March 29, 2024

Bhavana Tv

Its Your Channel

ಕಾರ್ಕಳ ರೋಟರಿ ಕ್ಲಬ್ ವತಿಯಿಂದ ಸಾವಯವ ಕೃಷಿಗೆ ಉತ್ತೇಜಿಸುವ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ .

ಉಡುಪಿ: ಕಾರ್ಕಳ ರೋಟರಿ ಕ್ಲಬ್ ವತಿಯಿಂದ ರೋಟರಿ ಜಿಲ್ಲೆ RID 3182 ಇದರ ರೈತ ಬಂಧು ಯೋಜನೆಯಡಿ ಪ್ರಗತಿಪರ ಕೃಷಿಕ ಗೋಪಾಲ ಪೂಜಾರಿ ಅವರ ಕೃಷಿ ಕ್ಷೇತ್ರದ ಆವರಣದಲ್ಲಿ ಸಾವಯವ ಕೃಷಿಗೆ ಉತ್ತೇಜಿಸುವ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಐಐಟಿ ನಿವೃತ್ತ ಉಪನ್ಯಾಸಕ ಶ್ರೀಕುಮಾರ್ ಭಾಗವಹಿಸಿದರು. ಹವಾಮಾನ ಸಂಕಟದ ಸಂದರ್ಭದಲ್ಲಿ ಸಾವಯವ ಕೃಷಿ ಮಹತ್ವ ಇದರ ಬಗ್ಗೆ ಮಾತನಾಡಿದರು. ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷೆ ರೊ ರೇಖಾ ಉಪಾಧ್ಯಾಯ ಅಧ್ಯಕ್ಷತೆ ವಹಿಸಿ ಎಲ್ಲರನ್ನು ಸ್ವಾಗತಿಸಿದರು ಹಾಗೆ ಕಾರ್ಯಕ್ರಮವನ್ನು ನಿರೂಪಿಸಿದರು . ಸ್ಥಳೀಯ ಹದಿನೈದು ಮಂದಿ ಸಾವಯವ ಕೃಷಿಕರಿಗೆ ಸನ್ಮಾನಿಸಲಾಯಿತು. ಸಾವಯವ ಗೊಬ್ಬರ, ಎರಡು ಬಗ್ಗೆ ಕೋಳಿ ಆಹಾರ, ಪಶು ಆಹಾರ, ಹಿಂಡಿ, ಬೈಹುಲ್ಲು ರೈತರಿಗೆ ನೀಡಲಾಯಿತು. ಎರೆಹುಳ ಗೊಬ್ಬರ, ಜೇನುಕೃಷಿ, ಬಯೋಗ್ಯಾಸ್ ಬಗ್ಗೆ ಪ್ರಾತ್ಯಕ್ಷಿಕವಾಗಿ ಮಾಹಿತಿಯನ್ನು ಹಾಗೂ ಸಹಾಯವನ್ನು ನೀಡಲಾಯಿತು. ಸಾವಯವ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ತೋಡಿಕಾನ ಅವರನ್ನು ಹಾಗೂ ಶ್ರೀ ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಪ್ರಗತಿಪರ ಕೃಷಿಕ ಗೋಪಾಲ್ ಪೂಜಾರಿ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಶಶಿಕಲಾ ಕೆ ಹೆಗ್ಡೆ, ಖಜಾಂಜಿ ಅಮರನಾಥ್ ಪ್ರಸಾದ್ ರೊ ಸೌಜನ್ಯ ಉಪಾಧ್ಯಾಯ, ಕೃಷಿಕ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.

error: