August 19, 2022

Bhavana Tv

Its Your Channel

ದುಬೈನಲ್ಲಿದ್ದುಕೊಂಡೇ ಹೆಂಡತಿ ಕೊಲೆಗೆ ಗಂಡನ ಮಾಸ್ಟರ್ ಫ್ಲ್ಯಾನ್: ಪೊಲೀಸರ ತನಿಖಾ ತಂಡಕ್ಕೆ ೫೦ ಸಾವಿರ ಘೋಷಿಸಿದ ಡಿಜಿ&ಐಜಿಪಿ

ಉಡುಪಿ: ಸುಪಾರಿ ಹಂತಕರನ್ನು ತನ್ನ ಗೆಳೆಯರೆಂದು ಪರಿಚಯಿಸಿ ಅವರನ್ನು ಫ್ಲ್ಯಾಟಿಗೆ ಕಳುಹಿಸಿ ಪತ್ನಿ ವಿಶಾಲ ಗಾಣಿಗನನ್ನು ಪತಿ ರಾಮಕೃಷ್ಣ ಕೊಲೆ ಮಾಡಿಸಿದ್ದು ಈ ಪೂರ್ವಯೋಜಿತ ಕೊಲೆಗೆ ಪತಿ ಮತ್ತು ಪತ್ನಿಯ ನಡುವಿನ ಭಿನ್ನಾಭಿಪ್ರಾಯವೇ ಕಾರಣ ಎಂದು ಉಡುಪಿ ಎಸ್ಪಿ ವಿಷ್ಣುವರ್ಧನ್ ಹೇಳಿದರು.

ವಿಶಾಲ ಗಾಣಿಗ ಅವರ ಕೊಲೆ ಪ್ರಕರಣದ ಆರೋಪಿಗಳ ಬಂಧನದ ಬಗ್ಗೆ ಪತ್ರಿಕಾಗೊಷ್ಠಿಯಲ್ಲಿ ಮಾಹಿತಿ ನೀಡಿದರು. ವಿಶಾಲ ಅವರ ಪತಿ ರಾಮಕೃಷ್ಣ ಗಾಣಿಗನನ್ನು ಈಗಾಗಲೇ ಬಂಧಿಸಿ ಜುಲೈ ೨೩ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಇನ್ನೋರ್ವ ಆರೋಪಿ ಉತ್ತರ ಪ್ರದೇಶದ ಸ್ವಾಮಿನಾಥ ನಿಶಾದ (೩೮) ಎಂಬಾತನನ್ನು ಗೋರಖ್ಪುರದಲ್ಲಿ ಬಂಧಿಸಿ ಉಡುಪಿಗೆ ಕರೆತರಲಾಗಿದೆ. ಇನ್ನೋರ್ವ ಆರೋಪಿಯ ಬಗ್ಗೆ ಮಾಹಿತಿ ಈಗಾಗಲೇ ಲಭಿಸಿದ್ದು ಶೀಘ್ರವೇ ಬಂಧಿಸಲಾಗುವುದು ಎಂದರು.

ಪ್ರಕರಣದ ಹಿನ್ನೆಲೆ:-
ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಕುಮ್ರಗೋಡು ಎಂಬಲ್ಲಿ ರಾ.ಹೆದ್ದಾರಿ ಪಕ್ಕದಲ್ಲೆ ಇರುವ ಮಿಲನ ರೆಸಿಡೆನ್ಸಿಯ ಫ್ಲ್ಯಾಟ ನಂಬ್ರ-೨೧ರಲ್ಲಿ ವಿಶಾಲ ಗಾಣಿಗೆ ಇವರು ಒಂಟಿಯಾಗಿದ್ದ ಸಮಯದಲ್ಲಿ ಜುಲೈ ೧೨ ರಂದು ಮಧ್ಯಾಹ್ನದ ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಫ್ಲ್ಯಾಟಿಗೆ ಪ್ರವೇಶ ಮಾಡಿ, ವಿಶಾಲ ಗಾಣಿಗರವರನ್ನುಎಲೆಕ್ನಿಕ್ ವಯರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ, ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್ ಸಹಿತ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿದ್ದರು. ಒಂದೆರಡು ದಿನಗಳ ಬಳಿಕ ಪಶ್ಚಿಮವಲಯ ಐಜಿಪಿ ದೇವಜ್ಯೋತಿ ರೇ ಸ್ಥಳ ಪರಿಶೀಲನೆ ನಡೆಸಿದರು.

ತನಿಖೆಗೆ ೫ ತಂಡಗಳು:-
ಈ ಕೊಲೆ ಪ್ರಕರಣವನ್ನು ಭೇದಿಸಲು ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಎನ್., ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಸುಧಾಕರ ಎಸ್. ನಾಯ್ಕ ಅವರ ನಿರ್ದೇಶನದಂತೆ ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಬ್ರಹ್ಮಾವರ ಪಿಎಸ್‌ಐ ಗುರುನಾಥ ಬಿ ಹಾದಿಮನಿಯವರ ತಂಡ ಮಣಿಪಾಲ ಇನ್ಸ್ಪೆಕ್ಟರ್ ಮಂಜುನಾಥ, ಪಿ.ಎಸ್.ಐ ರಾಜಶೇಖರ ವಂದಲಿ, ಮಲ್ಪೆ ಸಿಪಿಐ ಶರಣಗೌಡ, ಪಿ.ಎಸ್.ಐ ಮಧು, ಕಾರ್ಕಳ ಸಿಪಿಐ ಸಂಪತ್‌ಕುಮಾರ್ ಪಿ.ಎಸ್.ಐ. ರಾಘವೇಂದ್ರ ಸಿ ಮತ್ತು ಶ್ರೀಧರ್ ನಾಯ್ಕ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಆರ್.ಡಿ.ಪಿ.ಯ ತಾಂತ್ರಿಕ ತಂಡ ಒಳಗೊಂಡAತೆ ಒಟ್ಟು ೫ ವಿಶೇಷ ತಂಡಗಳನ್ನು ಆರೋಪಿಗಳ ಪತ್ತೆಗೆ ರಚಿಸಲಾಗಿತ್ತು.

ಉತ್ತರ ಪ್ರದೇಶಕ್ಕೆ ತೆರಳಿದ್ದ ತನಿಖಾ ತಂಡ:-
ಆರೋಪಿಗಳ ಪತ್ತೆಗೆ ವಿಶೇಷ ತಂಡದ ಅಧಿಕಾರಿಗಳಾದ ಮಣಿಪಾಲ ಪಿಐ ಮಂಜುನಾಥ, ಮಲ್ಪೆ ಸಿಪಿಐ ಶರಣ ಗೌಡ, ಕಾರ್ಕಳ ಹಾಗ ಮಣಿಪಾಲ ಪಿಎಸ್ ಐಗಳಾದ ಮಧು, ರಾಜಶೇಖರ ವಂದಲಿ ಇವರು ತಾಂತ್ರಿಕ ಸಾಕ್ಷಾ ಧಾರಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಯತ್ನ ನಡೆಸಿ ನಂತರ ಬೇರೆ ರಾಜ್ಯಗಳಿಗೂ ತೆರಳಿ ನಂತರ ಮಹತ್ವದ ಸುಳಿವಿನ ಆಧಾರದಲ್ಲಿ ಉತ್ತರ ಪ್ರದೇಶದ ಗೋರುರಕ್ಕೆ ತೆರಳಿ ಅಲ್ಲಿನ ಎಸ್.ಎಸ್.ಪಿ. ದಿನೇಶ್ ಕುಮಾರ್ (ಐಪಿಎಸ್) ಹಾಗೂ ಅವರ SWಂಖಿ ತಂಡದ ಸಹಭಾಗಿತ್ವದಲ್ಲಿ ಸಂಶಯಿತ ಆರೋಪಿ ಸ್ವಾಮಿನಾಥ ನಿಶಾದ ಎಂಬಾತನನ್ನು ಬಂಧಿಸಿದರು.

ತನಿಖಾ ತಂಡಕ್ಕೆ ೫೦ ಸಾವಿರ ಘೋಷಿಸಿದ ಡಿಜಿ&ಐಜಿಪಿ :-
ಪ್ರಕರಣವನ್ನು ಶೀಘ್ರ ಪತ್ತೆ ಹಚ್ಚಿ ಆರೋಪಿಗಳ ಬಂಧನದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತನಿಖಾ ತಂಡಕ್ಕೆ ೫೦ ಸಾವಿರ ನಗದು ಬಹುಮಾನವನ್ನು ಡಿಜಿ&ಐಜಿಪಿ ಪ್ರವೀಣ್ ಘೋಷಿಸಿದ್ದಾರೆ. ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ತನಿಖಾ ತಂಡದ ಎಲ್ಲಾ ಸದಸ್ಯರಿಗೆ ಪ್ರಶಂಸನೀಯ ಪತ್ರ ನೀಡಿದ್ದಾರೆ.

ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮೃತಳ ಗಂಡ ರಾಮಕೃಷ್ಣ ಪತ್ನಿಯ ಕೊಲೆಗೆ ಸುಪಾರಿ ನೀಡಿರುವುದು ತಿಳಿದು ಬಂದಿದೆ. ಬಳಿಕ ಆರೋಪಿ ರಾಮಕೃಷ್ಣನನ್ನು ಜುಲೈ ೧೯ ರಂದು ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ ಕಳೆದ ೬ ತಿಂಗಳಿನಿAದ ಸಂಚು ನಡೆಸಿ ಸುಫಾರಿ ಹಂತಕರಿಗೆ ಸುಮಾರು ೨ ಲಕ್ಷಕ್ಕಿಂತ ಮಿಕ್ಕಿ ಹಣ ನೀಡಿ ದುಬೈಯಲ್ಲಿ ಕುಳಿತು ಪ್ಲಾನ್‌ಮಾಡಿ ಜುಲೈ ೧೨ ರಂದು ಹಂತಕರನ್ನು ಮನೆಗೆ ಕಳುಹಿಸಿ ಕೊಲೆ ಮಾಡಿಸಿದ ವಿಚಾರ ಈ ವರೆಗಿನ ತನಿಖೆಯಿಂದ ತಿಳಿದು ಬಂದಿದೆ ಎಂದರು.

ಐದಾರು ತಿಂಗಳ ಹಿಂದೆ ಕೊಲೆಗೆ ಸ್ಕೆಚ್.:-
ಈ ಮೊದಲು ಮಾರ್ಚ್ ತಿಂಗಳಲ್ಲಿ ಊರಿಗೆ ಬಂದಿದ್ದ ರಾಮಕೃಷ್ಣ ಸುಪಾರಿ ಹಂತಕರನ್ನು ತನ್ನ ಕುಮ್ರಗೋಡಿನ ಮನೆಗೆ ಕರೆಯಿಸಿಕೊಂಡು ಗೆಳೆಯರೆಂದು ಹೆಂಡತಿಗೆ ಪರಿಚಯಿಸಿದ್ದ. ಬಳಿಕ ಯಾವುದೇ ರೀತಿಯ ಸಂಶಯ ಬರದಂತೆ ನೋಡಿಕೊಳ್ಳುವ ಸಲುವಾಗಿ ಪತ್ನಿಗೆ ಮತ್ತು ಆರೋಪಿಗಳಿಗೆ ಇಂಟರ್ ನೆಟ್ ಮೂಲಕ ಕಾಲ್ ಮಾಡುತ್ತಿದ್ದ. ಅಲ್ಲದೆ ಈ ಮೊದಲು ಒಮ್ಮೆ ಓರ್ವ ಗೆಳೆಯನ ಮೂಲಕ ಪಾರ್ಸೆಲ್ ಕಳುಹಿಸಿದ್ದ. ಅದರಂತೆ ಕೊಲೆನಡೆಯುವ ದಿನ ಜುಲೈ ೧೨ ರಂದು ಕೂಡ ಮನೆಗೆ ತನ್ನ ಗೆಳೆಯರು ಬರಲಿದ್ದಾರೆಂದು ಸಬೂಬು ಹೇಳಿ ಗಂಗೊಳ್ಳಿಗೆ ತೆರಳಿದ್ದ ಪತ್ನಿ ವಿಶಾಲ ಅವರನ್ನು ಒಬ್ಬಂಟಿಯಾಗಿ ಆಟೋದಲ್ಲಿ ಫ್ಲ್ಯಾಟಿಗೆ ವಾಪಾಸಾಗುವಂತೆ ಸೂಚಿಸಿದ್ದ. ಅದರಂತೆ ವಾಪಾಸಾದ ಪತ್ನಿ ಕುಮ್ರಗೋಡಿನ ಫ್ಲ್ಯಾಟಿಗೆ ತಲುಪಿರುವುದು ಖಾತ್ರಿ ಪಡಿಸಿಕೊಂಡ ಬಳಿಕ ಹಂತಕರು ಮನೆಗೆ ತಲುಪಿದ್ದು ವಯರ್ ಉಪಯೋಗಿಸಿ ಕೊಲೆ ಮಾಡಿದ್ದರು. ಆರೋಪಿಗಳು ಮೊದಲೇ ಫ್ಲಾಟ್ ನೋಡಿದ್ದರಿಂದ ಅಂದು ಕೃತ್ಯ ಮುಗಿಸಿ ಪರಾರಿಯಾಗಲು ಇನ್ನಷ್ಟು ಸಹಕಾರಿಯಾಗಿತ್ತು.

ತನಿಖೆಗೆ ಹಿನ್ನಡೆಯಾಗಿದ್ದೇನು..?
ರಾಷ್ಟ್ರೀಯ ಹೆದ್ದಾರಿ ಬಳಿಯೇ ಇರುವ ಈ ಫ್ಲ್ಯಾಟ್ ನಲ್ಲಿ ಯಾವುದೇ ಸಿಸಿ ಟಿವಿ ಕ್ಯಾಮರ ಅಳವಡಿಕೆ ಮಾಡದೇ ಇರುವುದು ಪ್ರಾಥಮಿಕವಾಗಿ ತನಿಖೆ ಹಿನ್ನೆಡೆಯಾಗಲು ಕಾರಣವಾಗಿತ್ತು. ಆದರೆ ತನಿಖಾ ತಂಡ ಜಿಲ್ಲೆಯ ವಿವಿಧ ಕಡೆಗಳ ಸಿಸಿ ಟಿವಿ ಫೂಟೇಜ್ ಪಡೆದಿತ್ತು. ಅಲ್ಲದೆ ಫೊರೆನ್ಸಿಕ್ ತಂಡದ ವಿವಿಧ ಆಯಾಮಗಳ ತನಿಖೆ ಮೂಲಕ ಆರೋಪಿಯನ್ನು ಬಂಧಿಲಾಗಿದೆ.

ಕಾರ್ಯಾಚರಣೆಯಲ್ಲಿದ್ದವರು….
ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತನಿರೀಕ್ಷಕ ಅನಂತ ಪದ್ಮನಾಭ, ಮಣಿಪಾಲ ಇನ್ಸ್ಪೆಕ್ಟರ್ ಮಂಜುನಾಥ, ಮಲ್ಪೆ ವೃತ್ತನಿರೀಕ್ಷಕ ಶರಣಗೌಡ, ಉಡುಪಿ ಇನ್ಸ್ಪೆಕ್ಟರ್ ಪ್ರಮೋದ್ ಪಿ.ಐ, ಕಾರ್ಕಳ ವೃತ್ತನಿರೀಕ್ಷಕ ಸಂಪತ್ ಕುಮಾರ್ ಎ, ಬ್ರಹ್ಮಾವರ ಪಿಎಸ್ ಐ ಗುರುನಾಥ ಬಿ ಹಾದಿಮನಿ, ಕಾರ್ಕಳ ನಗರ ಪಿಎಸ್‌ಐ ಮಧು, ಕಾಪು ಪಿಎಸ್‌ಐ ರಾಘವೇಂದ್ರ, ಶಂಕರನಾರಾಯಣ ಪಿಎಸ್ ಐ ಶ್ರೀಧರ ನಾಯ್ಕ, ಬ್ರಹ್ಮಾವರ ಠಾಣೆ ಮಹಿಳಾ ಪಿಎಸ್‌ಐ ಕೆ.ಆರ್ ಸುನಿತಾ, ಕೋಟ ಪಿಎಸ್‌ಐ ಸಂತೋಷ ಬಿ.ಪಿ, ಬ್ರಹ್ಮಾವರ ಎಎಸ್ ಐ ಕೃಷ್ಣಪ್ಪ, ಬ್ರಹ್ಮಾವರ ವೃತ್ತ ಕಛೇರಿಯ ಎ.ಎಸ್.ಐ ಗೋಪಾಲ ಪೂಜಾರಿ, ನಾರಾಯಣ ಕೆ.ಎಸ್. ಸುಂದರ, ಬ್ರಹ್ಮಾವರ ಠಾಣೆ ಹಾಗೂ ಸಿಬ್ಬಂದಿಗಳಾದ ಚಂದ್ರ ಶೆಟ್ಟಿ, ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಪ್ರದೀಪ್‌ನಾಯಕ, ಸತೀಶ, ವಾಸುದೇವ ಪೂಜಾರಿ, ಅಶೋಕ ಮೆಂಡನ್, ರಾಘವೇಂದ್ರ, ಸಂತೋಷ ಶೆಟ್ಟಿ, ಗಣೇಶ ದೇವಾಡಿಗ, ಸಬಿತಾ, ಜ್ಯೋತಿ ಎಂ, ಶಾಂಭವಿ, ಮೊಹಮ್ಮದ್ ಅಲ್, ದಿಲೀಪ್ ಕುಮಾರ್, ರವೀಂದ್ರ ಹೆಚ್, ಪ್ರಕಾಶ, ಬಸೀರ್, ಸಂದೀಪ್‌ಪಿ.ಕೆ, ವಿಕ್ರಂ, ನೇತ್ರಾವತಿ, ಅಪೂರ್ವ, ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ತಂಡದ ಸಿಬ್ಬಂದಿಗಳಾದ ಶಿವಾನಂದ, ದಿನೇಶ, ನಿತಿನ್ ಹಾಗೂ ಚಾಲಕರಾದ ಶೇಖರ್, ಸಂತೋಷ ಪೂಜಾರಿ ಮತ್ತು ಅಣ್ಣಪ್ಪ ಅವರು ಕೊಲೆ ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು

About Post Author

error: