April 19, 2024

Bhavana Tv

Its Your Channel

ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ.

ಬೈಂದೂರು: ಅಖಿಲ ಭಾರತ ಮೀನುಗಾರರ ಮತ್ತು ಮೀನು ಕಾಮಿ೯ಕರ ಫೆಡರೇಷನ್ ನವದೆಹಲಿಗೆ ಸಂಯೋಜಿಸಲ್ಪಟ್ಟ ಬೈಂದೂರು ವಲಯ ಮೀನುಗಾರರ ಮತ್ತು ಮೀನು ಕಾಮಿ೯ಕರ ಸಂಘ ಉಪ್ಪುಂದಘಟಕ(ಸಿಐಟಿಯು)ನೇತೃತ್ವದಲ್ಲಿ ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಮೀನುಗಾರರು ಪ್ರತಿಭಟನೆ ಜರಗಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಕೋಣಿ ಮಾತನಾಡಿ,ಕರಾವಳಿ ಪ್ರದೇಶದಲ್ಲಿ ಮೀನುಗಾರರ ಪಂಜರ ಕೃಷಿ ಮೀನು ಲಕ್ಷಾಂತರ ಸಂಖ್ಯೆಯಲ್ಲಿ ಮೃತಪಟ್ಟ ಘಟನೆ ಬಗ್ಗೆ ವಿವಿಧ ಕ್ಷೇತ್ರಗಳ ವಿಷಯ ಪರಿಣತರಿಂದ ಕಾರಣ ಹುಡುಕಿ ಮೀನುಗಾರರಿಗೆ ನಷ್ಟ ಪರಿಹಾರವನ್ನು ಸರಕಾರ ಈ ಕೂಡಲೆ ಬಿಡುಗಡೆ ಮಾಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೀನುಗಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಶಂಕರ, ಮುಖಂಡರಾದ ರಾಮಖಾವಿ೯, ವಿಠಲ ಖಾವಿ೯,ಗಣೇಶ ಮೊಗವೀರ ಬೈಂದೂರು, ಜ್ಯೋತಿ ಮೊಗವೀರ ಉಪ್ಪುಂದ,ಶ್ರೀಧರ ನಾಡ,ಮಂಜ ಪೂಜಾರಿ ದೊಂಬೆ ಪಡುವರಿ ಮತ್ತಿತರರು ಹಾಜರಿದ್ದರು

error: