March 25, 2024

Bhavana Tv

Its Your Channel

ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ರೂಪದರ್ಶಿಗಳಿಂದ ನೂತನ ಮಾದರಿಯ ಕಾಂಜಿವರO ಸೀರೆಗಳ ಬಿಡುಗಡೆ.

ಕಾರ್ಕಳ: ಅವಿಭಜಿತ ದ.ಕ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ರೂಪದರ್ಶಿಗಳಿಂದ ನೂತನ ಮಾದರಿಯ ಕಾಂಜಿವರo ಸೀರೆಗಳ ಬಿಡುಗಡೆ ಕಾರ್ಯಕ್ರಮವು ನವೆಂಬರ್ ೮ ರಂದು ಖಾಸಗಿ ವಾಹಿನಿಯ ಸಹಯೋಗದೊಂದಿಗೆ ಜೋಡುರಸ್ತೆಯ ಪೂರ್ಣೆಮಾ ಸಮೂಹಸಂಸ್ಥೆಯ ಹಿರಿಯರಾದ ಉಮಾನಾಥ ಪ್ರಭು , ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು ಸಮಾರಂಭದ ಅಧ್ಯಕ್ಷತೆ ವಹಿಸಿದ ನಿಟ್ಟೆ ವಿದ್ಯಾಲಯದ ರಿಜಿಸ್ಟಾçರ್ ಯೋಗಿಶ್ ಹೆಗಡೆ ಅವರು ಮಾತನಾಡುತ್ತಾ ಪೂರ್ಣಿಮಾ ಪಾಡುರಂಗ ಪ್ರಭುರವರ ಯೋಜನೆ ಹಾಗೂ ಯೋಚನೆಯನ್ನು ಇಂದು ರವಿಪ್ರಕಾಶ ಪ್ರಭುರವರು ನೆರವೇರಿಸಿ ಜೋಡುರಸ್ತೆ ಯ ಪೂರ್ಣೆಮಾ ಸಿಲ್ಕ್ಸ್ ನಲ್ಲಿ ಜನಮನ್ನಣೆ ಗಳಿಸಿದ್ದಾರೆ.ಎಂದು ತಿಳಿಸಿದ್ದರು ಮುಖ್ಯ ಅತಿಥಿಯಾಗಿ ಎಸ್ವಿಟಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಉಷಾ ನಾಯಕ್, ಕಾರ್ಕಳ ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ , ಬಿಜೆಪಿ ಕಾರ್ಕಳ ನಗರ ಅಧ್ಯಕ್ಷ ಅನಂತಕೃಷ್ಣ ಶೆಣೈ, ಕಾರ್ಕಳ ಗ್ರಾಮಂತರ ಠಾಣೆಯ ಪೋಲಿಸ್ ಅಧಿಕಾರಿ ನಾಸೀರ್ ಅಹಮದ್, ಉದ್ಯಮಿಗಳಾದ ಭರತ ಶೆಟ್ಟಿ , ಕಿಶೋರ್ , ಪೂರ್ಣಿಮಾ ಸಮೂಹ ಸಂಸ್ಥೆಯ ದಿನೇಶ ಪ್ರಭು ಹರಿಪ್ರಸಾದ ಪ್ರಭು ಉಪಸ್ಥಿತರಿದ್ದರು. ಸಮಾರಂಭದ ಅಂಗವಾಗಿ ಜೋಡುರಸ್ತೆಯ ಹೋಟೆಲ್ ಉಷಾ ಸಭಾಂಗಣದಲ್ಲಿ ಮಿಸ್ ಪೂರ್ಣಿಮಾ, ಮಿಸಸ್ ಪೂರ್ಣಿಮಾ, ಆರ್ದಶ ದಂಪತಿ, ಮಕ್ಕಳಿಗಾಗಿ ಗೇಮ್ ಶೋಗಳು ದಿನಪೂರ್ತಿ ನಡೆಯಿತು. ಭಾರತದ ಬೇರೆ ಬೇರೆ ಪ್ರದೇಶದ ಹಿಂದೂ ,ಕ್ರಿಶ್ಚಿಯನ್, ಮುಸ್ಲಿಂ ಇನ್ನಿತರ ಪಂಗಡಗಳ ವಧುಗಳ ಅಲಂಕಾರೆದಲ್ಲಿ ರೇಷ್ಮೆ ಸೀರೆಗಳು , ಲೆಹೆಂಗ್ , ಕುರ್ತ, ಗ್ರಾಗಚೋಲಿ, ಬ್ರೆöÊಡಲ್ ಡ್ರೆಸ್ಗಳೊಂದಿಗೆ ಹಾಗೂ ವೆಸ್ಟನ್ ಡ್ರೆಸ್ಗಳಲ್ಲಿ ಜಗಮಿಸಿದರು. ಪೂರ್ಣೆಮಾ ಸಿಲ್ಕ್÷್ಸ ಪಾಲುದಾರರಾದ ರವಿಪ್ರಕಾಶ ಪ್ರಭು ರವರು ಸಂತೃಪ್ತ ಗ್ರಾಹಕನೇ ಶಾಶ್ವತ ಆಸ್ತಿ ಗ್ರಾಹಕರ ಆರ್ಶಿವಾದವೇ ಶ್ರೀರಕ್ಷೆ ಎಂದರು. ೧ ನೇ ವಾರ್ಷಕೋತ್ಸವದ ಅಂಗವಾಗಿ ದೀಪಾವಳಿ ಹಬ್ಬದ ಸಲಿವಾಗಿ ಎಲ್ಲಾ ಗ್ರಾಹಕ ಬಂಧುಗಳಿಗೆ ೧೦% ವಿಶೇಷ ರಿಯಾಯಿತಿ ಫೋಷಿಸಿದರು. ಸಂಸ್ಥೆಯ ಲಾಭಾಂಶದ ಒಂದು ಬಾಗವನ್ನು ಬಡವರ ಶಿಕ್ಷಣಕ್ಕೆ ವಿನಿಯೋಗ ಮಾಡುವುದಾಗಿ ತಿಳಿಸದರು. ಕಿರಣ ರವಿಪ್ರಕಾಶ ಪ್ರಭು ರವರು ವಿಜೇತರಿಗೆ ಬಹುಮಾನ ವಿತರಿಸಿದರು. ಜೇಸಿ ರಾಷ್ಟಿಯ ತರಬೇತುದಾರ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ವಾಹಿನಿಯ ಕುಮಾರಿ ಸೌಮ್ಯ ಕೋಟ್ಯಾನ್ ಸ್ಪರ್ಧೆಗಳನ್ನು ನಡೆಸಿದರು. ತೀಪುಗಾರರಾಗಿ ಚಲನಚಿತ್ರ ನಟಿ ರಕ್ಷಾ ಶೆಣೈ , ಮಾಲಿನಿ ಶೆಟ್ಟಿ ಮತು ಅನುಷಾ ಪ್ರಭು ಸಹಕರಿಸಿದರು. ರೂಪದರ್ಶಿಗಳ ರೂಪವಿನ್ಯಾಸಕಾರರಾಗಿ ಶಿಲ್ಪಾ ಕಿಣಿ ಮತ್ತು ರಾಖಿ ಭಟ್ ರವರು ಭಾಗವಹಿಸಿದ್ದರು. ಶಿವ ಜಾಹೀರಾತು ಸಂಸ್ಥೆಯ ಮಾಲಿಕ ವರದರಾಯ ಪ್ರಭು ಧನ್ಯವಾದ ಅರ್ಪಿಸಿದರು.

error: