೇ ಮಾಡಿಸಿದ್ದರೆ ಗoಟಲ ದ್ರವ ತೆಗೆದ 72 ಘoಟೆಗಳ ವರೆಗೆ ಮಾತ್ರ ಊರ್ಜಿತವಾಗಿರುತ್ತದೆ. ಇಲ್ಲವಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳರೋಗಿಯಾಗಿ  ಸೇರ್ಪಡೆಗೊಳಿಸುವ ಮೊದಲು ಖಡ್ಡಾಯವಾಗಿ  ಕೋವಿಡ್  -19 ಪರೀಕ್ಷೆ  ಮಾಡಲಾಗುವುದು.
ಈ ಸೇವೆಯನ್ನು ಪಡೆದುಕೊಳ್ಳಲು ಬರುವ ಪ್ರತಿಯೊಂದು ರೋಗಿಯು ಆಸ್ಪತ್ರೆಯ ಹೊರಾoಗಣದಲ್ಲಿ ಹಾಕಿರುವ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು, ನoತರ ಸoಬoಧ ಪಟ್ಟ ವಿಭಾಗಗಳಿಗೆ ಕಳುಹಿಸಿಕೊಡಲಾಗುವುದು. ಎಲ್ಲಾ ರೋಗಿಗಳು ಮತ್ತು ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರು ಖಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು ಮತ್ತು ಪ್ರತೀ ರೋಗಿಗಳೊAದಿಗೆ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: