May 11, 2021

Bhavana Tv

Its Your Channel

“ವಿಕಲ ಚೇತನರ ದಿನಾಚಾರಣೆ” ಅಂಗವಾಗಿ ವಿಕಲ ಚೇತನರ ಸಬಲೀಕರಣದ ಕುರಿತು ಮಾಹಿತಿ ಕಾರ್ಯಕ್ರಮ

ಕಾರ್ಕಳ: ತಾಲ್ಲೂಕು ಕಾನೂನು ಸೇವೆಗಳ ಸಮಿತಿ,ಕಾರ್ಕಳ, ನ್ಯಾಯವಾದಿಗಳ ಸಂಘ,ಕಾರ್ಕಳ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಕಾರ್ಕಳ, ಹಾಗೂ ವಿಜೇತ ವಿಶೇಷ ಶಾಲೆ, ಕುಕ್ಕುಂದೂರು, ಕಾರ್ಕಳ ಇವರ ಸಂಯುಕ್ತಾಶ್ರಯದಲ್ಲಿ “ವಿಕಲ ಚೇತನರ ದಿನಾಚಾರಣೆ” ಅಂಗವಾಗಿ ವಿಕಲ ಚೇತನರ ಸಬಲೀಕರಣದ ಕುರಿತು ಮಾಹಿತಿ ಕಾರ್ಯಕ್ರಮ ವನ್ನು ವಿಜೇತ ವಿಶೇಷ ಶಾಲೆಯಲ್ಲಿ ನಡೆಸಲಾಯಿತು. ಶ್ರೀ ಪುಟ್ಟರಾಜು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯಕಾರ್ಯದರ್ಶಿ, ತಾಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಕಳ ಇವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕು.ದೀಕ್ಷಾ ವಿಕಲಚೇತನರ ಸಬಲೀಕರಣದ ಕುರಿತು ಮಾಹಿತಿ ನೀಡಿದರು. ಡಾ.ಕಾಂತಿ ಹರೀಶ್ ಸಂಸ್ಥಾಪಕರು ವಿಜೇತ ವಿಶೇಷ ಶಾಲೆ,ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕೆ.ಕೃಷ್ಣ ಶೆಟ್ಟಿ ಉಪಾಧ್ಯಕ್ಷರು, ನ್ಯಾಯವಾದಿಗಳ ಸಂಘ,ಕಾರ್ಕಳ, ಹಾಗೂ ಶ್ರೀಮತಿ ರತ್ನಾ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ,ಇವರು ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದರು.ಶ್ರೀ ಕೆ ರಾಧಾಕೃಷ್ಣ ಶೆಟ್ಟಿ ಅಧ್ಯಕ್ಷರು ಶ್ರೀ ದುರ್ಗಾ ವಿದ್ಯಾ ಸಂಘ, ಶ್ರೀ ಸಿಯಾ ಸಂತೋಷ್ ನಾಯಕ್ ಅಧ್ಯಕ್ಷರು ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ .ರಿ. ಮತ್ತು ಶ್ರೀ ಕಿರಣ್ ಶೆಟ್ಟಿ ಟ್ರಸ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. . ಈ ಸಂಧರ್ಭದಲ್ಲಿ ವಿಜೇತ ವಿಶೇಷ ಶಾಲೆಯ ಮಕ್ಕಳು , ಪೋಷಕರು, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: