May 11, 2021

Bhavana Tv

Its Your Channel

ಉದಯ ಕುಮಾರ್ ಹೆಗ್ಡೆ ಯರ್ಲಪಾಡಿ ಬಿಜೆಪಿಗೆ ಸೇರ್ಪಡೆ

ಕಾರ್ಕಳ ; ಬೈಲೂರು ಭಾಗದ ಪ್ರಭಾವಿ ಕಾಂಗ್ರೆಸ್ ಮುಖಂಡ ಯರ್ಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕಾರ್ಕಳ ತಾಲೂಕು ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯ, ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಮಾಜಿ ಅಧ್ಯಕ್ಷ, ಬೈಲೂರು ಸರಕಾರಿ ಪ್ರೌಢ ಶಾಲೆಯ ಅಭಿವೃದ್ದಿ ಸಮಿತಿಯ ಮಾಜಿ ಅಧ್ಯಕ್ಷ, ಬೈಲೂರು ಸರಕಾರಿ ಪ್ರೌಧಶಾಲೆ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ, ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ಉಸ್ತುವಾರಿ ಸಮಿತಿಯ ಮಾಜಿ ಅಧ್ಯಕ್ಷ, ಯರ್ಲಪಾಡಿ ಗ್ರಾಮದ ಗರಡಿ ಜೀರ್ಣೋದ್ಧಾರ ಸಮಿತಿಯ ಕರ‍್ಯದಶಿ, ಬೈಲೂರು ಕೃಷಿ ಸಹಕಾರಿ ಬ್ಯಾಂಕಿನ ನಿರ್ದೆðಶಕರು ಮತ್ತು ಲಯನ್ಸ್ ಕ್ಲಬ್ ನ ಪ್ರಾಂತೀಯ ಅಧ್ಯಕ್ಷರು ಹಾಗೂ ಬೈಲೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಉಸುವಾರಿಯೂ ಆಗಿರುವ ಪ್ರಭಾವಿ ಮುಖಂಡ ಹಾಗೂ ಸಮಘಟಕ ಯರ್ಲಪಾಡಿ ಉದಯಕುಮಾರ ಹೆಗ್ಡೆ ರವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶಾಸಕ ವಿ ಸುನೀಲ್ ಕುಮಾರ್ ರವರು ಉದಯಕುಮಾರ್ ಹೆಗಡೆ ರವರಿಗೆ ಪುಷ್ಪ ನೀಡಿ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಈ ಕರ‍್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದು ಅವರ ಬಗ್ಗೆ ಬೆಂಗಳೂರು ಉದ್ಯಮಿ ದಕ್ಷಣ ಕನ್ನಡ ಜಿಲ್ಲಾ ದಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗಡೆ, ಚಂದ್ರಶೇಖರ ಮಾಡ ಬೈಲೂರ, ನಂದಕುಮಾರ ಹೆಗಡೆ ಅಜೆಕಾರು, ಅಧ್ಯಕ್ಷರಾದ ಮಹಾವೀರ್ ಹೆಗಡೆ ಮಾತನಾಡಿದರು. ಕರ‍್ಯಕ್ರಮದಲ್ಲಿ ಬೈಲೂರು ಜಿ.ಪಂ ಸದಸ್ಯ ಸುಮಿತ್ ಶೆಟ್ಟಿ, ಬೈಲೂರು ವಿಕ್ರಮಾರ್ಜುನ ಹೆಗಡೆ, ಬೈಲೂರು ಶಕ್ತಿ ಕೇಂದ್ರ ಅಧ್ಯಕ್ಷ ಸುಚೀಂದ್ರ ನಾಯಕ್, ಬಿಜೆಪಿ ಪ್ರಧಾನ ಕರ‍್ಯದರ್ಶಿಗಳಾದ ಬೋಳ ಜಯರಾಮ್ ಸಾಲಿಯಾನ್, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಬಿ.ಜೆ.ಪಿ ಜಿಲ್ಲಾ ಕರ‍್ಯದರ್ಶಿ ರವೀಂದ್ರ ಕುಮಾರ್ ಹಾಗೂ ನೂರಾರು ಕರ‍್ಯಕರ್ತರು ಕರ‍್ಯಕ್ರಮದಲ್ಲಿ ಬಾಗವಹಿಸಿದ್ದರು.

error: