April 18, 2024

Bhavana Tv

Its Your Channel

ಕಾರ್ಕಳದ ಮಠದ ಕೆರೆಯಲ್ಲಿ ಸ್ವರ್ಣಾರಾಧನ ಕಾರ್ಯಕ್ರಮಕ್ಕೆ ಚಾಲನೆ

ಕಾರ್ಕಳ: ಕಾರ್ಕಳದ ಇತಿಹಾಸ ಪ್ರಸಿದ್ಧವಾದ ಸಾಣೂರು ಮಠದ ಕೆರೆ ಅಂಗಳದಲ್ಲಿ ಮಹತ್ವಾಕಾಂಕ್ಷೆಯ ಸ್ವರ್ಣಾರಾಧನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಡುಪಿ ಜಿಲ್ಲೆಯಲ್ಲಿ ನಾಲ್ಕು ತಾಲೂಕಿನ ಜನರಿಗೆ ಕುಡಿಯುವ ನೀರು ಒದಗಿಸುವ ಸ್ವರ್ಣಾ ನದಿಯ ಶುದ್ಧೀಕರಣದ ಮಹಾ ಉದ್ದೇಶವನ್ನು ಇಟ್ಟುಕೊಂಡು ಆರಂಭವಾದ ಈ ಯೋಜನೆಯನ್ನು ಕಾರ್ಕಳದಲ್ಲಿ ಅನುಷ್ಠಾನ ಮಾಡುವ ಈ ಯೋಜನೆಯನ್ನು ಕಾರ್ಕಳ ಪುರಸಭೆಯ ಅಧ್ಯಕ್ಷರಾದ ಸುಮಾ ಕೇಶವ್ ಗಿಡವನ್ನು ನೆಡುವುದರ ಮೂಲಕ ಉದ್ಘಾಟನೆ ಮಾಡಿ ಶುಭ ಕೋರಿದರು. ಸ್ವಾರ್ಣಾರಾಧನ ಯೋಜನೆಯ ಜಿಲ್ಲಾ ಅಧ್ಯಕ್ಷರಾದ ಡಾಕ್ಟರ್ ನಾರಾಯಣ ಶೆಣೈ ಅವರು ಯೋಜನೆಯ ವಿಸ್ತಾರವಾದ ಪರಿಚಯ ನೀಡಿ ಕಾರ್ಕಳದ ಎಲ್ಲಾ ಸಂಘ ಸಂಸ್ಥೆಗಳ ಬೆಂಬಲ ಕೋರಿದರು. ೬೧ ಕಿಲೋಮೀಟರ್ ಉದ್ದಕ್ಕೆ ಹರಿಯುವ ಮತ್ತು ಶುದ್ಧ ಕುಡಿಯುವ ನೀರನ್ನು ಹೊಂದಿರುವ ಈ ನದಿಯನ್ನು ಪೂಜ್ಯ ಭಾವನೆಯಿಂದ ಆರಾಧನೆ ಮಾಡುವ ಮತ್ತು ನದಿಯ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಈ ಕಾರ್ಯಕ್ರಮ ಅತ್ಯಂತ ಮಹತ್ವಪೂರ್ಣ ಎಂದು ಅವರು ಹೇಳಿದರು. ನಿಟ್ಟೆ ಡಿಪ್ಲೊಮಾ ಕಾಲೇಜಿನ ಪ್ರಾಧ್ಯಾಪಕ ವೆಂಕಟರಮಣ ಪ್ರಸಾದ, ಪುರಸಭೆಯ ಉಪಾಧ್ಯಕ್ಷೆ ಪಲ್ಲವಿ, ಸ್ವಚ್ಛ ಕಾರ್ಕಳ ಬ್ರಿಗೇಡಿಯರ್ ಸಂಸ್ಥೆಯ ಫೆಲಿಕ್ಸ್ ವಾಜ್ ಮುಖ್ಯ ಅತಿಥಿಗಳಾಗಿ ಶುಭ ಕೋರಿದರು. ಸ್ವಚ್ಚ ಕಾರ್ಕಳ ಬ್ರಿಗೇಡ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಘಟಕ, ರೋವರ್ಸ್ ಮತ್ತು ರೇಂಜರ್ಸ್, ರೋಟರಿ ಆನ್ಸ್ ಮತ್ತು ರೋತರಾಕ್ಟ್, ಯುವ ವಾಹಿನಿ ಕಾರ್ಕಳ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದವು. ರೋವರ್ಸ್ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಮಾನಸ ಸ್ವಾಗತ ಮಾಡಿದರು. ವಿಜ್ಞೆಶ್ ಸಂಕಲ್ಪ ಬೋಧನೆ ಮಾಡಿದರು. ಎಛಿi ರಾಜೇಂದ್ರ ಭಟ್ ಅವರು ಪ್ರಸ್ತಾವನೆ ಗೈದರು,ರೋಟರಿ ಆನ್ಸ್ ಅಧ್ಯಕ್ಷೆ ರಮಿತ ಶೈಲೇಂದ್ರ ರಾವ್ ರಾಜೇಂದ್ರ ಅಮೀನ್, ಜಗದೀಶ್ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು. ಯುವ ವಾಹಿನಿ ಅಧ್ಯಕ್ಷ ಗಣೇಶ್ ಸಾಲ್ಯಾನ್ ಧನ್ಯವಾದ ಅರ್ಪಿಸಿದರು.

error: