April 17, 2024

Bhavana Tv

Its Your Channel

ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ಮಣಿಪಾಲ ಆರೋಗ್ಯ ಕಾರ್ಡ್ ವಿತರಿಸಿದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಕಾರ್ಕಳ, ತಾಲೂಕು ಪತ್ರಕರ್ತರ ಸಂಘದ ಸದಸ್ಯರಿಗೆ ಮಣಿಪಾಲ ಆರೋಗ್ಯ ಕಾರ್ಡ್ ಗಳನ್ನು ಇಂದು ಪ್ರವಾಸಿ ಬಂಗಲೆಯಲ್ಲಿ ದಕ್ಷಿಣ ಕನ್ನಡ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಸಂಘದ ಸದಸ್ಯರಿಗೆ ಹಂಚಿದರು. ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಗಳಾದ ಡಾಕ್ಟರ್ ಕೀರ್ತಿನಾಥ ಬಳ್ಳಾಲ್ ಆರೋಗ್ಯ ಆರೋಗ್ಯಕಾರ್ಡ್ ನ ವಿಶೇಷತೆಯನ್ನು ವಿವರಿಸಿದರು. ನಂತರ ಮಾತನಾಡಿದ ಸಚಿವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಶಿಕ್ಷಣದಲ್ಲಿ ಹಾಗೂ ವೈದ್ಯಕೀಯದಲ್ಲಿ ತುಂಬಾ ಮುಂದುವರಿದ ಅಭಿವೃದ್ಧಿ ಹೊಂದಿದ ಜಿಲ್ಲೆಗಳಾಗಿವೆ. ಇದಕ್ಕೆ ಬಹಳಷ್ಟು ಮಹನೀಯರು ಶ್ರಮಪಟ್ಟಿದ್ದಾರೆ. ಎಂದು ಹೇಳಿದರು.

ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುತ್ತದೆ. ಕೊರೊನ ಸಂದರ್ಭದಲ್ಲಿ ಕೊರೋನಾ ನಿಯಂತ್ರಣ ಮಾಡುವಲ್ಲಿ ಪತ್ರಕರ್ತರು ತುಂಬಾ ಶ್ರಮಪಟ್ಟಿರುತ್ತಾರೆ. ನಾವುರಾಜ್ಯದಲ್ಲಿ ನಾವುಪ್ರಥಮವಾಗಿ ಆಯುಷ್ಮಾನ್ ಭಾರತ್ ಕಾರ್ಡ್ ಗಳನ್ನು ಬಳಸುವಂತೆ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸೂಚಿಸಿದ್ದೇವೆ ಎಂದು ಹೇಳಿದರು. ಪತ್ರಕರ್ತರ ಸಂಘದಿAದ ಸನ್ಮಾನ ಸ್ವೀಕರಿಸಿ. ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ವೇದಿಕೆಯಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಆರ್ ಬಿ ಜಗದೀಶ್, ಕಾರ್ಯದರ್ಶಿ ಗಣೇಶ್ ನಾಯಕ್, ತಾಲೂಕು ದಂಡಾಧಿಕಾರಿ ಪುರಂದರ ಹೆಗ್ಗಡೆ, ಮಣಿಪಾಲ ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕರಾದ ಶ್ರೀ ಮೋಹನ ಶೆಟ್ಟಿ, ಶ್ರೀನಿವಾಸ್ ಭಾಗವತ್ ಉಪಸ್ಥಿತರಿದ್ದು, ಮೊಹಮ್ಮದ್ ಶರೀಫ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.

error: