April 25, 2024

Bhavana Tv

Its Your Channel

ವಾಯ್ಸ್ ಆಪ್ ಚಾಣಕ್ಯ 2022 -ಉಡುಪಿ ಜಿಲ್ಲಾಮಟ್ಟದ ಸಂಗೀತ ಸ್ಪರ್ಧೆ ಸಂಪನ್ನ

ಐಶ್ವರ್ಯ ಗೋಳಿಯಂಗಡಿ ಪ್ರಥಮ

ಗ್ರಾಮೀಣ ಪ್ರತಿಭೆಗಳ ಅನಾವರಣ-ಮುನಿಯಾಲು ಉದಯ ಶೆಟ್ಟಿ

ಹೆಬ್ರಿ : ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ನಿರಂತರವಾಗಿ ಸಂಗೀತ ತರಗತಿಯನ್ನು ನಡೆಸುವುದರ ಜತೆ ಗ್ರಾಮೀಣ ಭಾಗದ ಪ್ರತಿಭಾನ್ವಿತರಿಗೆ ಸ್ಪಧೆ9ಯ ಮೂಲಕ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧಕ್ಷ ಉದಯ ಶೆಟ್ಟಿ ಮುನಿಯಾಲು ಹೇಳಿದರು.

ಅವರು ಡಿ.18ರಂದು ಹೆಬ್ರಿ ಪಿ.ಆರ್.ಎನ್.ಅಮೃತಭಾರತಿ ಪ.ಪೂ.ಕಾಲೇಜು ಸಭಾಂಗಣದಲ್ಲಿ ಹೆಬ್ರಿ ಚಾಣಕ್ಯ ಇನ್ಸಿ ಟ್ಯೂಟ್ ಆಫ್ ಮ್ಯೂಸಿಕ್ ನೇತೃತ್ವ ದಲ್ಲಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ,ಅಮೃತ ಭಾರತಿ ಟ್ರಸ್ಟ್ (ರಿ) ಪಾಂಡುರoಗ ರಮಣನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜು ಹೆಬ್ರಿ ಇದರ ಸಹಯೋಗದೊಂದಿಗೆ ನಡೆದ ವಾಯ್ಸ್ ಆಫ್ ಚಾಣಕ್ಯ-2022 ಸೀಸನ್-5 ಉಡುಪಿ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯನ್ನು ಉದ್ಘಾಟಿಸಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಅಮೃತಭಾರತಿ ಹಾಸ್ಟೆಲ್ ಕಮಿಟಿಯ ಅಧಕ್ಷ ಯೋಗೀಶ್ ಭಟ್ ಸಮಾರಂಭದ ಅಧಕ್ಷತೆ ವಹಿಸಿ ಮಾತನಾಡಿ ನಿರಂತರ ಪರಿಶ್ರಮ ಮತ್ತು ತಾನೇನಾದರೂ ಸಾಧಿಸಬೇಕು ಎಂಬ ಛಲವಿದ್ದಾಗ ಯಶಸ್ಸು ಕಾಣಲು ಸಾಧ್ಯ . ಈ ನಿಟ್ಟಿನಲ್ಲಿ 18ವರ್ಷದ ಬಳಿಕ ಹೆಬ್ರಿಯ ಚಾಣಕ್ಯದಲ್ಲಿ ಹತ್ತನೆ ತರಗತಿಗೆ ತರಬೇತಿ ಪಡೆದು ತೇರ್ಗಡೆ ಹೊಂದಿದ ಯಶೋಧ ಅವರ ಸಾಧನೆ ಇತರಿಗೆ ಮಾದರಿ ಎಂದರು. ಹೆಬ್ರಿ ಅಮೃತಭಾರತಿ ಟ್ರಸ್ಟ್ ಕಾರ್ಯದರ್ಶಿ ಗುರುದಾಸ್ ಶೆಣೈ ಮಾತನಾಡಿದರು.

ಸಾಧಕರಿಗೆ ಸಮ್ಮಾನ :
ಶಿಕ್ಷಣವನ್ನು ಮೊಟಕು ಗೊಳಿಸಿ 18 ವರ್ಷದ ಬಳಿಕ ಹೆಬ್ರಿಯ ಚಾಣಕ್ಯ ಶಿಕ್ಷಣ ಸಂಸ್ಥೆಗೆ ಸೇರಿ ತರಬೇತಿ ಪಡೆದು ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆ ಹೊಂದಿದ ಯಶೋಧ ಶೆಟ್ಟಿ ಅವರನ್ನು ಹಾಗೂ ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ನಿರಂತರವಾಗಿ ನಡೆಯುತ್ತಿರುವ ಹರ್ ದಿನ್ ಜನಗಣಮನ ಕಾರ್ಯಕ್ರಮದ ರೂವಾರಿ ದಿನಕರ್ ಪ್ರಭು ಅವರನ್ನು ಸಮ್ಮಾನಿಸಲಾಯಿತು.

ವಾಯ್ಸ್ ಚಾಣಕ್ಯ 2022 ವಿಜೇತರು
ಫೈನಲ್ ಸ್ಪರ್ಧೆಯಲ್ಲಿ ಒಟ್ಟು 16 ಜನ ಭಾಗವಹಿಸಿದ್ದು ಐಶ್ವರ್ಯ ಜೋಗಿ ಗೋಳಿಯಂಗಡಿ ಪ್ರಥಮ ಸ್ಥಾನ,ಚಾರ ನವೋದಯ ವಿದ್ಯಾಲಯದ ಸ್ಮ್ರತಿ ಮರಾಟೆ ದ್ವಿತೀಯ ,ಅವಿನಾಶ್ ಕಾರ್ಕಳ ತೃತೀಯ,ತನುಷಾ ಕುಂದರ್ ಬ್ರಹ್ಮಾವರ ,ಶರಣ್ಯ ತಂತ್ರಿ ನಂದಳಿಕೆ ,ಸ್ವಪ್ನ ಉಡುಪಿ ಸಮದಾನಕರ ಬಹುಮಾನದ ಜೊತೆ 17776 ನಗದು ಸಹಿತ ಟ್ರೋಪಿ,ಪ್ರಮಾಣ ಪತ್ರ ಪಡೆದುಕೊಂಡರು. ಮೇಘನಾ ಕಿರಿಮಂಜೇಶ್ವರ ,ಚೈತನ್ಯ ಶಿವಪುರ,ಲಾಸ್ಯಶಂಕರನಾರಾಯಣ ತೀರ್ಪುಗಾಗರ ಮೆಚ್ಚುಗೆ ಪ್ರಮಾಣ ಪತ್ರ ಪಡೆದರು ಫೈನಲ್ ನಲ್ಲಿ ಭಾಗವಹಿಸಿದ ಪ್ರಸಾದ್ ಹೆಬ್ರಿ,ವೇದ ಶಿವಪುರ,ಉಮಾಶ್ರಿ ಕುಚ್ಚೂರು,ಗಣೇಶ್ ಅಜೆಕಾರ್,ಸಿಂಚನಾ ಎರ್ಮಾಳ್,ವೈಷ್ಣವಿ ಭಟ್ ಉಡುಪಿ ,ರಂಜಿತ್ ಶೆಟ್ಟಿ ಅವರಿಗೆ ಪ್ರಮಾಣ ಪತ್ರ ಹಾಗೂ ಕ್ಯಾಂಪ್ಕೋ ಗೀಪ್ಟ್ ಹ್ಯಾಂಪರ್ ನೀಡಲಾಯಿತು.

ಈ ಸಂದರ್ಭದಲ್ಲಿ ಅಮೃತಭಾರತಿ ಟ್ರಸ್ಟ್ನ ಅಧ್ಯಕ್ಷ ರವಿ ರಾವ್,ಟ್ರಸ್ಟಿ ವಿಷ್ಣುಮೂರ್ತಿ ನಾಯಕ್,ಹಿರಿಯಡಕ ರೈತರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಕಾರಿ ಪ್ರಶಾಂತ ಶೆಟ್ಟಿ,ಬಂಟರ ಸೌಹಾಧ9 ಸಹಕಾರಿ ಸಂಘದ ಉಪಾಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ ,ಸಂಗೀತ ನಿಧೆ9ಶಕ ಹೆಬ್ರಿ ಕ್ಯಾಂಪ್ಕೋ ಶಾಖಾಧಿಕಾರಿ ರಮೇಶ್ ಡಿ.ಚಾಂತಾರು,ಸAಗೀತ ಶಿಕ್ಷಕಿ ಸ್ಮಿತಾ ಭಟ್ ಉಡುಪಿ,ಹಿನ್ನೆಲೆ ಗಾಯಕ ಡಾ.ನಿತಿನ್ ಆಚಾರ್ಯ ಮಂಗಳೂರು,ತೀರ್ಥಹಳ್ಳಿ ಮಾಳೂರು ಸರಕಾರಿ ಪ್ರೌಢಶಾಲೆ ಶಿಕ್ಷಕ ಗೋಪಾಲಕೃಷ್ಣ ಶೆಟ್ಟಿ ,ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧಕ್ಷ ರಘುರಾಮ ಶೆಟ್ಟಿ,ಲಯನ್ಸ್ ಜಿಲ್ಲಾ ವಕ್ತಾರ ಟಿ.ಜಿ.ಆಚಾರ್ಯ,ಮುದ್ರಾಡಿ ಪ್ರೌಢ ಶಾಲಾ ಶಿಕ್ಷಕ ಚಂದ್ರಶೇಖರ್ ಭಟ್, ನೃತ್ಯ ನಿರ್ದೇಶಕ ಅವಿನಾಶ್ ಪೆರ್ಡೂರು,ನಿರೂಪಕಿ ದೀಪಿಕಾ ಶೆಟ್ಟಿ , ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ವಿಜಯ ಶೆಟ್ಟಿ,ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೇ ವೀಣಾ ಯು.ಶೆಟ್ಟಿ, ನಿತ್ಯಾನಂದ ಭಟ್,ಪ್ರಮೋದಾ ಗೋಪಾಲ ಶೆಟ್ಟಿ, ನಾಗರಾಜ್ ಶೆಟ್ಟಿ,ಮೊದಲಾದವರು ಉಪಸ್ಥಿತರಿದ್ದರು.ಚಾಣಕ್ಯ ಸಮೂಹ ಶಿಕ್ಷಣ ಸಂಸ್ಥೆಯ ಅಧಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ,ಮೂಡುಬಿದ್ರೆ ತಾಲೂಕು ದೈಹಿಕ ಶಿಕ್ಷಣಾ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ,ಅಮೃತಭಾರತಿ ಪ.ಪೂ.ಕಾಲೇಜು ಪ್ರಾಂಶುಪಾಲ ಅಮರೇಶ್ ಹೆಗ್ಡೆ ವಂದಿಸಿದರು.

error: