April 20, 2024

Bhavana Tv

Its Your Channel

ಕಲ್ಯಾಣಪುರದ ಸುವರ್ಣ ನದಿ ತಿರದಲ್ಲಿ ಪಚ್ಚಿಲೆ (,ನೀಲಿಕಲ್ಲು)ಮರಿಯನ್ನು ಕಟ್ಟುವ ಬಗ್ಗೆ ಮಾಹಿತಿ ಕಾರ್ಯಕ್ರಮ

ಉಡುಪಿ: ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮಲ್ಪೆ ಮೀನುಗಾರಿಕಾ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಇವರು ಪಚ್ಚೆಲೆ ಕೃಷಿಯನ್ನು ಪ್ರಾರಂಭಿಸಿದ್ದು, ಪಚ್ಚೆಲೆ ಮರಿಯನ್ನು ಕಟ್ಟುವ ಕೆಲಸದಲ್ಲಿ ಕಂಪನಿಯ ನಿರ್ದೇಶಕರು ಮತ್ತು ಷೇರುದಾರರು ಕಲ್ಯಾಣಪುರದ ಸುವರ್ಣ ನದಿ ತಿರದಲ್ಲಿ ಭಾಗವಹಿಸಿದರು.

ಪಚ್ಚೆಲೆಗಳು ಸಮುದ್ರದಲ್ಲಿರುವ ಕಲ್ಲಿನಲ್ಲಿ ಅಂಟಿಕೊ0ಡು ಬೆಳೆಯುತ್ತದೆ. ನೀರಿನ ಮಟ್ಟ ಕಡಿಮೆ ಇರುವ ಸಮಯದಲ್ಲಿ ಮರಿಗಳು ಸಿಗುತ್ತದೆ. ಆ ಮರಿಗಳನ್ನು ತಂದು ಬಿಡಿ ಬಿಡಿಯಾಗಿ ತೆಗೆದು ಒಂದು ಪಾತ್ರೆಯಲ್ಲಿ ಹಾಕಿ ಇಟ್ಟುಕೊಂಡು ರೋಪ್ ಗೆ ಹಾಕಿ ಬಟ್ಟೆಯಿಂದ ಕಟ್ಟಿ ಉಪ್ಪು ನೀರಿನ ಹೊಳೆಯಲ್ಲಿ ಹಾಕಿರುವ ಚಪ್ಪರದಲ್ಲಿ ನೆಲಕ್ಕೆ ತಾಗದಂತೆ ನೇತು ಹಾಕಬೇಕು. ಒಂದು ಮೂರು ದಿನದಲ್ಲಿ ಆ ರೋಪಿಗೆ ಹಾಕಿರುವ ಮರಿ ರೋಪಿಗೆ ಅಂಟಿಕೊAಡು ಆ ಬಟ್ಟೆ ನೀರಿಗೆ ಕರಗಿ ರೋಪಿಗೆ ಗಟ್ಟಿಮಾಡಿ ಕಚ್ಚಿಕೊಂಡು ಬೆಳೆಯುತ್ತದೆ. ಆ ಹೊಳೆಯಲ್ಲಿ ಏರಿಳಿತಕ್ಕೆ ಬರುವ ಆಹಾರ ಪದಾರ್ಥಗಳನ್ನು ತಿಂದು ಬೆಳೆಯುತ್ತದೆ. 3-4 ತಿಂಗಳಿಗೆ ಸರಿಸುಮಾರು 4 ಇಂಚಿನ ತನಕ ಬೆಳೆಯುತ್ತದೆ.ಇನ್ನು ಬೆಳೆಸಿದರೆ ಇನ್ನೂ ಬೆಳೆಯುತ್ತದೆ.ಇದಕ್ಕೆ ಗೋವಾ,ಕೇರಳ,ಮುಂಬೈನಲ್ಲಿ ಭಾರೀ ಬೇಡಿಕೆ ಇದೆ. ಇದಕ್ಕೆ 400-500 ರೂಪಾಯಿಗಳಿಗಿಂತಲು ಅಧಿಕ ಬೆಲೆ ಸಿಗುತ್ತದೆ.
ಈ ಕಾರ್ಯಕ್ರಮವು ಅನೇಕ ಮಹಿಳೆಯರಿಗೆ ಸ್ವಉದ್ಯಮಕ್ಕೆ ಪ್ರೇರಣೆಯನ್ನು ನೀಡಿತ್ತದೆ. ಕಂಪನಿಯವರು ಕಲ್ಯಾಣಪುರದ ಸುವರ್ಣ ನದಿ ದಂಡೆಯ ಮೇಲೆ ಮಹಿಳೆಯರಿಗೆ ಹಾಗೂ ಷೇರುದಾರರಿಗೆ ಪಚ್ಚಿಲೇ ಕೃಷಿ ಬಗ್ಗೆ ಮಾಹಿತಿ ನೀಡಿದರಲ್ಲದೆ ಮೀನುಗಾರರೊಂದಿಗೆ ಕಂಪನಿಯ ನೀರ್ದೆಶಕರು ಮತ್ತು ಷೇರುದಾರರು ಪಚ್ಚೆಲೆ ಕಟ್ಟುವ ಕೆಲಸದಲ್ಲಿ ಪಾಲ್ಗೊಂಡರು.

error: