May 11, 2021

Bhavana Tv

Its Your Channel

ಕಾಂಗ್ರೆಸ್ ಮುಖಂಡರಾದ ಹರ್ಷ ಮೊಯ್ಲಿ ಅವರಿಂದ ಪತ್ರಿಕಾಗೋಷ್ಠಿ

ಕಾರ್ಕಳ ; ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹರ್ಷ ಮೊಯ್ಲಿ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು

ಇದೇ ತಿಂಗಳು೨೨.೨೭, ಕಾರ್ಕಳ ತಾಲೂಕು ಹೆಬ್ರಿ ತಾಲೂಕಿನಲ್ಲಿ ೩೪ ಕಡೆ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತದೆ. ಈ ಸಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಸಿದ್ದಾಂತ ಒಪ್ಪಿಕೊಳ್ಳುವ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇವೆ. ಎಲ್ಲ ಪಕ್ಷದ ಬುನಾದಿ ಗ್ರಾಮ ಪಂಚಾಯತ್ ಚುನಾವಣೆ. ಆದುದರಿಂದ ನಾವು ಈ ಸಲ ಅತಿಹೆಚ್ಚಿನ ಗ್ರಾಮ ಪಂಚಾಯತ್ ಗಳಲ್ಲಿ ವಿಜಯ ಸಾಧಿಸುತ್ತೇವೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ಮುಂದೆ ಬರುವ ತಾಲೂಕು ಪಂಚಾಯಿತಿ , ಹಾಗೂ ಜಿಲ್ಲಾ ಪಂಚಾಯತಿ, ಚುನಾವಣೆಗಳಿಗೆ ಕೂಡ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ . ಜನರು ಬಿಜೆಪಿ ಸರಕಾರದ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುಧಾಕರ್ ಕೋಟ್ಯಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ, ಮಂಜುನಾಥ ಪೂಜಾರಿ, ಹಾಗೂ ಬಿಪಿನ್ ಚಂದ್ರ ಪಾಲ್ ಉಪಸ್ಥರಿದ್ದರು.

error: