April 20, 2024

Bhavana Tv

Its Your Channel

ಟಿಪ್-ಟಾಪ್ ಆಗಿ ಬರ್ತಾನೆ, ರೈಲ್ವೆಯ ಟಿ.ಸಿ. ಅಂತಾನೆ:ಇವನ ಮಾತು ನಂಬಿದರೆ ನಿಮಗೆ ಬೀಳುತ್ತದೆ ಪಂಗನಾಮ..!

ಉಡುಪಿ: ಕೊಂಕಣ ರೈಲ್ವೆ ಇಲಾಖೆಯಲ್ಲಿ ತಾನು ಟಿಸಿ ಆಗಿ ರ‍್ತವ್ಯ ನರ‍್ವಹಿಸುತ್ತಿದ್ದು ಇತರರ ಬಳಿ ಬಂದು ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಹಾಗೂ ದಾಖಲೆ ಪಡೆದು ವಂಚಿಸುತ್ತಿದ್ದ ಖರ‍್ನಾಕ್ ಆರೋಪಿಯನ್ನು ಉಡುಪಿ ಆರ್‌ಪಿಎಫ್ ಮತ್ತು ಪೊಲೀಸರು ಜಂಟಿಯಾಗಿ ಕರ‍್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಗಣೇಶ್ ನಾಯ್ಕ್ ಬಂಧಿತ ಆರೋಪಿ. ಈತ ಮಣಿಪಾಲ ಕೆ.ಎಂ.ಸಿ ಯಲ್ಲಿ ಸೆಕ್ಯೂರಿಟಿ ಗರ‍್ಡ್ ಆಗಿರುವ ವ್ಯಕ್ತಿಯೊಬ್ಬರು ಹಾಗೂ ರ‍್ಕಳ ಮಹಿಳೆಗೆ ಇದೇ ರೀತಿ ಯಾಮಾರಿಸಿದ್ದರು. ಈ ಪ್ರಕರಣದಲ್ಲಿ ಆರೋಪಿ ತಾನು ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿ.ಸಿ ಆಗಿ ಕೆಲಸ ಮಾಡಿಕೊಂಡಿದ್ದು ಎಂದು ಹೇಳಿಕೊಂಡು ಉಡುಪಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ ಸರ‍್ವಜನಿಕರನ್ನು ನಂಬಿಸಿ ಅವರ ಬಳಿ ಹಣ ಮತ್ತು ದಾಖಲಾತಿಯ್ನ ಪಡೆದುಕೊಂಡ ವಂಚಿಸಿ ಸರ‍್ವಜನಿಕರಿಗೆ ಮೋಸ ಮಾಡಿದ್ದ.ಉಡುಪಿ, ಕರ‍್ಕಲಾ, ಅಂಕೋಲಾ ಮತ್ತು
ಭಟ್ಕಳ,ಕಾರವಾರ ಹುಡುಗಿಯರು ಮತ್ತು ಹುಡುಗರನ್ನು
ಹಲವಾರು ನಿರುದ್ಯೋಗಿ ಮೋಸ ಮಾಡಿದ್ದು,
ಈ ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ಹುಬ್ಬಳ್ಳಿಯಲ್ಲಿ ಬಂಧಿಸಲಾಗಿತ್ತು ಎನ್ನಲಾಗಿದೆ.
ಕರ‍್ಯಾಚರಣೆಯಲ್ಲಿ ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ,ರೈಲ್ವೆ ಪೊಲೀಸ್ ಇನ್ಸ್‌‌ಪೆಕ್ಟರ್ ಸಂತೋಷ್ ಗಾಂವ್ಕರ್,ಉಡುಪಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕಗಳಾದ ಸಕ್ತಿವೇಲು.ಇ ಮತ್ತು ವಾಸಪ್ಪ ನಾಯ್ಕ ಒಳಗೊಂಡ ವಿಶೇಷ ತಂಡವನ್ನು ರಚಿಸಿ ಆರೋಪಿಯನ್ನು ಬಂಧಿಸಿಲಾಗಿದೆ.ಈ‌ ಸಂರ‍್ಭದಲ್ಲಿ
ರೈಲ್ವೆ ಪೊಲೀಸ್ ಸಿಬ್ಬಂದಿಗಳು ಹಾಗೂ ಪೋಲಿಸ್ ಸಿಬ್ಬಂದಿಗಳು ಪತ್ತೆ ಕರ‍್ಯದಲ್ಲಿ ಸಹಕರಿಸಿದ್ದರು.

error: