April 20, 2024

Bhavana Tv

Its Your Channel

ಡ್ರಗ್ಸ್ ಮಾರಾಟ ಜಾಲ : ಪೊಲೀಸರಿಂದ ಆರೋಪಿಯ ಬಂಧನ..!

ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲದ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಫಝಾಲ್ ಎಂದು ತಿಳಿದು ಬಂದಿದೆ.ಆರೋಪಿಯ ಬಳಿ 30 ಗ್ರಾಂ ಬ್ರೌನ್ ಶುಗರ್ , 54, MDMA ಮಾತ್ರೆಗಳು ಅಂದಾಜು 4,62,000 ಮೌಲ್ಯದ ಡ್ರಗ್ಸ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಾರ್ಕ್ ವೆಬ್ ಆನ್ಲೈನ್ ಮೂಲಕ ಬರುವ ಡ್ರಗ್ಸ್ ಗಳನ್ನು ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.ಕುಂದಾಪುರ ಎ.ಎಸ್.ಪಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನ ದಂತೆ ಮಣಿಪಾಲದ ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಪಿ.ಎಸ್.ಐ ರಾಜಶೇಖರ್ ಮತ್ತು ಅವರ ತಂಡದ ಕಾರ್ಯಾಚರಣೆಯಿಂದ ಆರೋಪಿ ಒಬ್ಬನನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ

error: