April 19, 2024

Bhavana Tv

Its Your Channel

ಸುಳ್ಸೆ ಕಟ್ ಬೆಲ್ತೂರು ಶಾಲೆಯಲ್ಲಿ ಗ್ರಾಮ ನೈರ್ಮಲ್ಯ ದ ಬಗ್ಗೆ ಗ್ರಾಮದ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಉಡುಪಿ ; ಹಿರಿಯ ಪ್ರಾಥಮಿಕ ಶಾಲೆ ಸುಳ್ಸೆ ಕಟ್ ಬೆಲ್ತೂರು ಶಾಲೆಯಲ್ಲಿ ರಾಷ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಪ್ರಾಯೋಜಕತ್ವದಲ್ಲಿ,ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಶ್ರೀ ಮಹಾವಿಷ್ಣು ಯುವಕ ಮಂಡಲ ಕಟ್ ಬೆಲ್ತೂರು, ಮಾನಸ ಯುವತಿ ಮಂಡಳಿ ಕಟ್ ಬೆಲ್ತೂರು ಇವರ ಸಂಯಕ್ತ ಆಶ್ರಯದಲ್ಲಿ “ಗ್ರಾಮ ನೈರ್ಮಲ್ಯ ದ ಬಗ್ಗೆ ಗ್ರಾಮದ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊAಡಿತು.
ಕಾರ್ಯಕ್ರಮ ದ ಉದ್ಘಾಟನೆಯನ್ನು ಸಂಗೀತಾ ಕರ್ತ, ಉಪ ಮಹಾಪ್ರಭಬಂಧಕರು,ನಬಾರ್ಡ ಬೆಂಗಳೂರು ಇವರು ದೀಪ ಬೆಳಗಿಸಿ ಉಧ್ಗಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಶೇಖರ ಬಳೆಗಾರ ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ನಾಗೇಂದ್ರ. ಜೆ: ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬಸ್ರೂರು ಗ್ರಾಮ ಪಂಚಾಯತ್ ರವರು ಸ್ವಚ್ಛತೆ, ಕಸ ನಿರ್ವಹಣೆ ಮತ್ತು ಗ್ರಾಮ ನೈರ್ಮಲ್ಯ ದ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮನೋಹರ್ ಕಟ್ಗೇರಿ:ಮುಖ್ಯ ವ್ಯವಸ್ಥಾಪಕರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಶ್ರೀ ನರಸಿಂಹ ಶ್ರೀ ಮಹಾವಿಷ್ಣು ಯುವಕ ಮಂಡಲ ಕಟ್ ಬೆಲ್ತೂರು, ಶ್ರೀ ಶ್ಯಾಮಲಾ ಮಾನಸ ಯುವತಿ ಮಂಡಳಿ ಕಟ್ ಬೆಲ್ತೂರು, ಶ್ರೀ ಮಂಜು ದೇವಾಡಿಗ ಶಾಲಾಭಿವೃಧ್ಧಿ ಸಮಿತಿ ಮಾಜಿ ಸದಸ್ಯರು, ಶ್ರೀಮತಿ ಪೂರ್ಣಿಮಾ, ಶಾಲಾಭಿವೃಧ್ಧಿ ಸಮಿತಿಯ ಸದಸ್ಯರು , ಶ್ರೀಮತಿ ಅನ್ನಪೂರ್ಣಮ್ಮ, ಸದಸ್ಯರು, ಮಾನಸ ಯುವತಿ ಮಂಡಳಿ ಕಟ್ ಬೆಲ್ತೂರು. ಶ್ರೀ ಅರುಣ್ ಪಟವರ್ಧನ್, ಯೋಜನಾ ವ್ಯವಸ್ಥಾಪಕರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ. ಗಿರಿಜಾ, ಹಿರಿಯ ಶಿಕ್ಷಕಿ ಹಿರಿಯ ಪ್ರಾಥಮಿಕ ಶಾಲೆ,ಸುಳ್ಸೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಮಹಾವಿಷ್ಣು ಯುವಕ ಮಂಡಲದ ಸದಸ್ಯರಾದ ಶ್ರೀ ನರಸಿಂಹ ಸ್ವಾಗತಿಸಿದರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ಕಾರ್ಯಕ್ರಮ ಸಂಯೋಜಕರಾದ ರಾಘವೇಂದ್ರ ಆಚಾರ್ಯ ನಿರೂಪಿಸಿ ವಂದಿಸಿದರು.

error: